ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Sculpture - 1940s Vintage Mother and Child Sculpture | Chairish

ವಿನಿ ಬೆಂಗಳೂರು

ಪ್ರಕೃತಿಯೇ ತಾನಾಗಿ ಸೌಂದರ್ಯ ತುಂಬಿದವಳು ತಾಯಿ
ಭೂಮಿಯೇ ಅವಳಾಗಿ ಭಾರವನು ಹೊತ್ತವಳು ತಾಯಿ

ಸಾವಿಗೂ ಹೆದರದೆ ಹೆರಿಗೆ ನೋವ ನುಂಗುವಳು ತಾಯಿ
ಸಾವಿರ ಕನಸು ಕಂಡು ಮಗುವಿನ ಒಳಿತ ಬಯಸುವವಳು ತಾಯಿ

ಭವಿಷ್ಯದ ಉತ್ತಮ ವ್ಯಕ್ತಿಯಾಗಲು ಶ್ರಮಿಸುವಳು ತಾಯಿ
ಅಕ್ಷರೆ ಪ್ರೀತಿ ಮಮತೆಯ ಧಾರೆ ಎರೆದು ಬೆಳೆಸುವಳು ತಾಯಿ

ತನ್ನೆಲ್ಲ ನೋವ ಮರೆತು ನಗುತ ಮುದ್ದು ಮಾಡುವವಳು ತಾಯಿ
ಕಷ್ಟವೆಲ್ಲವನು ತಾನೆ ಅನುಭವಿಸುತ ತನ್ನ ಕುಡಿಗಾಗಿ ದುಡಿದವಳು ತಾಯಿ

ತನ್ನೆಲ್ಲ ವಾತ್ಸಲ್ಯವನು ಉಣಿಸಿ ಬೆಳೆಸುವವಳು ತಾಯಿ
ವಿಜಯಳ ಬಾಳಲಿ ಬೆಳಂದಿಗಳಂತೆ ಬೆಳಗಿದವಳು ತಾಯಿ

***********

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top