ನಮ್ಮಯ ಬದುಕು
ಮಲಿಕಜಾನ ಶೇಖ
ಹಂಸಮ್ಮಾ ಬಂದಳು ಹಂಸಮ್ಮಾ
ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ
ಶ್ವೇತ ಬಣ್ಣ ನನ್ನದು
ಹಾಲು-ಮೀನು ಕಂಡರೆ ನಾನು
ಕರಿವೆ ಎಂದಳು ಮಕ್ಕಳ-ಮರಿಯನ್ನು.
ಹುಂಜಪ್ಪಾ ಬಂದನು ಹುಂಜಪ್ಪಾ
ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ
ತೆಲೆಯಲಿ ಫುಂಜ ನನ್ನದು
ಹುಳವ-ಗಿಳವ ಕಂಡರೆ ನಾನು
ಕರಿವೆ ಎಂದನು, ಹೆಂಡತಿ ಮಕ್ಕಳನು.
ಕಾಗಣ್ಣ ಬಂದ ಕಾಗಣ್ಣ
ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ
ಕಪ್ಪು ಬಣ್ಣದು ನನ್ನದು
ಅನ್ನದ ಅಗಳ ಕಂಡರೆ ನಾನು
ಕರಿವೆ ಎಂದನು, ಬಂಧು-ಬಳಗವನು.
ಗುಬ್ಬಕ್ಕಾ ಬಂದಳು ಗುಬ್ಬಕ್ಕಾ
ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ
ಗುಬ್ಬಿ ಗೂಡು ನನ್ನದು
ವೈರಿ-ಗಿರಿಯ ಕಂಡರೆ ನಾನು
ಕರಿವೆ ಎಂದಳು ಎಲ್ಲರನು.
ಬೇಡಣ್ಣಾ ಬಂದಾ ಬೇಡಣ್ಣಾ
ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ
ಮೋಸದ ಬಲೆಯು ನನ್ನದು
ಕಾಳನು ತಿನ್ನುತ್ತಾ ಕಂಡರೆ ನಾನು
ತಿನ್ನುವೆ ಬೇಯಿಸಿ ನಿಮ್ಮನ್ನು.
ಹಾರುತ ಬಂದವು ಹಕ್ಕಿಗಳು
ಕರಕರ ಕೊಕ್ಕನ್ನು ಕೆರೆಯುತ್ತಾ
ನಮ್ಮಯ ಬದುಕು ನಮಗೆ ಬೀಡು
ಸುಮ್ಮನೆ ಹೋಗೊ ಬೇಡಣ್ಣಾ
ಇಲ್ಲದಿರೆ…..?
ಕರಿವೆವು ನಾವು ಕೊರೋನಾ .. ಕೊರೋನಾ…
*******