ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23
ಆತ್ಮಾನುಸಂಧಾನ
ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ…
ಧರೆ ಹತ್ತಿ ಉರಿದೊಡೆ
ಲೇಖನ ಧರೆ ಹತ್ತಿ ಉರಿದೊಡೆ ಜಯಶ್ರೀ.ಜೆ.ಅಬ್ಬಿಗೇರಿ ರಾತ್ರಿ ಹನ್ನೆರಡು ಹೊಡೆದರೂ ಹಾಡು ಹಗಲಿನಂತೆ ಕಿಕ್ಕಿರಿದು ಜನ ತುಂಬಿರುತ್ತಿದ್ದ ಬೀದಿಗಳೆಲ್ಲ ಬಿಕೋ ಎನ್ನುತ್ತಿವೆ. ಸಂಖ್ಯೆಗೆ ಸಿಗದಷ್ಟು ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಉರಿದು ಹೋಗುತ್ತಿವೆ.ಇದೊಂಥರ ಮರದಲ್ಲಿನ ಹಣ್ಣು ಉದುರಿ ಬೀಳುವಂತೆ ಬೀಳುತ್ತಿವೆ. ಅಳಿದುಳಿದ ಕಾಯಿಗಳ ಹಣ್ಣುಗಳ ದುಃಖ ಅರಣ್ಯರೋಧನವಾಗಿದೆ. ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ.ಇಂಥದ್ದೊಂದು ದಿನ ಬರುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಜೀವನ ಹಿಡಿತಕ್ಕೆ ಸಿಗದಂತಾಗಿದೆ. ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿದೆ.ಬದುಕನ್ನು ಯಾವ ಕಡೆಯಿಂದ ನಿಯಂತ್ರಿಸಿದರೆ ಹಿಡಿತಕ್ಕೆ ಸಿಗಬಹುದು ಎಂಬುದು ಯಕ್ಷ […]
ನಾನು ನಾನೆಂದು ಬೀಗಿ
ಕವಿತೆ ನಾನು ನಾನೆಂದು ಬೀಗಿ ಅಭಿಜ್ಞಾ ಪಿ ಎಮ್ ಗೌಡ ಎಲ್ಲೆಲ್ಲೂ ಚಿತಾಗಾರಸ್ಮಶಾನಗಳ ದರ್ಬಾರುಬಲುಜೋರು ಜೋರು.!ಬೀದಿ ಬೀದಿಗಳಲ್ಲಿಸಾಲುಸಾಲು ಶವಗಳ ದಿಬ್ಬಣಚಿತಾಭಸ್ಮದ ಕಾಯಕಲ್ಪಕೆಮುಖಮಾಡಿ ನಿಂತಿವೆ…. ವಿಧಿಯಿಲ್ಲದೆಮುಷ್ಕರ ಹೂಡಲುಹೆಣಗಳ ರಾಶಿಗಳುಸ್ಮಶಾನದವಿಳಾಸಕಾಗಿ ಅರ್ಜಿ ಹಾಕುತಿವೆ…ಅಹಿಂಸೆಯ ಅಹವಾಲುದೇವರ ಅವಗಾಹನೆಗೆಕೊಡಲು ತಾ ಮುಂದು ನಾ ಮುಂದೆಂದು… ಅವಕ್ಕಾದಭಂಡಗೇಡಿ ರಣಹದ್ದುಗಳುಬಾಯ್ಬಿಡದ ಗಿಡುಗಗಳ ಮಾಂತ್ರಿಕತೆಚಾಟಿ ಏಟಿನ ಮಾತಿಗೆಪುದುರುಗುಟ್ಟಿವಿಲವಿಲಗುಟ್ಟಿರಲು… ಒಡ್ದೋಲಗದಮಾರ್ಯಾದೆ ಹರಾಜಾಗುತಿದೆಸಣ್ಬುದ್ಧಿ ಸ್ವಾರ್ಥದೊಳುರಕ್ತ ಬೀಜಾಸುರರ ಸಾಮ್ರಾಜ್ಯಕಂಪಿಸುತಿದೆಎಂಟದೆಯ ಭಂಟನಂತಿರುವಭೂಪನಿಂದ… ರುಜುವಾತು ಮಾಡುತಿದೆಉಚ್ಛಿಷ್ಠಕಾಗಿ ಕೈಚಾಚಿದಪುಂಡತನದ ವಕೌಸಗಳ!ಆಸೆಬುರುಕಕೀಚಕಗಳನು ಚಂಡಾಡಿಹುರುಳಿಸಲು ಸಜ್ಞಾಗುತಿದೆ…. ನಾನು ನಾನೆಂದು ಮರೆದದುಷ್ಟ ನೀಚನಹಂಕಾರಮಣ್ಣುಮುಕ್ಕುತಿದೆ….ಗಹಗಹಿಸುತಿವೆ ಕಾಷ್ಠಗಳುಶಪಿಸುತಿದೆ ಧರಣಿ.!ವಹ್ನಿಯೊಂದಿಗೆ ಸಲಿಲವುಸಾಥು ಕೊಟ್ಟು ನಗುತಿರಲುಅವನಳಿವಿನಂಚು […]
ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ […]
ತೂರಾಡುತಿದೆ ದೀಪ
ತೂರಾಡುತಿದೆ ದೀಪ
ತೋರಿ ತೋರಿ
ಬಿಡು ಹಳಿ ಛಾಳಿಯ
ರಾತ್ರಿ ಗರ್ಭಗಳು ನಂಜೇರಿ
ವಿಲವಿಲನೇ ಒದ್ದಾಡುತಿವೆ
ಕೊರೊನಾಕಾಲದಕವಿತೆ
ಈಗ ಬೇಕಿರುವುದು
ಬಿಸಿಯುಸಿರು
ನನಗೂ ಮತ್ತೆ ನಿನಗೂ
ಮುಜುಗರ ,ನಾಚಿಕೆಗಳಿದ್ದರೆ
ವಾಪಸ್ಸು ಹೋಗು
ಅಕ್ವೇರಿಯಮ್ ಮತ್ತು ಚಿತ್ರ
ದಿಟ್ಟಿಸುತ್ತಾ ಎದುರಿಗಿದ್ದ ಅಕ್ವೇರಿಯಮ್ ಮೀನು
ಸಂತಸದಿಂದ ಹೇಳಿಕೊಂಡ-
ಅವನ ಭಾವಗಳಿಗೆ ಮುಖವಿಲ್ಲ
ಅವನ ಆಸೆಗಳಿಗೆ ಕಣ್ಣಿಲ್ಲ
ಅವನ ಬಯಕೆ ಚಳಿಗಾಲದ ಬಿಸುಪು
ಬೇಸಿಗೆಯ ತಂಪು
ವಿರಹ ವೇದನೆ
ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//