ವಿರಹ ವೇದನೆ

ಕವಿತೆ

ವಿರಹ ವೇದನೆ

ಭಾರತಿ ಕೇ ನಲವಡೆ

Love, Rage, Mourning, Hatred, Escape

ನಿನ್ನೊಲವ ದೋಣಿಯಲಿ ನಾವಿಕನಾಗಿಹೆನು
ಹೃದಯದ ಮಿಡಿತದಲ್ಲಿ ನಿನ್ನ ನೆನಪೆ ಸುಂದರ
ಮೇಳೈಸುತಿದೆ ಭಾವಯಾನದಲಿ ಮುಂಗಾರಸೋನೆಯಾಗಿ
ಕ್ಷಣಕ್ಷವೂ ಯುಗವಾಗುತಿದೆ ಗೆಳತಿ ಕಾದಿಹೆನು ನಿನಗೆ//

ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//

ನಿನ್ನ ಬಿಸಿಯುಸಿರು ಸೋಕಿ ನನ್ನ ಮನದ ಕದ ತಟ್ಟಿದ ಕ್ಷಣ
ಮತ್ತೆ ಮತ್ತೆ ನೆನಪಾಗಿ ನಿನ್ನ ಭೇಟಿಯಾಗಲು ಕಾತರಿಸಿದೆ
ಯಾಕೆ ದೂರಾಗುತಿಹೆ ಪ್ರಿಯೆ
ನಾ ಇನ್ನು ನಿನ್ನ ಕಾಯಿಸೆನು
ಹುಸಿಮುನಿಸ ತೋರದೇ ಒಂದಾಗಬಾರದೇ ?//

ಅರಳಿದ ಹೂಗಳಿಂದು ನಿನ್ನ ನಗುವ ನೆನಪಿಸಿವೆ
ನಾ ಕೊಟ್ಟ ಗೆಜ್ಜೆಯ ನಾದವಿಂದು ಘಲ್ ಎನ್ನುತ್ತಿಲ್ಲ
ನಾ ನೀಡಿದ ಜಂಗಮವಾಣಿ ನನ್ನ ಕರೆಯ ನಿರಾಕರಿಸುತಿದೆ
ಮರೆಯಬೇಕೆಂದರೂ ಮರೆಯಲಾಗದ ಬಂಧ ನಮ್ಮದು//

ರಾಧಾಕೃಷ್ಣರ ಅಮರ ಪ್ರೀತಿಯ ಕಥೆ ಹೇಳಿದೆ
ಇಂದು ನೀನು ಮುದುಡಿದ ತಾವರೆಯಾದೆ
ಆದರೂ ನಿನ್ನ ಹೃದಯ ಕರೆದಿದೆ ಆಲಿಸೆಯಾ ವಿರಹ ವೇದನೆ
ಬಂದು ನನ್ನ ಸೇರು ಇದೊ ನನ್ನದೆ ತಪ್ಪು ಶರಣಾಗಿಹೆ//

********************************************

2 thoughts on “ವಿರಹ ವೇದನೆ

  1. ವಾವ್….ವಿರಹದ ವೇದನೆ ತುಂಬಾ ಚೆಂದ ಬಂದಿದೆ ಗೆಳತಿ

  2. ತುಂಬಾ ಚೆನ್ನಾಗಿ ಮೂಡಿಬಂದಿದೆ ರೀ ಮೇಡಂ

Leave a Reply

Back To Top