ನಾನು ನಾನೆಂದು ಬೀಗಿ

ಕವಿತೆ

ನಾನು ನಾನೆಂದು ಬೀಗಿ

ಅಭಿಜ್ಞಾ ಪಿ ಎಮ್ ಗೌಡ

a person drowns underwater

ಎಲ್ಲೆಲ್ಲೂ ಚಿತಾಗಾರ
ಸ್ಮಶಾನಗಳ ದರ್ಬಾರು
ಬಲುಜೋರು ಜೋರು.!
ಬೀದಿ ಬೀದಿಗಳಲ್ಲಿ
ಸಾಲುಸಾಲು ಶವಗಳ ದಿಬ್ಬಣ
ಚಿತಾಭಸ್ಮದ ಕಾಯಕಲ್ಪಕೆ
ಮುಖಮಾಡಿ ನಿಂತಿವೆ….

ವಿಧಿಯಿಲ್ಲದೆ
ಮುಷ್ಕರ ಹೂಡಲು
ಹೆಣಗಳ ರಾಶಿಗಳು
ಸ್ಮಶಾನದ
ವಿಳಾಸಕಾಗಿ ಅರ್ಜಿ ಹಾಕುತಿವೆ…
ಅಹಿಂಸೆಯ ಅಹವಾಲು
ದೇವರ ಅವಗಾಹನೆಗೆ
ಕೊಡಲು ತಾ ಮುಂದು ನಾ ಮುಂದೆಂದು…

ಅವಕ್ಕಾದ
ಭಂಡಗೇಡಿ ರಣಹದ್ದುಗಳು
ಬಾಯ್ಬಿಡದ ಗಿಡುಗಗಳ ಮಾಂತ್ರಿಕತೆ
ಚಾಟಿ ಏಟಿನ ಮಾತಿಗೆ
ಪುದುರುಗುಟ್ಟಿ
ವಿಲವಿಲಗುಟ್ಟಿರಲು…

ಒಡ್ದೋಲಗದ
ಮಾರ್ಯಾದೆ ಹರಾಜಾಗುತಿದೆ
ಸಣ್ಬುದ್ಧಿ ಸ್ವಾರ್ಥದೊಳು
ರಕ್ತ ಬೀಜಾಸುರರ ಸಾಮ್ರಾಜ್ಯ
ಕಂಪಿಸುತಿದೆ
ಎಂಟದೆಯ ಭಂಟನಂತಿರುವ
ಭೂಪನಿಂದ…

ರುಜುವಾತು ಮಾಡುತಿದೆ
ಉಚ್ಛಿಷ್ಠಕಾಗಿ ಕೈಚಾಚಿದ
ಪುಂಡತನದ ವಕೌಸಗಳ!
ಆಸೆಬುರುಕ
ಕೀಚಕಗಳನು ಚಂಡಾಡಿ
ಹುರುಳಿಸಲು ಸಜ್ಞಾಗುತಿದೆ….

ನಾನು ನಾನೆಂದು ಮರೆದ
ದುಷ್ಟ ನೀಚನಹಂಕಾರ
ಮಣ್ಣುಮುಕ್ಕುತಿದೆ….
ಗಹಗಹಿಸುತಿವೆ ಕಾಷ್ಠಗಳು
ಶಪಿಸುತಿದೆ ಧರಣಿ.!
ವಹ್ನಿಯೊಂದಿಗೆ ಸಲಿಲವು
ಸಾಥು ಕೊಟ್ಟು ನಗುತಿರಲು
ಅವನಳಿವಿನಂಚು ಅವನಿಂದಲೆ……!

****************************************

Leave a Reply

Back To Top