ವಾರದ ಕವಿತೆ

ನೀಲಿಯಾಕಾಶದ ಹೆಸರು

ಆಶಾ ಜಗದೀಶ್

asha jagadeesh

Thunderstorm, Lightning, Flashes, Flash

ಅವನೊಂದು ಅನಂತ ವಿಶ್ವ
ಅದರ ಸರಹದ್ದು ಗುಂಟೆ
ಗುಳೆ ಹೊರಟು ಅಲೆಯಬೇಕೆನಿಸುತ್ತದೆ
ಹದಿನೈದನೆ ದಿನದ
ಕತ್ತಲ ರಾತ್ರಿಯಲ್ಲಿ

ಅವನ ಭಾವಗಳಿಗೆ ಮುಖವಿಲ್ಲ
ಅವನ ಆಸೆಗಳಿಗೆ ಕಣ್ಣಿಲ್ಲ
ಅವನ ಬಯಕೆ ಚಳಿಗಾಲದ ಬಿಸುಪು
ಬೇಸಿಗೆಯ ತಂಪು

ಮುಗಿಯದ ಮಲ್ಲಿಗೆ ದಂಡೆಯ ಸುತ್ತು
ಹೂವಿನಾಳದ ಕಸುರಿನ ನತ್ತು
ಇಳಿದಿರುಷ್ಟೇ ಅವನ ನೆನಪು
ಆಳ ಮತ್ತು ಆರ್ದ್ರ

ಕತ್ತಲ ಸೆರಗಿಗಂಟಿದ ನಕ್ಷತ್ರದ ಕುಚ್ಚು
ತಿರುಗುವ ಬಣ್ಣ ಬಣ್ಣದ ಚೆಂಡುಗಳ
ಒಳಗೊಂದು ಪುಟಿವ ಚೆಂಡು
ಚೆಂಡಿನೊಳಗೊಂದು ಮಿಡಿವ ನಾಡಿ
ಅವನ ನರನಾಡಿ
ಯೊಳಗೊಂದು ಪುಟ್ಟ ವಿಶ್ವ
ಅಗಾಧ ಅಳೆಯಲಾಗದ ಒಲವು

ಅಭಾವವಿಲ್ಲದ ತಾವು
ಅವಿನಾಭಾವ ಬಂಧ
ಅನುಭಾವದ ಅನುಭವ

Balloons, Heart, Sky, Decoration, Party

ಸ್ವಚ್ಛಂದ
ನೀಲಿಯಾಕಾಶದ ಹೆಸರು
ಅವ
ಉಸಿರು

***************************

2 thoughts on “

  1. ಭುವಿ ಬಾನುಗಳ ಒಲವ ಬೆಸುಗೆ ಅಭಿವ್ಯಕ್ತಿಸುವ ಕವಿತೆ

Leave a Reply

Back To Top