ಕವಿತೆ
ಕೊರೊನಾಕಾಲದಕವಿತೆ
ದಾದಾಪೀರ್ ತರೀಕೆರೆ
ಈಗ ಮೊದಲ ಉತ್ಸಾಹ
ಉಳಿದಿಲ್ಲ ಕೊರೊನಾದಿಂದಾಗಿ
ರಸ್ತೆಗಳಲ್ಲಿ ನಿನ್ನ ಸಂಧಿಸುತ್ತಿದ್ದ
ನೆನಪುಗಳ ಹೊರತು
ಏನಿದೆ ಹೇಳು
ಊರು ಮಸಣವಾಗಿ
ಮಸಣ ಊರಾಗಿದೆ
ನಿನ್ನಕಾಯುತ್ತ ನಿಲ್ಲುವ
ಕಾಲವಲ್ಲವಿದು
ಜನಗಳ ಕರ್ಫ್ಯೂ ಸರ್ಕಾರ ನಿಯಂತ್ರಿಸುತ್ತಿದೆ’
ಮನಸ್ಸಿನಿಂದ ಹೊರ ಬಂದಷ್ಟು
ಸಲೀಸಲ್ಲ,
ಮನೆಯಿಂದ ಹೊರ ಬರೋದು
ನಾವು ಮುತ್ತು ಹಾರಿಸುತ್ತಿದ್ದ
ಗಾಳಿಯಲ್ಲಿ ಈಗ ವಿಷದ ವೈರಾಣು
ಸತ್ತು ಬಿದ್ದಿರುವರಸ್ತೆಯ ಮೇಲೆ
ಲಾಠಿಗಳ ಸದ್ದು ಮತ್ತೆಅಂಬ್ಯುಲೆನ್ಸ್ ಗಳ ಸೈರನ್
ನೀನು ಚೂರಿ ಹಿಡಿದು
ಬಿಗಿದಪ್ಪಿದಾಗಲೂ
ಭಯ ಪಡದ ನಾನು
ನಿನ್ನ ಮುಟ್ಟಲು ಈಗ ಹೆದರುತ್ತೆನೆ
ಸ್ಯಾನಿಟೈಜ್ ಮಾಡದ ಕೈಗಳಲ್ಲಿ
ಸಾವು ಹಸ್ತಾಂತರವಾಗುತ್ತಿದೆ.
ಬರೀ ಮಾತಿನಿಂದ ಏನೂ ಪ್ರಯೋಜನ
ಈಗ ಬೇಕಿರುವುದು
ಬಿಸಿಯುಸಿರು
ನನಗೂ ಮತ್ತೆ ನಿನಗೂ
ಮುಜುಗರ ,ನಾಚಿಕೆಗಳಿದ್ದರೆ
ವಾಪಸ್ಸು ಹೋಗು
ಇದುಕೊರೊನಾ ಕಲಿಸಿದ ಬದುಕು
ಕೊನೆಗೊಂದು ಮಾತು
ಮಲಗುವ ಆಶೆಯ ಬಿಟ್ಟು ಬಿಡು’
ಬೆಡ್ ಗಳಿಲ್ಲ ಎಲ್ಲೂ
ನೆಲವು ಚಿತೆಯಾಗಿ ಉರಿಯುತ್ತಿದೆ.
ಸೂಪರ್ ಕವನ ಸರ್