ಬಿಡು ಹಳಿ ಛಾಳಿಯ

ಕವಿತೆ

ಬಿಡು ಹಳಿ ಛಾಳಿಯ

ಯಮುನಾ.ಕಂಬಾರ

Splashing, Splash, Spoon, Aqua, Water

ನಿಲ್ಲು, ಹುಡುಗ
ಕಣ್ಣಿಗೆ ಕಾಮನ ಬಿಲ್ಲು ಕಟ್ಟಿಕೊಂಡು
ಅಲೆವ
ನಿನ್ನ ಹಳಿ ಛಾಳಿಯ ಬಿಡು….!!
ರಾತ್ರಿ ಗರ್ಭಗಳು ನಂಜೇರಿ
ವಿಲವಿಲನೇ ಒದ್ದಾಡುತಿವೆ
ಪ್ರಾಣವಾಯುವಿಲ್ಲದೇ ಉಸುರುಗಟ್ಟಿ ಪ್ರಾಣ ಜಾರುತಿವೆ
ಬಿಡು ನಿನ್ನ ಹಳಿ ಛಾಳಿಯ ….!!

ನೀನು ನೀನೆಂಬ ಬಂಡೆಗಲ್ಲ
ಬಲ ನೋಡು ನುಚ್ಚು ನೂರಾಗಿದೆ
RTC ನೆಗೆಟಿವ್ ಬಂದ್ರೂ
City scan ಪೊಜಿಟಿವ
ಅಂಕೆ ಇಲ್ಲದ BUನಂಬರಿಗೆ
ಸಂಕಲೆ ತೊಡಿಸುವ ಕೈಗಳೇ ಕೂಡದಾಗಿವೆ…..!!
ಬಿಡು ನಿನ್ನ ಹಳಿ ಛಾಳಿಯ

ಈ ನೆಲದಲ್ಲಿ ದಿಕ್ಸೂಚಿಗಳು ಬದಲಾಗಿವೆ
ಬಂದ ಕತ್ತಲನ್ನು
ಬಾಚಿ ತಬ್ಬಿಕೊಂಡಿವೆ
ಕಾವು ಜೋರಾಗಿದೆ ಈ ರಾತ್ರಿಗಳಲ್ಲೇ
ಬಸಿರಾಗುವ ಇರಾದೆ ಅವುಗಳಿಗೆ
ಸುಡುಗಾಡುಗಳಲ್ಲಿ ಹೆಣ ಉರಿದು
ಪ್ರೇತ ಚೀತ್ಕಾರಗಳಲ್ಲೂ – ಈ ದಿಕ್ಸೂಚಿಗಳ ಕಿವಿ ಕಿವುಡಾಗಿವೆ……!!
ಬಿಡು ನಿನ್ನ ಹಳಿ ಛಾಳಿಯ….!!

ಕಣ್ಣಿಗೆ ಕಾಣುವ ಸುಂದರ ಸನಾತನ
ರೇಖೆಗಳೇ ದಿವ್ಯ ಪಥವ
ಬದಲಿಸಿ ವಕ್ರಗೊಂಡು
ಹೆಗಲಿಗೆ ಹೆಗಲು ಶಾಮೀಲಾಗಿವೆ
ಬಡವರ ಮನೆ ಸಾವು ಸವರಿದೆ
ಶ್ರೀಮಂತರ ಮನೆಯಲ್ಲೂ ಸೋಲು ಗೆಲುವು ನಡೆದಿದೆ
ಬಿಡು ನಿನ್ನ ಹಳಿ ಛಾಳಿಯ !!!!

ಕೈಗೆಟುಕದ ಬಾನು ಮತ್ತಷ್ಟು ದೂರ ಸರಿದಿದೆ
ಭೂಮಿ ಕೈಚೆಲ್ಲಿ ಕುಳಿತಿದೆ
ಅಹಂ ಹಬ್ಬಿ ರಣಕೇಕೆ ಗೈಯುತಿದೆ
ವೈರಾಣಿವಿನ ಆತ್ಮ ಕೃತಕವಾಗಿರುವಾಗ –
ಬಿಡು ನಿನ್ನ ಹಳಿ ಛಾಳಿಯ

ನಿನಗೆ ನೀನೇ ಲಸಿಕೆಯಾಗು
ನಿನಗೆ ನೀನೇ ವೈದ್ಯನಾಗು
ನಿನಗೆ ನೀನೇ ಸೈನಿಕನಾಗು
ನಿನಗೆ ನೀನೇ ಅಷ್ಟ ದಿಕ್ಪಾಲಕ…!!!!
ತೊಡು ಮಾಸ್ಕು, ತೊಳೆ ಕೈ
ಗುಂಪಾಗದಿರುವ ಬದುಕುವ ಹೊಸ ಶೈಲಿಯ ಕಲಿಯುವ ಜರೂರು
ತೊಡಬೇಕಾಗಿದೆ , ಹುಡುಗ …….!!!!!

*************

One thought on “ಬಿಡು ಹಳಿ ಛಾಳಿಯ

  1. ಪ್ರಸ್ತುತ ಕೆ ಕೈಗನ್ನಡಿ ಕವನ

Leave a Reply

Back To Top