ತಾಯಿಯೇ ಮಕ್ಕಳನ್ನು ಅಳಿಸಬಹುದೇ?
ಆದರೆ ಅವರನ್ನು ಈಗಲೇ ತಯಾರು ಮಾಡೋದ್ರಲ್ಲಿ ತಪ್ಪೇನಿದೆ? ಇವತ್ತು ತಿದ್ದಿಕೊಳ್ಳದಿದ್ದರೆ ಈಗ ನೋಡಿ ನಾನು ಅಳ್ತಿದ್ದೀನಲ್ಲ, ಹಾಗೆ ಮುಂದೆ ಅವರೂ ಹಾಗೇ ಅಳ್ತಾರೆ ಅಷ್ಟೇ. ತಾಯಿಯೇ ಮಕ್ಕಳನ್ನು ಅಳಿಸುವುದೇ?
ಗಜಲ್
ಕಷ್ಟ ಕೋಟಲೆಗಳ ದಾಟಿ ಬಂದಿದ್ದೇನೆಂದು ತಿಳಿದಿರುವೆ
ರಪ್ ಎಂದು ಸಗ್ಗದ ತೆರೆದಿಟ್ಟ ಕದವು ಮುಚ್ಚುತ್ತದೆ
ಅಷ್ಟೆ ಅಷ್ಟೇ
ಮೀಡಿಯಾಗಳ ಕತ್ತುಗಳೂ
ಈಗಿನಂತೆ ಆಗಲೂ
ಬೇರೆಡೆಗೆ ಹೊರಳಿದ್ದವು
‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ.
ತರಹಿ ಗಜಲ್
ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ
ಶ್ಮಶಾನ ಕುರುಕ್ಷೇತ್ರ
ದ್ವಾಪರವು ಅಸ್ತಯಿಸಿ
ಕಲಿ ತಾನು ವಿಸ್ತರಿಸಿ
ಹೊಸಯುಗಕೆ ನಾಂದಿಯೂ…
ಕುರುಕ್ಷೇತ್ರವೇ ಬುನಾದಿಯೂ…..
(ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)
ಗಜಲ್
ಪಡುವಣ ರವಿ ಕೆಂಪಾಗಿಸಿದ ಕೆನ್ನೆಗಳನ್ನು
ಇನಿಯನ ನೆನಪು ರಂಗು ತುಂಬಿದೆ ಮನದಲ್ಲಿ
ಗಾಂಧಿ
ಗಾಂಧಿ ಇಂದು ಜಗತ್ತೇ ನಿನ್ನ
ಆರಾಧನೆಗಾಗಿ ಕಾತರಿಸುತಿದೆ!
ಆದರೆ ನಿನ್ನ ನೆಲದಲ್ಲಿ ಮಾತ್ರ
ನೀನು ಪರಿಹಾಸ್ಯದ ಕವನ!
ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.
ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು “ಚೆನ್ನಾಗಿದೆ, ಆದರೆ ನನ್ನದು ಸುದೀರ್ಘ ಮತ್ತು ಅಂತ್ಯ ಕಾಣದ ಜೀವನಗಾಥೆ, ಅದು ಯಾರಿಗೂ ತಿಳಿಯದು ಬೇರಾರು ಬರೆಯುವಂತಹದ್ದಲ್ಲ” ಎನ್ನುತ್ತಾರೆ. ‘ ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.
ಅಳಿದ ಮೇಲಿನ ಭಯ!
ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ ಭಯೋತ್ಪಾದಕರಂಥಹಾವಳಿತುಳುಕಿದೆ ಎಡೆಬಿಡದೆ ನನ್ನೊಳಗೆ ನೆಮ್ಮದಿಯಲಿದ್ದವರಕಾಲಕೆರೆದು ಕೆಣಕುವವರುಇಂದು ಬೆಳ್ಳಬೆಳಗ್ಗೆ ತಾನೆಬಿಳಿಯ ನಗೆ ನಕ್ಕವರುನಾಳೆ ಅಟಮಟಿಸಿ ಚುಚ್ಚಿಕತ್ತಲೆಯಲಿ ಕರಗುವವರುಕೂತಲ್ಲೆ ನಿಂತಲ್ಲೆ ಇದ್ದದ್ದುದಿಢೀರನೆ ಇಲ್ಲವಾಗಿಸುವವರುನಾಯಿಗೂ ಸುಳ್ಳುಬೊಗಳು ಕಲೆಕಲಿಸುವವರು ಕಚ್ಚಿಸುವವರುಶುಭ್ರ ಸೂಟಿನಲ್ಲಿ ದೋಚುವವರುಅನ್ಯರ ಬೆವರಿಗೂ ಹೇಸದ‘ವಿದ್ಯಾವಂತ ಸಮಗ್ರ ಸಂಸಾರ’ಗಳುಬೀಭತ್ಸ ಅತ್ಯಾಚಾರಿಗಳುಬರ್ಬರ ಕೊಲೆಪಾತಕ ಭೀಷಣರುಹಗಲನ್ನೆ ರಾತ್ರಿ ಮಾಡುವಕರಾಳ ಕ್ರೌರ್ಯಾವತಾರಗಳತದೇಕ ಭಯವಿದೆಹಾಗಾಗಿ ರಾತ್ರಿಗಳಲಿ ಇನ್ನೂ ಭಯಅಥವ ರಾತ್ರಿಗಳದೆ ಭಯ! ನೊಣ ಸೊಳ್ಳೆ ಕ್ರಿಮಿಕೀಟವೈರಸ್ಸು ಬ್ಯಾಕ್ಟೀರಿಯಸಂಕ್ರಾಮಿಕಗಳ […]