ತರಹಿ ಗಜಲ್

ತರಹಿ ಗಜಲ್

(ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ)

ಅಭಿಷೇಕ ಬಳೆ ಮಸರಕಲ್

Mutual love Paintings by Olha Darchuk - Artist.com

ಹೃದಯವನ್ನು ಓದಲು ಬರುವುದಿಲ್ಲ ನಿನಗೆ
ಮನದ ಮಾತು ಕೇಳುವುದಿಲ್ಲ ನಿನಗೆ

ಹೃದಯ ಅಗಣಿತ ನೋವುಗಳ ಕಣಜ
ನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ

ಮೊದಲ ಕವಿತೆಗೆ ಕಿವಿಯಾಗದೆ ಹೋದೆ
ಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ

ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆ
ನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ

ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇ
ಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ


One thought on “ತರಹಿ ಗಜಲ್

Leave a Reply

Back To Top