ಕಾವ್ಯಯಾನ
ಶ್ಮಶಾನ ಕುರುಕ್ಷೇತ್ರ
ಸರೋಜ ಪ್ರಶಾಂತಸ್ವಾಮಿ.
ಮಸಣ..ಮಸಣ….
ಎಲ್ಲೆಲ್ಲೂ ಭಣ ಭಣ..
ರಕ್ತ ಸಿಕ್ತ ಅಂಗಣ
ರುದ್ರ ನರ್ತನ ಪ್ರಾಂಗಣ.
ನೂರೈವರಿಗಾಗಿ,
ಲೋಕವೇ ಅಸುನೀಗಿ
ಹೆತ್ತೊಡಲಲಿ ಮಂದಾಗ್ನಿ
ಆದರೆ ಕೆಂಡ ನಿಗಿ ನಿಗಿ..
ಧರ್ಮವಿಲ್ಲಿ ಗೆದ್ದು ಸೋತಿತು!
ಅಧರ್ಮವು ಸೋತು ಸತ್ತಿತು!
ಧರ್ಮ ತನಯನ ಕತ್ತಿಗೆ,
ದುರ್ಯೋಧನನ ಗತ್ತಿಗೆ!
ದ್ವಾಪರವು ಅಸ್ತಯಿಸಿ
ಕಲಿ ತಾನು ವಿಸ್ತರಿಸಿ
ಹೊಸಯುಗಕೆ ನಾಂದಿಯೂ…
ಕುರುಕ್ಷೇತ್ರವೇ ಬುನಾದಿಯೂ…..
(ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)
************************