ಕಾವ್ಯ ಸಂಗಾತಿ
ಉಷಾರಾಣಿ ಗುರುಪ್ರಸಾದ್
” ನನಗೊಂದು ವರ”


ಮಾತುಗಳಿಲ್ಲದ
ಮೌನದಲ್ಲೂ,
ಮನದ ಭಾವ
ತಿಳಿಯುವೆ ನೀನು.
ಕಷ್ಟದ ಹಾದಿಯ
ಪಯಣದಲ್ಲೂ,
ಜೊತೆಯಲಿ
ನಡೆವೆ ನೀನು.
ನಗುವಿನ ಅಲೆಯಲ್ಲಿ
ಜೊತೆಯಾಗಿ ತೇಲಿ,
ಕಣ್ಣೀರಿನ ಹನಿಗೂ
ಹೆಗಲಾದೆ ನೀನು.
ಲೋಕವೇ ಎದುರಾಗಿ
ನಿಂತರೂ ಕೂಡ,
ನನ್ನ ಹೆಜ್ಜೆಗೆ ಶಕ್ತಿ
ತುಂಬುವೆ ನೀನು.
ಕಾಲದ ಚಕ್ರವು
ಉರುಳಿದರೂ ,
ನಮ್ಮೀ ಪ್ರೀತಿಯ
ಬಂಧವು ಅಜರಾಮರ.
ನಿನ್ನೊಲವ ಸನಿಹವೇ
ನನಗೊಂದು ವರ.
ಶ್ರಮ ಪೂಜೆ
ಬಸವನಿಗೆ ಹೂಹಾರ
ಉಷಾರಾಣಿ ಗುರುಪ್ರಸಾದ್



