ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ನ್ಯಾಯದ ಕೂಗು”


ಬಡಿಯೋಣ ನ್ಯಾಯದ ಕದ
ಮೌನದ ಗೋಡೆ ಕುಸಿಯುವ ತನಕ,
ಮುಖವಾಡಧಾರಿಗಳ
ನಿಜಮುಖ ಬೆಳಕಿಗೆ ಬರುವ ತನಕ,!
ಎಚ್ಚೆದ್ದು ಕೊಳ್ಳೋಣ….
ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿ,
ಕಪಟದ ನೆರಳಲ್ಲಿ ಬೆಳೆದ
ಶಾಂತಿ ಕದಡುವ ದುಷ್ಟರ ಓಡಿಸಿ,!
ಹೋರಾಡೋಣ….
ಸುಳ್ಳಿನು ಬಿತ್ತುವ ಕಣಿವೆಗಳಲ್ಲಿ,
ದ್ವೇಷದ ಬೆಳೆಯನು ಬೆಳೆಸುವ
ಕಾಣದ ಕೈಗಳ ವಿರುದ್ಧ ಸಟೆದು ನಿಂತು,!
ಧ್ವನಿಯಾಗೋಣ….
ನಿಶ್ಯಬ್ದದ ಕಣ್ಣೀರಿಗೆ ಧ್ವನಿಯಾಗಿ,
ನ್ಯಾಯದ ಹಾದಿಯಲಿ ನಡೆವ
ಶೋಷಿತರ ನಂಬಿಕೆಗಳ ಪರ ನಿಂತು,!
ಚಿಂತಿಸಿ ಬಾಳೋಣ…
ಸತ್ಯದ ದೀಪಗಳ ಎಲ್ಲೆಡೆ ಬೆಳಗಿಸಿ,
ಮೋಸದ ಜಾಲವನು ಬೀಸಿದ
ಕೈಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ.!
ಹಮೀದ್ ಹಸನ್ ಮಾಡೂರು.



