“ನಿನಗೆ ಕಾಲು ಮುರಿದರೂ ನಿನಗೆ ಸೊಕ್ಕು ಮುರಿದಿಲ್ಲ”ಎಂದು ಸರ್ಕಾರಿ ಉದ್ಯೋಗದಲ್ಲಿರುವ ಉಷಾಳಿಗೆ ಅವಳ ಗಂಡ ಮಹೇಶ ಕೂಗಾಡುತ್ತಿರುವಾಗ ಯಾವಾಗಲೂ ಚಿಕ್ಕ ಚಿಕ್ಕ ಕಾರಣಕ್ಕೆ ರಂಪ ಮಾಡುತ್ತಿದ್ದ ಮಹೇಶನಿಗೆತನ್ನ ತಪ್ಪಿಲ್ಲದ ಕಾರಣ ಪ್ಯತ್ಯುತ್ತರ ನೀಡುತ್ತಿದ್ದವಳು ಮೌನದಿಂದ ಕಣ್ಣಿರ ಧಾರೆ ಹರಿಸಿ ನಿರುತ್ತರಳಾದಳು. ಪ್ರತಿದಿನ ಬೆಳಿಗ್ಗೆ ಬೇಗನೇ ಎದ್ದು ವಯಸ್ಸಾದ ಅತ್ತೆ ಮಾವರಿಗೆ ಪಥ್ಯದೂಟ ಮಕ್ಕಳಿಗೆ ಡಬ್ಬಿ ಕಟ್ಟಲು ಬೇರೆ ಹಾಗು ಬೆಳಗಿನ ಉಪಹಾರಕ್ಕೆ ಅವರಿಷ್ಞದ ತಿಂಡಿ ಮಾಡಿ ಪತಿಯನ್ನು ಆಫೀಸಿಗೆ ಮಕ್ಕಳನ್ನು ಶಾಲೆಗೆ ಕಳಿಸುವ ಮೊದಲ ಇನ್ನಿಂಗ್ಸ ಮುಗಿಸಿ ತನ್ನ ಊಟವನ್ನು ಡಬ್ಬಿಗೆ ಹಾಕಿಕೊಂಡಃ ತಯೋರಾಗುವಷ್ಟರಲ್ಲಿ ಕಾಲದ ಗಡಿ ಮುಂದೆ ಹೋಗುತ್ತಿತ್ತು.ಎದ್ದು ನಿಂತು ಲಗುಬಗೆಯಿಂದ ಒಂದೆರಡು ತುತ್ತು ತಿನ್ನುತ್ತ ಓಡಿ ಬಸ್ಸು ಹಿಡಿದು ತನ್ನ ಕಛೇರಿಗೆ ತಲುಪಿ ನೀರು ಕುಡಿಯುತ್ತಿದ್ದಳು. ಹೀಗಿದ್ದಾಗ ಒಂದು ದಿನ ಸಂತೆಯ ದಿನವಾಗಿದ್ದರಿಂದ ಬಸ್ಸಲ್ಲಿ ಪ್ರಯಾಣಿಕರೇ ಹೆಚ್ಚೋದ್ದರಿಂದ ಇನ್ನೊಂದು ಬಸ್ಸಿಗೆ ಹೋಗೋಣವೆಂದೆನಿಸಿದರೂ ಮತ್ತೆ ಕೈಗಡಿಯಾರ ನೋಡಿಕೊಳೊಳುತ್ತ ಹೇಗಾದರೂ ಆಗಲಿ ಮೊದಲು ಸರಿಯಾದ ವೇಳೆಗೆ ತಲುಪಲು ಈ ಬಸ್ಸಲ್ಲಿ ಹೋದರೆ ಮಾತ್ರ ಸಾಧ್ಯ ಎಂದು ತಕ್ಷಣ ಕಿಕ್ಕಿರಿದು ತುಂಬಿದ್ದ ಬಸ್ಸಲ್ಲಿ ನೂಕು ನುಗ್ಗಲಿನ ನಡುವೆ ಹರಸಾಹಸ ಮಾಡಿ ಎದ್ದು ನಿಂತಳು. ಅಂತಹ ಗೌಜಿಯಲ್ಲಿಯೂ ತಾನು ಇಳಿಯಬೇಕಾದ ಸ್ಥಳ ಬಂದಾಗ ಇಳಿಯುತ್ತಿದ್ದಾಗ ಯಾರೋ ಹಿಂದಿನಿಂದ ಬೇಗ ಇಳಿಯಲು ಗಡಬಡಿಸಿದ್ದರಿಂದ ಬಸ್ಸಿನ ಇಳಿಯುವ ಮೊದಲನೇ ಮೆಟ್ಟಿಲಿನಿಂದ ತನ್ನ ಬ್ಯಾಗ ಸಮೇತ ರಸ್ತೆಯ ಮೇಲೆ ಅಂಗೋತ ಬಿದ್ದಿದ್ದರಿಂದ ಒಂದು ಕಾಲಿಗೆ ಬಲವಾಗಿ ಪೆಟ್ಟಾಗಿ ಶಸ್ತ್ರ ಚಿಕಿತ್ಸೆ ಕೂಡ ಮಾಡಬೇಕಾಗಿ ಬಂತು.ನಿರಂತರ ಆರು ತಿಂಗಳ ವಿಶ್ರಾಂತಿ ಹೇಳಿದ್ದರಿಂದ ವೈದ್ಯಕಿಯ ರಜೆ ಮೇಲಿದ್ದಳು. ಸದಾ ಪಾದರಸದಂತೆ ಎಲ್ಲರ ಬೇಕು ಬೇಡಗಳನ್ನು ಪೂರೈಸುತ್ತಿದ್ದ ಉಷಾಳ ದಯನೀಯ ಸ್ಥಿತಿಯನ್ನು ಕಂಡು ನೆರೆಹೊರೆಯವರೆಲೊಲ ನೋಡಲು ಹೋದಾಗ ಸದಾ ಕಣ್ಣಲ್ಲಿ ನೀರು “ನಾನೇನು ತಪ್ಪು ಮಾಡಿದೆ ಅಂತ ದೇವರು ನನಗೆ ಇಂತಹ ಶಿಕ್ಷೆ ಕಚಟ್ಟ, ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು”ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಳು.ಆದರೆ ಅವಳ ಪತಿ ಮಾತ್ರ ಈಗ ಅವಳಿಂದ ಕೆಲಸ ಮಾಡಲಾಗುತ್ತಿಲ್ಲ ಅವಳು ಮಾಡುವ ಎಲ್ಲ ಕೆಲಸ ತನ್ನ ಹೆಗಲಿಗೆ ಬಿದ್ದಿದ್ದರಿಂದ ಕಿರುಚಾಡುತ್ತ ಕೋಪಿಸುತ್ತಾ ಕೆಲಸ ಮಾಡುತ್ತಿದ್ದ.ನಿಜ ಹೆಣ್ಣು ತನ್ನ ಕುಟುಂಬವೇ ತನ್ನ ಸರ್ವಸ್ವ! ಎಂದು ಜೀವನ ಮಾಡುತ್ತ ಹುಟ್ಟಿದ ಮನೆಯಿಂದ ಕೊಟ್ಟ ಮನೆ ಬೆಳಗುತ ಕಷ್ಟನೋ ಸುಖನೋ ತನ್ನ ಹೆತ್ತವರ ಹೆಸರ ಉಳಿಸಲು ತನ್ನನ್ನು ತಾನೆ ಅರ್ಪಿಸಿಕೊಂಡಿರುತ್ತಾಳೆ. ಆದರೆ ಪತಿಮಹಾಶಯ ಅವಳು ಆರೋಗ್ಯವಾಗಿದ್ದಾಗ ಹೇಗೆ ಎಲ್ಲ ಕೆಲಸವನ್ನು ನಿಭಾಯಿಸುತ್ತಾಳೋ, ಅವಳು ಅನಾರೋಗ್ಯದಿಂದ ಇದ್ದಾಗ ಅವಳ ಅವಶ್ಯಕತೆ ಅರಿತು ಅವಳು ತಮ್ಮೆಲ್ಲರನ್ನು ಆರೈಕೆ ಮಾಡಿದಂತೆ ಪ್ರೀತಿ,ಕಾಳಜಿಯಿಂದ ಅವಳನ್ನು ನೋಡಿಕೊಳ್ಳುವದು ಅಷ್ಟೇ ಮುಖ್ಯ. ಉಷಾಳಂತಹ ಸರ್ಕಾರಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರ ಪಾಡು ಮನೆಯಲ್ಲಿರುವ ಗೃಹಿಣಿಯರಿಗಿಂತ ಕನಿಷ್ಠ.ಚಂಬೆಳಕಿನ ಕವಿ ಜೆ.ಎಸ್.ಶಿವರುದ್ರಪ್ಪನವರ “ಮನೆಮನೆಯಲಿ ದೀಪ ಮೂಡಿಸಿ


ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ?”ಎಂಬ


ಕವನ ಸಾಲುಗಳಲ್ಲಿ ಒಂದು ಮನೆಯಲ್ಲಿ ಸ್ತ್ರೀಯ ಹೊಣೆಯನ್ನು ಆತ್ಮೀಯವಾಗಿ ಬಲು ಕಾಳಜಿಯಿಂದ ಬಿಂಬಿಸಿದ್ದಾರೆ.ಒಂದು ದಿನ ಮನೆಯಲ್ಲಿ ಸ್ತ್ರೀ ಅಂದರೆ ತಾಯಿಯ,ಪಾತ್ರವಿರಲಿ, ಪತ್ನಿಯ ಪಾತ್ರವಿರಲಿ ಆ ಪಾತ್ರದ ಜವಾಬ್ದಾರಿಯ ಅಭಿನಯ ಇಲ್ಲದಿದ್ದಾಗ ಆ ಚಿತ್ರ ನೀರಸ.ಮನೆ ಮನದ ದೀಪ ಮೂಡಿಸಿ ಸರಿಯಾದ ವೇಳೆಗೆ ಅವರಿಷ್ಟದ ಊಟ ಬಡಿಸುವ ಅನ್ನಪೂರ್ಣೆಯಾಗಿ ತನ್ನ ಕುಟುಂಬವನ್ನು ತಬ್ಬಿ ಮುನ್ನಡೆಸುವ ಈ ಕರುಣಾಮಯಿಗೆ ಬರೀ ಸ್ತ್ರೀ ಎನ್ನಬೇಕೇ?ಎಂಬ ಇಂಗಿತ ಅರೊಥಪೂರ್ಣವಾಗಿ ವ್ಯಕ್ತವಾಗಿದೆ.

ಬಡತನವಿರಲು ತನ್ನ ಗಂಜಿಯನ್ನು ಗಂಡಮಕ್ಕಳಿಗೆ ಬಡಿಸಿ ನಿರು ಕುಡಿದು ತೃಪ್ತಿ ಹೊಂದಿದ ಹೆಣ್ಣಿನ ತ್ಯಾಗಕ್ಕೆ ಎಣೆಯುಂಟೇ?.ಅವಳಿಗೂ ಅವಳದೆ ಆದ ಕನಸುಗಳಿವೆ ತನ್ನ ಕುಟುಂಬದ ಶ್ರೇಯಸ್ಸಿಗೆ ಆಕಾಂಕ್ಷೆಗಳಿವೆ. ಪುರುಷ ಫ್ರಧಾನ ಸಮಾಜ ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದಿನ ನಗರೀಕರಣದ ಪ್ರಭಾವದಿಂದ ಗಂಡಹೆಂಡತಿಯರಿಬ್ಬರಕ ಅರಿತು ಬೆರೆತು ಪರಸ್ಪರ ಹೊಂದೋಣಿಕೆಯಿಂದ ಮನೆಕೆಲಸವನ್ನು ಹಃಚಿಕೊಂಡು ಪ್ರೀತಿಯಿಂದ ಬಾಳುತ್ತಿರುವ ಕುಟುಂಬಗಳಿಲೊಲವೆಂದಲ್ಲ.ಆದರೆ ಸಂಪ್ರದಾಯವಾದಿಗಳು ಪತ್ನಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದರೆ “ಆ ಕೆಲಸವೆಲ್ಲ ನಿಂದಲ್ಲ, ನಿನ್ನ ಪತ್ನಿಯದು,ಅವಳೆಕಿದ್ದಾಳೆ ಬಿಡು ಅವಳು ಮಾಡಲಿ, ನಿನಗೆ ಡ್ಯೂಟಿಗೆ ತಡವಾಗುತ್ತೆ ರೆಡಿಯಾಗು,”ಎಂದು ಹೇಳುವ ಅತ್ತೆ ತನ್ನ ಸೊಸೆ ಕೂಡ ಒಬ್ಬ ಉದ್ಯೋಗಸ್ಥೆ ಎಂದು ಯೋಚಿಸದೇ ಕೆಲಸದವಳಂತೆ ಕಾಣುವ ಪರಿಪಾಟ ಕೂಡ ಇನ್ನು ಇದೆ. ಇದಲ್ಲದೇ ಕೆಲವೊಮ್ಮೆ ತನ್ನ ಪತ್ನಿ ಅನಾರೋಗ್ಯದಿಂದಿದಾಗ್ಯೂ ಕೂಡ ಅವನಿಷ್ಟದ ಅಡುಗೆ ಮಾಡದಿದ್ದರೆ ‘ಆಯ್ತೋ ಇಲ್ಲವೋ ನನಗೆ ಫರೀ ಅನ್ನ ಬೇಡ ನನಗೆ ಚಪಾತಿನೇ ಮಾಡು”ಎನ್ನುವ ಸ್ವಾರ್ಥ ಗಂಡಂದಿರು ಆ ಒಂದು ದಿನ ಅನುಸರಿಸಿಕೊಂಡು ತಾವು ಮಾಡಿದರೆ ಅಥವಾ ಹೊಟೇಲ ನಿಂದ ತಂದರೆ ಅವರ ಪ್ರತಿಷ್ಠೆ ಏನೂ ಕಮ್ಮಿ ಆಗೊಲ್ಲ.ಪ್ರೀತಿಯ ಮಾತಿನ ಸಾಂತ್ವನ
ಹೃದಯತುಂಬಿ ಮಾಡುವ ಆರೈಕೆ. ಸಪ್ತಪದಿ ತುಳಿವಾಗ ಹೇಳಿದ ಮಂತ್ರದಷ್ಟೇ ಜೀವನ ಸುಖಮಯವಾಗಿ ಜೊತೆಜೊತೆಯಲಿ ನಡೆದಾಗ ಬಾಳು ಹಾಲುಜೇನಾಗಲು ಸಾಧ್ಯ ಅಲ್ಲವೇ?


One thought on “

Leave a Reply

Back To Top