*ಹಿಡಿಯದಿರು ತಡೆಯದಿರು ಬಿಡು ಬಿಡು ಕೈ ಸೆರಗ*
 *ಭಾಷೆಯ ಬರೆದುಕೊಟ್ಟ ಸತ್ಯಕ್ಕೆ ತಪ್ಪಿದರೆ*
 *ಅಘೋರ ನರಕವೆಂದರಿಯಾ ?*
 *ಚೆನ್ನಮಲ್ಲಿಕಾರ್ಜುನನ ಕೈವಿಡಿದ* *ಸತಿಯ ಮುಟ್ಟಿದರೆ* *ಕೆಡುವೆ ಕಾಣಾ ಮರುಳೆ*

ಅಂದಿನ ೧೨ ನೇ ಶತಮಾನದ ಶ್ರೇಷ್ಠ ಶರಣೆಯರಾದ ಅಕ್ಕಮಹಾದೇವಿಯ ದಿಟ್ಟತನದ ನುಡಿ ವಚನಗಳು ಇವತ್ತಿನ ಹೆಣ್ಣು ಮಕ್ಕಳ ಬದುಕಿಗೆ ದಾರಿ ದೀಪವಾಗಿವೆ .
ಅಂದಿನ ಶತಮಾನದಲ್ಲಿ ಅಕ್ಕ ತನ್ನ ಅರಿವಿನ ಗುರುವಾದ ಶ್ರೀ ಚೆನ್ನಮಲ್ಲಿಕಾರ್ಜುನನಿಗೆ ಭಕ್ತಿಯ ಭಾವವನ್ನು ಅರ್ಪಿಸಿ ಶರಣ ಸತಿ ಲಿಂಗ ಪತಿ ಎಂದು ತಿಳಿದು ಆರಾಧಿಸುವ ಅಕ್ಕಳ ಗುರುಲಿಂಗ ಜಂಗಮ ತತ್ವಕ್ಕೆ ಭಾದೆ  ಒದಗಿದಾಗ ಅದನ್ನು ಖಂಡಿಸಿ, ವಿರೋಧಿಸಿ, ತನ್ನ ಮನದ ಭಾವ ಪಾವಿತ್ರ್ಯಕ್ಕೆ ಚ್ಯುತಿ ಗೆ ಧಕ್ಕೆ ಬಂದಾಗ ಅಕ್ಕಳು ಈ ಮಾತನ್ನು ಹೇಳಿದ್ದು ಆಗಿದ್ದೀರಬೇಕು .

ಅಕ್ಕನ ಭಾವ ತುಂಬೆಲ್ಲ ಚೆನ್ನಮಲ್ಲಿಕಾರ್ಜುನನೇ ತುಂಬಿ ಕೊಂಡಿರುವಾಗ, ಕೌಶಿಕ ಮಹಾರಾಜ ಮೂರು ವಚನಗಳನ್ನು ಭಂಗಗೊಳಿಸಿ ಅಕ್ಕ ಳನ್ನು ಬಲವಂತವಾಗಿ ಕೈಯನ್ನು ಹಿಡಿದಾಗ . ಅಕ್ಕಳು ಹಿಡಿಯದಿರು ಎನ್ನ ಕೈಯನ್ನು ಬಿಡು ನನ್ನನ್ನು ತಡೆಯಬೇಡ.ನಾನು ಚೆನ್ನಮಲ್ಲಿಕಾರ್ಜುನನನ್ನು ಕಾಣಬೇಕು . ಕೂಡಬೇಕು ನೀನು ಹಿಡಿದ ಈ ನನ್ನ ಸೆರಗನ್ನು ಬಿಡು .ನಾನು ಹೋಗುವ ಮಾರ್ಗಕ್ಕೆ ಎದುರು ನಿಲ್ಲಬೇಡ.ಬಿಟ್ಟು ಬಿಡು ನನ್ನನ್ನು ಎಂದು ಅರಮನೆಯನ್ನು ತ್ಯಜಿಸಿ ಹೊರನಡೆಯುವ ಸಮಚಿತ್ತ ಭಾವವನ್ನು ನಾವಿಲ್ಲಿ ಕಾಣುತ್ತೇವೆ.

 *ಭಾಷೆಯ ಬರೆದುಕೊಟ್ಟ ಸತ್ಯಕ್ಕೆ ತಪ್ಪಿದರೆ ಅಘೋರ* *ನರಕವೆಂದರಿಯಾ ?*

ಮೂರು ಭಾಷೆಗಳನ್ನು ಪಾಲಿಸುವೆ ಎಂದು ಹೇಳಿ ಭಾಷೆ ತಪ್ಪಿ ನಡೆಯುವ ನಿನ್ನ ನೀತಿಗೆ ಏನನ್ನಲಿ ನಾನು . ಮಹಾರಾಜ ಬಿಡು ನನ್ನನ್ನು ಯಾವುದು ? ಸತ್ಯ. ಸತ್ಯವನ್ನು ಪಾಲಿಸದೇ ನಡೆಯುವ ನಿನ್ನ ರಾಜ ನೀತಿ ಅಘೋರ ನರಕ ಕಾಣುವುದು.ಕಾಮವೇ ತುಂಬಿಕೊಂಡ ನಿನ್ನ ಕಂಗಳ ಕಾಂತಿಯಲಿ ಬರೀ ಕ್ರಾಂತಿಯೇ ಕಾಣುತ್ತಿದೆ.ಕಾಣಲಾರೆ ಜಗದ ಚಿತ್ತ. ಎಚ್ಚರವಾಗದ ನಿನ್ನ ಮೇಲು ಹೊದಿಕೆಯ ಚರ್ಮ ಮಲೀನವಾಗುತ್ತಿದೆ .

ಬಂದಿದ್ದೆ ನಿನ್ನರಮನೆಯ ಸಿರಿ ಸುಖಕ್ಕೆ ಮಾರು ಹೋಗದ ನನ್ನ ನಡಿಗೆ ಇಂದು ಹೊರ ನಡೆಯಲು ಸಿದ್ಧವಾಗಿ ನಿಂತಿದೆ.
ರಾಜನಲ್ಲವೇ ? ನೀನು .ಕೈ ಹಿಡಿದು ಸತಿಯೆಂದು ನಂಬಿ ಬರೆದ ಭಾಷೆಯಿಂದು ಅಳುಕಿಹೋಯಿತು .
ಭಾವ ಮಲೀನವಾಗಿ ಭಾವ ಒಂದಾಗದಂತಾಯಿತು .
ನರಕವಾದ ನಿನ್ನ ಅರಮನೆಯ ಸುಖ ನನಗಿಂದು ಅಘೋರವಾದಂತೆ ಆಗಿದೆ.
ಇರಲಾರೆ ನಾನಿನ್ನು.

ಎನ್ನ ಮನ ಬಯಸಲಾರದು ನಿನ್ನನು . ಇರುತ್ತಿದ್ದೆ ಹೀಗೆ ಭಾಷೆಯ ಜೊತೆ.ಮುರಿದ ನಿನ್ನ ಭಾಷೆಗೆ ಮೈ ನಡುಗುತ್ತಿದೆ .ಚಿತ್ತ ಚಂಚಲವಾದ ನೀ ಎನ್ನ ಪತಿ ಎಂದು ಹೇಗೆ? ತಪ್ಪೀತು ಎನ್ನ ಮನ ಭಾವ.ಸಮೀಪಿಸುತ್ತಿದೆ . ಎನ್ನ ಭಾವ.
 ಚೆನ್ನಮಲ್ಲಿಕಾರ್ಜುನನನೇ ಇದಿರ್ಬಂದು ಬೆಸೆದ ಭಾವ ಐಕ್ಯ ಹೊಂದಲು ಹೊರಡುವೆ,ಚಿತ್ತದಿ ಸಮಚಿತ್ತ ಭಾವದಿ ಎಚ್ಚೆತ್ತು.
ದೂಡುವೆ ಬೇಸರದ ದಿನಗಳನ್ನು ಹುಡುಕುವೆ ಕದಡಿಯ ಒಳಹೊಕ್ಕು ನಡೆಯುವೆ ಚೆನ್ನಮಲ್ಲಿಕಾರ್ಜುನನನೇ ಎನ್ನ ಜೊತೆಗೆ ಬರುತ್ತಿರಲು, ಮುತ್ತಾವ ಚಿಂತೆಯೂ ನನಗಿಲ್ಲ. ಬಿಡು ಎನ್ನ ಮಾರ್ಗ ಕದಡಿಯ ಗಿರಿ ಕರ್ಪೂರ ಆಗಿದೆ.
ತಪ್ಪಿದ ಭಾಷೆಗೆ ಒಪ್ಪದ ಮನ ನಿಲ್ಲಲಾರದು ನಿನ್ನ ಹತ್ತಿರ ಹೊರಡುವೆ ನಾನಿನ್ನು.

 *ಚೆನ್ನಮಲ್ಲಿಕಾರ್ಜುನನ ಕೈವಿಡಿದ* *ಸತಿಯ ಮುಟ್ಟಿದರೆ* *ಕೆಡುವೆ ಕಾಣಾ ಮರುಳೆ*

ಸತಿಯೆಂದು ಹಿಡಿದು ನಡೆಯುವ ಚೆನ್ನಮಲ್ಲಿಕಾರ್ಜುನನೇ ನನಗಿನ್ನೂ ದಿಕ್ಕು.ದಾರಿ .
ಎನ್ನನು ಮುಟ್ಟಿದರೆ ಕೆಡುವೆ ಮಹಾರಾಜ .ಬಿಡು ,ಎನ್ನನು ಬಿಡು, ಬಿಡು ಮರುಳೆ.ಎಲೆ ಮನವೇ, ಮಾಯೆ ಎನ್ನಲೇ ,ಮರುಳೇ ಎನ್ನಲೇ , ದಿಕ್ಕುಗೆಟ್ಟು ಸಂಚರಿಸುವ ನಿನ್ನ ಮನ ಇಂದು ಸತ್ಯ ಮರೆತು ಬಿಟ್ಟಿತು .ಸಹನೆ ,ಶಾಂತಿ ಮಂತ್ರ ಕಳಚಿ ಹೋಯಿತು .ಓ ವಿಧಿಯೇ ಯಾವ ಲೀಲೆ ಇದು .ಯಾವ ಮಾಯೆ ಇದು .ಸೆಳೆವ ನಿನ್ನ ಮನ, ಸೆರಗು ಸೆಳೆದು ಬಿಟ್ಟಿತು ಎನ್ನ.ಮತ್ತೆ ಹಿಡಿದರೆ ಕೆಟ್ಟು ಹೋಗುವೆ . ಎನ್ನ ಮನಕಿನಿತು ಒಲವಿಲ್ಲ .ತುಂಬಿದ ಎನ್ನ ಮನ ಚೆನ್ನಮಲ್ಲಿಕಾರ್ಜುನನ್ನೇ ಸೆಳೆದು ಬಿಟ್ಟಿದೆ . ಬದುಕಲಾರೆ ನಾನಿನ್ನು ಬದುಕಿ ಬಿಡುವೆ ಚೆನ್ನಮಲ್ಲಿಕಾರ್ಜುನನ ಜೊತೆ ಅಗಲಲಾರೆ ,ಹುಡುಕುವೆ ಚಿತ್ತದಿಂದ. ಬಿಡು ಮರುಳೆ ಎನ್ನ. ಬಲವಾಗಿ ಹಿಡಿದ ನಿನ್ನ ಕೈ ಕೆಟ್ಟು ಹೋದಿತು.ಉರಿಯ ಕೊಳ್ಳಿಯ ಹಾಗೆ ಚಾಚಿಕೊಂಬ ನಿನ್ನ ಮನದ ಕಾಮನೆಯಲ್ಲಿ ನಾನು  ಸುಟ್ಟು ಬೆಂದು ಹೋಗಿರುವೆ .ಬಲವಾಗಿ ನಂಬಿದ ಚೆನ್ನಮಲ್ಲಿಕಾರ್ಜುನನನೇ ನನಗಿನ್ನು ಸಂಗಾತ .ಸೇರಿ ನಡೆಯುವೆ. ಎನ್ನ ಮನ ಇಂದು ಕದಳಿಯ ಘೋರಾರಣ್ಯ ತಲುಪಿದ ಹಾಗೆ ಆಗುತ್ತಿದೆ.


Leave a Reply

Back To Top