ಸಂಗಾತಿ ವಾರ್ಷಿಕ ವಿಶೇಷಾಂಕ

ವರ್ತಮಾನದ ಲ್ಲಿ ಯುವ ಪೀಳಿಗೆ

ಕೋಮುವಾದ ಕಡೆಗೆ

ಆಕರ್ಷಿತವಾಗಲು ಕಾರಣ ಗಳೇನು


ಭಾರತವು ಅನೇಕ ಧರ್ಮ ಗಳನ್ನು ಹೊಂದಿದ ದೇಶ ವಾಗಿದೆ.ಆಯಾ ಧರ್ಮ ದವರು ತಮ್ಮ ಧರ್ಮವೇ ಶ್ರೇಷ್ಠ ಎಂದು ತಿಳಿದು ಇತರ ಧರ್ಮ ದ ಬಗ್ಗೆ ತುಚ್ಯವಾಗಿ ಮಾತನಾಡಿ ದೇಶದ ಐಕ್ಯತೆಗೆ ಹಾಗೂ ಭಾವೈಕ್ಯ ತೆಗೆ ಚ್ಯುತಿ ತರುವಂತೆ ಮಾಡುತ್ತಿವೆ .
ಭಾರತದ ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಂತ ದೊಡ್ಡ ಸವಾಲಾಗಿದೆ .ಇದು ದೇಶದ ಏಕತೆ ಮತ್ತು ” ಕಾನೂನು ಸುವ್ಯವಸ್ಥೆ ಪಾಲನೆಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ತಡೆಯಾಗಿದೆ.

ಕೋಮುವಾದ ಎಂದರೆ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಪ್ರವೃತ್ತಿಯೇ ಆಗಿದೆ .
ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿ ತನ್ನ ಧರ್ಮದ ಬಗ್ಗೆ ಅಂದಭಕ್ತಿ ಇಟ್ಟುಕೊಂಡು ಇತರ ಧರ್ಮಗಳನ್ನು ದ್ವೇಷಿಸುವ ಮತ್ತು ಆ ಧರ್ಮದ ಸದಸ್ಯರ ನಡುವೆ ದ್ವೇಷವನ್ನು ಬಿತ್ತುವ ಮನೋಭಾವನೆಯನ್ನು ಕೋಮುವಾದ ಎನ್ನುತ್ತೇವೆ.

ಭಾರತದಲ್ಲಿ ಇದು ಗುಂಪುಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಬೇರೆ ಧರ್ಮಗಳ ಬಗ್ಗೆ ಜನರಲ್ಲಿ ಧಮನಕಾರಿ ಮನೋಭಾವನೆಗೆ ಉತ್ತೇಜನ ನೀಡುವುದನ್ನು ಸಹ ಕೋಮುವಾದ ಎನ್ನುತ್ತೇವೆ.

ಇಲ್ಲಿ ಸಾಮಾನ್ಯವಾಗಿ ಮತೀಯ ಗುಂಪುಗಳ ನಡುವೆ ಉಂಟಾಗುವ ಘರ್ಷಣೆಯನ್ನು ಕೋಮುವಾದ ಎಂದು ಗುರ್ತಿಸಲಾಗುತ್ತದೆ.

ಇಂತಹ ಘರ್ಷಣೆಗಳು ವಿವಿಧ ಮತೀಯ ಗುಂಪುಗಳ ನಡುವೆ ದ್ವೇಷ, ಅಸೂಯೆ, ಮತ್ಸರ ಮೂಡಿಸಿ ಒಂದು ಮತೀಯ ಗಿಂತ ಮತ್ತೊಂದು ಮತೀಯ ಗುಂಪು ಶ್ರೇಷ್ಠ ಎಂಬ ಭಾವನೆಯನ್ನು ಬಿತ್ತುತ್ತದೆ.

ವ್ಯಾಖ್ಯೆಗಳು

‘ಕೋಮವಾದವು ರಾಜಕೀಯ ವ್ಯವಸ್ಥೆಗೆ ಅಂಟಿಕೊಂಡಿರುವ ಗೆದ್ದಲು ಹುಳುವಿನಂತಿದ್ದು, ಇದು ಜನರ ನಡುವಿನ ಸಾಮರಸ್ಯವನ್ನು ಹಾಳು ಮಾಡುತ್ತದೆ.” ಎಂದು ,
ವೀ ,ಆರ್ ಮೆಹ್ತಾ ಹೇಳುತ್ತಾರೆ

”ಪ್ರತಿಯೊಂದು ಧರ್ಮವೂ ಭಿನ್ನ ಭಿನ್ನ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ವಿಷಯಗಳಿಗೆ ಒತ್ತು ನೀಡಿ, ವಿವಿಧ ಗುಂಪುಗಳ ನಡುವಿನ ವೈರುಧ್ಯ ಮತ್ತು ಸಿದ್ಧಾಂತಗಳಿಗೆ ಒತ್ತು ನೀಡುವ ದೃಷ್ಟಿಕೋನವನ್ನು ಕೋಮುವಾದ ಎನ್ನುತ್ತೇವೆ.” ಎಂದು ಡಬ್ಲ್ಯೂಸಿಸ್ಮಿತ್ ಹೇಳುತ್ತಾರೆ

ಪ್ರಭಾ ದೀಕ್ಷಿತ್ ಅವರ ಪ್ರಕಾರ

‘ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಮತೀಯ ಮತ್ತು ಸಾಂಸ್ಕೃತಿಕ ವಿಭಿನ್ನತೆಗಳನ್ನು ಬಳಸಿಕೊಳ್ಳುವುದನ್ನು ಕೋಮುವಾದ ಎನ್ನುತ್ತೇವೆ.

”ಒಂದು ನಿರ್ದಿಷ್ಟ ಮತಕ್ಕೆ ಅಂಟಿಕೊಂಡಿದ್ದು, ಅದರ ಸಿದ್ಧಾಂತಕ್ಕೆ ನಿಷ್ಠನಾಗಿರುವುದನ್ನು ಕೋಮುವಾದ.. ಎನ್ನುತ್ತೇವೆ.

ಕೋಮುವಾದವು ಒಂದು ನಿರ್ದಿಷ್ಟ ಸಮುದಾಯವನ್ನು ಬೇರೆ ಸಮುದಾಯಗಳಿಂದ ಸದಾ ಪ್ರತ್ಯೇಕವಾಗಿಟ್ಟು ಅವುಗಳನ್ನು ದ್ವೇಷ ಮತ್ತು ವೈರತ್ವದಿಂದ ನೋಡುವಂತೆ ಮಾಡುತ್ತದೆ.

ಹಿಂಸೆಯ ಸ್ಪೋಟ ಕೋಮು ದ್ವೇಷವು ಹಿಂಸೆಯಲ್ಲಿ ಪರಿವಸಾನಗೊಳ್ಳುತ್ತದೆ ಭಾರತದಲ್ಲಿ 1989ರಿಂದ ಇದುವರೆಗೂ ನಡೆದ ಎಲ್ಲ ಕೋಮುಗಲಭೆಗಳು ಹಿಂಸೆಯಲ್ಲಿ ಅಂತ್ಯ ವಾಗಿರುವುದು ಸರ್ವ ವೇಧ್ಯ.
*1989 ರಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಡಾಕ್ಟರ್ ಹೆಡಗೆ ವಾರ ರವರ ಜನ್ಮ ಶತಾಬ್ದಿಯ ಸಮಾರಂಭಗಳಿಂದ ಪ್ರಾರಂಭವಾದ ಕೋಮುದಲ್ಲೂರಿ ನಂತರ 1992 ರಲ್ಲಿ ಬಾಬರಿ ಮಸೀದಿ ದ್ವಂಶಪ್ರಕರಣ 1993 ಮುಂಬೈ ಫೋಟೋ 2003ರ ಗುಜರಾತಿನ ಗೋದ್ರಾ ಹತ್ಯಾಕಾಂಡ ಇವೆಲ್ಲವೂ ಕೋಮು ಹಿಂಸೆಯನ್ನು ಸೂಚಿಸುತ್ತವೆ .

ದೇಶದ ಎಲ್ಲ ಕೋಮುಗಳ ನಡುವೆ ಏಕತೆ ಸಾಮರಸ್ಯ ಮತ್ತು ಭಾವೈಕ್ಯತೆಗಳನ್ನು ಪ್ರಜಾಪ್ರಭುತ್ವವು ಪ್ರತಿಪಾದಿಸುತ್ತದೆ ಪ್ರತ್ಯೇಕತೆಯನ್ನು ಬೋಧಿಸುತ್ತದೆ ಕೋಮುವಾದವು
ಪ್ರಜೆಗಳಲ್ಲಿ ಪ್ರತ್ಯೇಕತೆಯನ್ನು ಬೋಧಿಸಿ ಅವರು ಪರಸ್ಪರ ಭಾವೈಕ್ಯದಿಂದ ಇರಲು ಬಿಡುವುದಿಲ್ಲ. ಉದಾಹರಣೆಗೆ ಮುಸ್ಲಿಮ್’ಮೂಲಭೂತವಾದಿಗಳು ಮದರಸಾಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅಲ್ಲಿನ ಯುವಕರಿಗೆ ಹೀಗೆ ಬೋಧಿಸುತ್ತದೆ. “ಒಂದಾನೊಂದು ಕಾಲದಲ್ಲಿ ಭಾರತವ ಅನೈಕ್ಯತೆಯ ಬೀಡಾಗಿತ್ತು, ಅಶಿಸ್ತಿನ ನಾಡಾಗಿತ್ತು. ಇಲ್ಲಿ ಎಲ್ಲಿ ನೋಡಿದರೂ ಚೇಳುಗಳು, ಹಾವುಗಳು ಹರಿದಾಡುತ್ತಿದ್ದವು. ಇಲ್ಲಿ ಇದ್ದ ಹಿಂದೂ ಧರ್ಮ ಕಲ್ಮಶ ಮತ್ತು ಅಪವಿತ್ರ ಆಗಿತ್ತು. ಅಂತಹ ಸಂದರ್ಭದಲ್ಲಿ ನಮ್ಮ ಮುಸ್ಲಿಮ್ ಸುಲ್ತಾನರು ಭಾರತದ ಮೇಲೆ ಆಕ್ರಮಣ ಮಾಡಿ, ಗೆದ್ದುಕೊಂಡು ಹಿಂದೂ ಧರ್ಮವನ್ನು ಪವಿತ್ರ ಮಾಡಿದರು.” ಇಂತಹ ಧರ್ಮಾಂಧ, ಮಾವ ಬೋಧನೆಗಳನ್ನು ಮುಸ್ಲಿಮ್ ಯುವಕರಿಗೆ ಬೋಧಿಸಿ ಹಿಂದೂಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.
ಇದು ಅತ್ಯಂತ ಹೀನ, ನಿರ್ಲಜ್ಜ ಮತ್ತು ಹೊಣೆಗೇಡಿತನದ ಕೋಮು ಕಲ್ಪನೆಯಾಗಿದೆ.
:

ಕೆಲವೊಮ್ಮೆ ಸರ್ಕಾರವು ಒಂದು ಕೋಮಿನ ಪರವಾಗಿ

ತಳೆಯುವ ಧೋರಣೆಗಳೂ ಕೋಮುವಾದಕ್ಕೆ ಇಂಬು ಕೊಟ್ಟು ರಾಷ್ಟ್ರದಲ್ಲಿ ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಯಂತ್ರಾಂಗವನ್ನೇ ಗೊಂದಲದಲ್ಲಿ ತಳ್ಳುತ್ತದೆ
. ಸರ್ಕಾರ ನಡೆಸುವ ಕೆಲವು ರಾಜಕೀಯ ಪಕ್ಷಗಳು ಕೆಲವು ಕೋಮಿನ ದುರೀಣರನ್ನು ಸಂತೈಸುವ ಅವರಿಗೆ ಸಂತೋಷ ನೀಡುವ ಇಂತಹ ಪ್ರಸಂಗಗಳು ಹಲವಾರು ಬಾರಿ ನಡೆದು ಕೋಮುವಾದಕ್ಕೆ ಮತ್ತಷ್ಟು ಬಲ, ಚೈತನ್ಯ ತುಂಬುವರು. ಉದಾಹರಣೆಗೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ತಾಬಾನು ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್‌ ನೀಡಿದ್ದ ತೀರ್ಪನ್ನು ಬದಲಿಸಲು ಸಂಸತ್ತಿನಲ್ಲಿ ಒಂದು ಶಾಸನವನ್ನೇ ಪಾಸು ಮಾಡಿ ದೆಹಲಿಯಲ್ಲಿದ್ದ ಮುಸ್ಲಿಮ್ ದುರೀಣರನ್ನು ಸಂತೋಷ ಪಡಿಸಿದರು. ಪ್ರಸ್ತುತ ಸರ್ಕಾರವು ಹಿಂದೂ ದೇವಾಲಯಗಳಿಗೆ ಏನು ಅನುದಾನ ನೀಡುತ್ತದೆಯೋ ಅದನ್ನೂ ನಾಲ್ಕು ಪಟ್ಟು ಹೆಚ್ಚು ಅನುದಾನವನ್ನು ಮುಸ್ಲಿಮ್ ಪ್ರಾರ್ಥನಾ ಮಂದಿರಗಳಿಗೆ ನೀಡುತ್ತಿದೆ ಇವೆಲ್ಲವೂ ಪ್ರಜೆಗಳಲ್ಲಿ ಕೋಮು ಭಾವನೆಗಳನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ.

ಒಟ್ಟಾರೆಯಾಗಿ ಕೋಮುವಾದವು ಒಂದು ದೇಶದ ಪ್ರಗತಿಗೆ, ನಾವು ಅಂಗೀಕರಿಸಿದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಭಾರಿ ಅಡ್ಡಿ ಎಂದರೆ ತಪ್ಪಾಗಲಾರದು.

ಕೋಮುವಾದದ ವಿಷಯಕ್ಕೆ ಬಂದರೆ ವಿವೇಕಾನಂದರೆಂದೂ ಏಕಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ. ಅದು ಹಿಂದೂ ಧರ್ಮವಿರಲಿ, ಕ್ರೈಸ್ತ ಧರ್ಮ ವಿರಲಿ ಇಸ್ಲಾಂ ಧರ್ಮವಿರಲಿ ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆಯು ಜೀವವಿರೋಧವೆಂದು ಅವರು ಭಾವಿಸಿದ್ದರು.

೧೧-೦೯-೧೮೯೩ ರಂದು ಚಿಕಾಗೊದ ಸರ್ವಧರ್ಮ ಸಮ್ಮೇ ಳನದಲ್ಲಿ ಮಾತನಾಡುತ್ತ ಅವರು ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನ ವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ ಇಂತಹ ಉಗ್ರ ಧರ್ಮಾಂಧತೆಯ ದೃತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂದರು.

ಇನ್ನೊಮ್ಮೆ ಅವರು ಹೀಗೆ ಹೇಳಿದರು : “ಪ್ರತಿಯೊಬ್ಬ ರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ, ಈಗ ಧರ್ಮ ಆಧ್ಯಾತ್ಮಿಕ ಭಾವನೆ ನಾಶವಾಗುವುದು, ವೈವಿಧ್ಯವೇ ಜೀವನದ ರಹಸ್ಯ…. ನಾವು ಎಲ್ಲ ಧರ್ಮ ಗಳಿಗೂ ಗೌರವವನ್ನು ತೋರಬೇಕು.

ಯುವಕರಿಗೆ ಬಹಳಷ್ಟು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾರೆ .

ವಿವೇಕಾನಂದರ ಧಾರ್ಮಿಕ ಚಿಂತನೆಗಳನ್ನು ಅವಲೋಕಿಸಿದಾಗ ಅವರು ಸ್ಪಷ್ಟವಾಗಿ ಕೋಮುವಾದಿ ವಿರೋಧಿಯಾಗಿದ್ದರೆಂದು ತಿಳಿದುಬರುತ್ತದೆ. ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಟವೆಂದೂ ಆದೇ ಅಂತಿಮವೆಂದೂ ನಂಬುತ್ತ ನಂಬಿಸುತ್ತ, ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ.

ಇಂತಹ ಪ್ರವೃತ್ತಿಗೆ ವಿವೇಕಾನಂದರು ಕಟ್ಟಾ ವಿರೋಧಿಯಾಗಿದ್ದರು, ಕುವೆಂಪು ಅವರು ಹೇಳುವಂತೆ ಅವರು ‘ಮಾನವತಾ ಮಿತ್ರರಾಗಿದ್ದರು. ‘ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಆಹಮಸ್ಮಿ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ” ಎಂದು ಘೋಷಿಸಿದರು.

ವಿವೇಕಾನಂದರ ‘ಧೀರೋದಾತ್ತ’ ನಿಲುವುಗಳು ವೈಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದದ್ದೇ ಅವರ ವ್ಯಕ್ತಿತ್ವದ ವಿಶೇಷ; ಅವರದು ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ ದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ: ಅದೇ ಅವರ ವೈಚಾರಿಕ ಸತ್ಯ ಆದ್ದರಿಂದ ವಿವೇಕಾನಂದರು ಇಂದಿಗೂ ಸತ್ಯ.

ವರ್ತಮಾನದಲ್ಲಿ ಯುವ ಪೀಳಿಗೆ ಕೋಮುವಾದ ಕಡೆಗೆ ಆಕರ್ಷಿತರಾಗಲು ಕಾರಣಗಳ ಬಗ್ಗೆ ವಿಚಾರಿಸಲಾಗಿ

ಇಂದಿನ ಯುವಕರೇ ಮುಂದೆ ದೇಶ ಕಟ್ಟುವ ನಾಗರಿಕರು ಆದರೆ ಅವರ ಮನ ಯಾವ ಕಡೆ ತಿರುಗುತ್ತಿದೆ .ಅವರು ಯಾವ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬೆಳೆಯುತ್ತಿದ್ದಾರೆ ಸೂಕ್ಷ್ಮ ವಾಗಿ ಅವಲೋಕಿಸಿದಾಗ ನಮಗೆ ಕಂಡು ಬರುವ ಅಂಶಗಳು

ಮೊದಲು ಮನೆಯ ಪರಿಸರ ಕಾರಣವಾಗುವುದು .

ಯುವಕ ಆಗಿರಬಹುದು ಯುವತಿಯೇ ಆಗಿರಬಹುದು ಮನೆಯಲ್ಲಿಯ ವಾತಾವರಣ ಆಚಾರ ವಿಚಾರ ಆ ಯುವಪೀಳಿಗೆಯ ಮೇಲೆ ಅಗಾಧ ವಾದ ಪರಿಣಾಮ ಬೀರುತ್ತವೆ .ಇದರಿಂದ ಅವರು ತಮ್ಮ ಧರ್ಮ ವೇ ಶ್ರೇಷ್ಠ ಇತರ ಧರ್ಮ ಗಳ ಆಚಾರ ಕನಿಷ್ಠ ಎಂದು ಭಾವಿಸಿ ಅನ್ಯ ಧರ್ಮದ ವಿರುದ್ಧ ಗುಂಪು ಕಟ್ಟಿ ದ್ವೇಷ ಹುಟ್ಟಿಸುವಂತೆ ಮಾಡುವುದು ಇದರಿಂದ ಎರಡು ಧರ್ಮಗಳ ನಡುವೆ ಅನೇಕ ಹಿಂಸಾತ್ಮಕ ಘಟನೆಗಳು ನಡೆದು ಸಮಾಜದ ಶಾಂತಿಗೆ ಭಂಗ ತರುವಂಥಹ ಘಟನೆಗಳು ಜರುಗುತ್ತವೆ .
ಒಳಗೊಳಗೆ ಮತ್ಸರ ಕೋಲೆ ಸುಲಿಗೆ ನಡೆಯುವಂತೆ ಮಾಡುತ್ತವೆ .
ಇಂಥಹ ವಿರೋಧಿಗಳನ್ನೇ ತಮ್ಮ ದಾಳಗಳನ್ನಾಗಿ ಮಾಡಿಕೊಂಡು ಆ ಯುವಕ ಅಥವಾ ಯುವತಿಯರಿಗೆ ಹಣದ ಆಸೆ ಯನ್ನು ತೋರಿಸಿ ತಮ್ಮ ತ್ತ ಸೆಳೆದು ಕೊಂಡು ತಮ್ಮ ಧರ್ಮ ವನ್ನೇ ಎತ್ತಿಕಟ್ಟುವಂತೆ ಮಾಡುತ್ತವೆ .
ಮೊದಲೇ ಯುವಕರು ಬಿಸಿ ರಕ್ತ ಬೇರೆ ಹುಂಬ ಯುಕ್ತಿಯಿಂದ ದೇಶವನ್ನು ಒಡೆಯುವ ಕೆಟ್ಟ ಚಟಕ್ಕೆ ಬಲಿಯಾಗಿ ಬಿಡುತ್ತವೆ .
ಈ ಕೆಟ್ಟ ಚಟ ಮೈಗೆ ಅಂಟಿದ ಚರ್ಮ ದಂತೆ ಆಗಿ ಬಿಡುತ್ತದೆ .ಒಂದು ನಾನು ಸಾಯಬೇಕು .ಇನ್ನೊಂದು ನಮ್ಮ ಧರ್ಮ ಉಳಿಯಬೇಕು ನಮ್ಮ ಧರ್ಮ ಉಳಿಯಬೇಕಾದರೆ ಇತರರ ಧರ್ಮದ ಆಚಾರ ವಿಚಾರ ಸಂಪ್ರದಾಯ ಇವುಗಳ ವಿರುದ್ಧ ವಾಗಿ ಹೋರಾಡುವ ಒಂದು ರೀತಿಯ ಕುತಂತ್ರ ಬುದ್ಧಿಯನ್ನು ಅಳವಡಿಸಿಕೊಂಡು .ಮುಗ್ಧ ಮನಸ್ಸಿಗೆ ಒಂದು ರೀತಿಯ ತರಬೇತಿ ಕೊಡುವುದು .
ಇದರಿಂದ ಮನಸ್ಸಿನ ಲ್ಲಿ ಹುಟ್ಟಿದ ವ್ಯಾಮೋಹ ಹೋಗಲಾರದೇ ಗುಂಪು ಗುಂಪು ಕಟ್ಟಿಕೊಂಡು ಧರ್ಮದ ವಿರುದ್ಧ ತಿರುಗಿ ಬೀಳುವ ಹೀನ ಕೃತ್ಯ ಕ್ಕೆ ಹಾಕುವ ಕೆಲಸ ಮಾಡಿ ಮತೀಯ ಕೆಲಸ ಮಾಡುತ್ತ ನಡೆಯುವುದು .
ಅದೆಷ್ಟೋ ಯುವಕರು ಹೋರಾಟ ಗಲಭೆಯನ್ನು ಮಾಡುವುದೇ ತಮ್ಮ ಮೂಲ ಕಸಬನ್ನಾಗಿ ಮಾಡಿಕೊಂಡು ಬೆಳೆಯುತ್ತ ಬೆಳೆಸುತ್ತ ಹೋಗುವರು.
ಇಂಥಹ ವಿಷಮ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಯನ್ನು ಮಾಡುವ ಯುವಕರೇ ರಣಹೇಡಿಗಳಾದರೆ ಇನ್ನಾರನ್ನು ದೂರಬೇಕು.

ಶರಣರು, ಸಂತರು,
ದಾಸರು,ಮಹಾತ್ಮರು ಕಟ್ಟಿದ ಬವ್ಯಭಾರತ.ಈ ಭವ್ಯ ವಾದ ಭಾರತದಲ್ಲಿ ನಾವೆಲ್ಲರೂ
ಐಕ್ಯತೆಯಿಂದ ಬದುಕಿ ಇತರರನ್ನೂ ಬದುಕಿಸುವ ಧರ್ಮ ನಮ್ಮ ದಾಗಬೇಕು .ಅಂದಾಗ ಮಾತ್ರ ನಾವು ಈ ಭೂಮಿಯ ಮೇಲೆ ಹುಟ್ಟಿದ್ದಕ್ಕೆಸಾರ್ಥಕ .ಆ ದೇವರು ಈ ದೇವರು ಎನ್ನದೇ ಆ ಧರ್ಮ ಈ ಧರ್ಮ ಎನ್ನದೇ ಹೇಗೆ 12ನೇ ಶತಮಾನದ ಶಿವಶರಣರು ಇದ್ದರೋ ಹಾಗೇ ನಾವೆಲ್ಲ ರೂ ಒಂದೇ ಎಂಬ ಭಾವನೆ ತಾಳುವುಲು ಈ ವಿಶ್ವವೇ ಒಂದು ಕುಟುಂಬ. ಎಂದು ತಿಳಿದು ಸಾರ್ಥಕ ಜೀವನ ನಡೆಸಿದರೆ ಕೋಮುವಾದ ವನ್ನು ತಡೆ ಹಿಡಿದ ಹಾಗೆ ಆಗುವುದಿಲ್ಲವೇ?
——‘—————–
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ಆಕರ ಪುಸ್ತಕಗಳು
1 ಸಿರಿಗನ್ನಡ
2,ರಾಜಕೀಯ ಚಿಂತಕರು ವಿದ್ಯಮಾನ ಗಳು -ಎನ್ ಪ್ರಭಾಕರ್

Leave a Reply

Back To Top