ಸಂಗಾತಿ ವಾರ್ಷಿಕ ವಿಶೇಷಾಂಕ
ಜಾಲತಾಣ ಮತ್ತು ಮಹಿಳೆ.
ಅನ್ನಪೂರ್ಣ ಸಕ್ರೋಜಿ. ಪುಣೆ.
ಜಾಲತಾಣವು ಜಗತ್ತಿನ ಎಲ್ಲ ತಾಣಗಳನ್ನು ತನ್ನ ಜಾಲದಲ್ಲಿ ಹಾಕಿಕೊಂಡಿದೆ. ಅದು ಬಲು ಕಠಿಣ ಮತ್ತು ತೊಡಕಿನ ಬಲೆಯು. ನಾವು ಈಗ ಡಿಜಿಟಲ್ ಇಂಡಿಯಾ ಆಗುವತ್ತ ದಾಪುಗಾಲು ಹಾಕುತ್ತಿದ್ದೇವೆ. ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರ ಕೈಯಲ್ಲಿ ಮೊಬೈಲ್ ಹಾಗೂ ಟ್ಯಾಬ್’ಗಳು. ಶಾಲೆಯ ಮಕ್ಕಳಿಂದ ಹಿಡಿದು ಮನೆಯ ಮಹಿಳೆಯರಿಗೆ ನಿತ್ಯ ಉಪಯೋಗ ಹಾಗೂ ಬಳಕೆಯ ವಸ್ತುವಾಗಿದೆ. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲಿಯ ಮಾಹಿತಿಗಳನ್ನು ಕ್ಷಣದಲ್ಲಿ ಪಡೆದು ಮುನ್ನುಗ್ಗುತ್ತಿದ್ದಾನೆ ಮನುಷ್ಯ. ಒಳ್ಳೆಯದರ ಜೊತೆಗೆ ತಾವಾಗಿಯೇ ಸಹಜ ದೊರೆಯುವ ಕೆಟ್ಟ ವಿಷಯಗಳನ್ನೂ ಕಲಿಯುತ್ತಿದ್ದಾನೆ ಜಾಲತಾಣದ ಸಹಾಯದಿಂದ.
ಮಹಿಳೆಯರಿಗೆ ಇದೊಂದು ವರದಾನವಾಗಿದೆ. ಅವರು ಯಾವಾಗಲೂ ಜಾಗೃತರಿರುತ್ತಾರೆ. ಕೆಟ್ಟ ಹವ್ಯಾಸಗಳನ್ನು ಬೇಗನೆ ಅನುಕರಿಸುವುದಿಲ್ಲ. ಆದರೆ ಎಷ್ಟೇ ಕಾಳಜಿವಹಿಸಿದರೂ, ಜಾಲತಾಣದ ಪ್ರಖರ ಪ್ರಭಾವದಿಂದ ಜಾಲತಾಣದ ವಂಚನೆಯ ಬಲೆಯಲ್ಲಿ ಒಮ್ಮೊಮ್ಮೆ ವಿಶ್ವಾಸ ದುಡುಕಿ ಮೋಸಹೋಗುತ್ತಾರೆ. ಅದರಲ್ಲೇ ಸ್ವಲ್ಪ ಕಲಿತವರು, ಉದ್ಯೋಗಸ್ಥರು ಸಕಾರಾತ್ಮಕ ದೃಷ್ಟಿಯಿಂದ ಬಳಕೆ ಮಾಡುತ್ತಾರೆ.
ಮನೆಗೆಲಸ ಮಾಡುವ ಹೆಣ್ಣುಮಕ್ಕಳು ಅರ್ಥಾತ್ ಕೆಲಸದವಳು, ಆ ಮಾಲಿಕ ಮನೆಯವರಿಗೆ ತಾನು ಕೆಲಸಕ್ಕೆ ಬರುವುದರ ಬಗ್ಗೆ ಅಥವಾ ಬರಲಾರದ ಬಗ್ಗೆ ಮೊಬಲ್ ಕಾಲ್ ಮಾಡಿ ತಿಳಿಸುತ್ತಾರೆ. ಇತ್ತೀಚೆಗೆ ಹೆಣ್ಣುಮಕ್ಕಳು ಡ್ಯೂಟಿಯಿಂದ ತಡಮಾಡಿ ಬರುವಾಗ, ಅಥವಾ ಒಬ್ಬರೇ ಓಡಾಡಬೇಕಾದ ಪ್ರಸಂಗದಲ್ಲಿ ನಿರ್ಭಯರಾಗಿರಲೆಂದು, ಪೆÇೀಲೀಸರು ಅಂಥವರಿಗಾಗಿ ಒಂದು ಸಾ¥sóÀ್ಟವೇರ್ ತಯಾರು ಮಾಡಿದ್ದಾರೆ. ಅಪರಾತ್ರಿಯಲ್ಲಿ ಒಬ್ಬರೇ ಹೋಗುವಾಗ, ರಿಕ್ಷಾ ವಗೈರೆ ಸಿಗದೇಯಿದ್ದಾಗ, ಪೆÇೀಲೀಸರಿಗೆ ಕರೆ ಮಾಡಿದರೆ, ಅವರು ಮೊಬೈಲ್’ದಲ್ಲಿ ಕರೆ ಬಂದವರ ಲೊಕೇಶನ್ ಚೆಕ್ ಮಾಡಿ, ಅವರು ಇದ್ದಲ್ಲಿಗೇನೇ ಪೆÇೀಲೀಸ್ ಗಾಡಿ ಕಳಿಸಿ, ಅವರನ್ನು ಸುರಕ್ಷಿತ ಮನೆಗೆ ತಲುಪಿಸುವ ಕೆಲಸ ಮಾಡುತ್ತಾರೆ. ಜಾಲತಾಣದ ಬಳಕೆಯಲ್ಲಿ ಇದು ಒಂದು ಪರಿವರ್ತನೆ ಅಥವಾ ಸುವಿಧಾ ಎಂದು ಹೇಳಬಹುದು.
ಮನೆಯಲ್ಲಿರುವ ಗೃಹಿಣಿಯರು ಅಥವಾ ವೃದ್ಧರು ಒಬ್ಬರೇ ಇದ್ದರೆ, ಅವರು ಅಂತರ್ಜಾಲದ ಸಹಾಯದಿಂದ ಕರೆ ಮಾಡಿ, ಸಾಮಾನು, ಔಷಧ, ಗುಳಿಗೆ, ತರಕಾರಿ ಅಷ್ಟೇಯೇಕೆ, ಮನೆಗೆ ಬೇಕಾಗುವ ಭಾಂಡಿ, ಮಿಕ್ಸರ್, ಮಸೀನ್, ಊಟ, ತಿಂಡಿ ಎಲ್ಲವನ್ನೂ ಮನೆಯಲ್ಲಿ ಕುಳಿತೇ ತರಿಸಿಕೊಳ್ಳುತ್ತಾರೆ. ಅತಿಥಿಗಳು ಮನೆಗೆ ಅಕಸ್ಮಾತ್ ಬಂದಾಗ ಝೋಮ್ಯಾಟೊ, ಸ್ವೀಗಿಯಿಂದ ಕ್ಷಣದಲ್ಲಿ ಆರ್ಡರ್ ಮಾಡಿ ಭೋಜನದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಎಲ್ಲಿಯಾದರೂ ಹೊರಗೆ ಹೋಗಬೇಕಾದರೆ ಓಲಾ ಉಬೇರದಂಥಾ ಗಾಡಿ ಬುಕ್ ಮಾಡಿ ಹೋಗಬಹುದು. ಮೊದಲು ಪ್ರವಾಸಕ್ಕಾಗಿ ಗಾಡಿ ಬುಕ್ ಮಾಡಲು ಒಂದೆರಡು ದಿನ ಮೊದಲೇ ಬುಕಿಂಗಕ್ಕೆ ಪ್ರಯತ್ನ ಮಾಡಬೇಕಾಗುತ್ತಿತ್ತು. ಈಗ ಅದು ಅತೀ ಸರಳವಾಗಿದೆ.
ಜಾಲತಾಣದಲ್ಲಿ ಚಟುವಟಿಕೆಯಿಂದ ಇದ್ದಾಗ ¥sóÉೀಸ್’ಬುಕ್, ಟ್ವೀಟರ್, ಇನ್ಸ್ಟಾಗ್ರಾಮ್, ವಾಟ್ಸಪ್ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು, ಎಲ್ಲ ವಿಷಯಗಳ ಮಾಹಿತಿ ಪಡೆಯಬಹುದು. ಕವನ, ಕವಿತೆ, ಲೇಖನ ಬರೆದು ಆಯಾ ಸ್ಥಳಗಳಿಗೆ ತುರಂತ ಕಳಿಸಬಹುದು. ಪೆÇೀಸ್ಟ್ ಆಫಿûೀಸಿಗೆ ಹೋಗಿ, ಪಾಕೀಟು ತಂದು ತಿಕೀಟಿಗಾಗಿ ಲೈನ್’ದಲ್ಲಿ ನಿಂತು ಸಮಯ ಹಾಳು ಮಾಡುವ ಅವಶ್ಯಕತೆಯಿಲ್ಲ. ಈ ವಾಟ್ಸಪ್ ಜಾಲತಾಣದ ಅನುಕೂಲತೆಯಿಂದ, ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದ್ದಾರೆಂದು ಹೇಳಿದರೆ ಕಡಿಮೆಯೇನಲ್ಲ.
ಕವಿಗೋಷ್ಠಿಯಾಗಲಿ, ಸೆಮಿನಾರವಾಗಲಿ, ಅಥವಾ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವುದರಲ್ಲಿ ಅಂತರ್ಜಾಲದ ಬಳಕೆ ಶೀಘ್ರ ಹಾಗೂ ಅತ್ಯಂತ ಉಪಯುಕ್ತವಾಗಿದೆ. ಮನೆಯಲ್ಲೇ ಕುಳಿತು ಕಲಿಯಬಹುದು. ಆನ್’ಲೈನ್ ಭಾಗವಹಿಸಬಹುದು. ಮಕ್ಕಳು ವಿದೇಶದಲ್ಲಿದ್ದರೆ ತಾಯಂದಿರು ವ್ಹಿಡಿಯೊ ಮೂಲಕ ಸಂಭಾಷಣೆಗೈದು ಸುಖ ದುಃಖ ಹಂಚಿಕೊಳ್ಳಬಹುದು. ಉದ್ಯೋಗಸ್ಥ ಮಹಿಳೆಯರು ಕೆಲಸದ ಒತ್ತಡದಲ್ಲಿದ್ದಾಗ, ಲೈಟ್ ಬಿಲ್ಲ ತುಂಬುವದು, ಮಕ್ಕಳ ಶಾಲೆಯ ಫಿûೀ ತುಂಬುವದು ಮುಂತಾದವುಗಳನ್ನು ಆನ್’ಲೈನ್ ಮಾಡಬಹುದು. ಈ ಜಾಲತಾಣ ಬಂದಾಗಿನಿಂದ ಪರಊರಲ್ಲಿದ್ದ ಪಾಲಕರಿಗೆ ಹಣ ಕಳಿಸುವ ಸಲುವಾಗಿ ಮನಿಯಾರ್ಡರ್ ಮಾಡಲು ಪೆÇೀಸ್ಟ ಆಫಿûೀಸಿಗೆ ಹೋಗುವ ಅವಶ್ಯಕತೆಯಿಲ್ಲ. ಆನ್’ಲೈನ್, ವಾಟ್ಸಪ್ ಮುಖಾಂತರ ಕಳಿಸಬಹುದು. ಬೇಕಾದ ಸಾಮಾನು ತರಿಸಿಕೊಳ್ಳುವಂತೆ, ಬೇಡವಾದ ಸಾಮಾನುಗಳನ್ನೂ ‘ಸ್ಕ್ರ್ಯಾಪ್’ ಯಾಪ್’ದಿಂದ ಮಾರಬಹುದು. ಹೀಗಾಗಿ ಜಾಲತಾಣವು ಮಹಿಳೆಯರಿಗೆ ವರದಾನ ಆಗಿದೆ. ಇಡೀ ಜಗತ್ತಿನ ಮೂಲೆ ಮೂಲೆಗಳ ಸುದ್ದಿ ಕ್ಷಣಾರ್ಧದಲ್ಲಿ ದೊರೆಯುತ್ತದೆ.
ಈ-ಸುದ್ದಿ, ನ್ಯೂಜ್ ಪೇಪರ, ಯಾವುದೇ ಭಾಷೆಯ ಪುಸ್ತಕಗಳನ್ನೂ ಸಹಿತ ಈಗ ನಾವು ಮೊಬೈಲ್’ದಲ್ಲಿಯೇ ಓದಬಹುದಾಗಿದೆ. ನಮ್ಮಲ್ಲಿರುವ ಪ್ರತಿಭೆ, ವ್ಯಕ್ತಿತ್ವ ಹೊರಹರಡಿಸಲು ‘ಸಂಗಾತಿ’ಯಂತಹ ಪತ್ರಿಕೆ ಅಥವಾ ಮಾಧ್ಯಮಗಳು ಕಾರಣೀಭೂತವಾಗಿವೆ. ಎಲ್ಲಿಯೂ ಹಣದ ಬಳಕೆ ಅಪವ್ಯಯವಾಗುವದಿಲ್ಲ. ಮೊದಲಾದರೊ ಒಂದು ಕವಿತೆ ಬರೆದು, ಪೆÇೀಸ್ಟ್ ಮಾಡಲು ಎಷ್ಟೋದೂರ ನಡೆದು ಹೋಗಬೇಕಾಗುತ್ತಿತ್ತು. ಆ ಪತ್ರಕ್ಕೆ ಉತ್ತರ ಬರಲು ಮತ್ತೆ 8-10 ದಿನ ಕಾಯಬೇಕಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಬರೆದು ಕಳಿಸಿದ ಸೆಕೆಂದ ಮಾತ್ರದಲ್ಲಿ ಉತ್ತರ ಬರುತ್ತದೆ. ಆದರೆ ಜಾಲತಾಣ ಬಳಸುವಾಗ ಜಾಗ್ರತೆ ಮುಖ್ಯವಾಗಿದೆ. ನಮ್ಮ ವಯಕ್ತಿಕ ಮಾಹಿತಿಗಳನ್ನು ಜಾಲತಾಣದಲ್ಲಿ ಯಾರಿಗೂ ಕೊಡಬಾರದು. ಹೆಣ್ಣುಮಕ್ಕಳು ವಿಧವಿಧವಾದ ತಮ್ಮ ಸುಂದರ ¥sóÉÇೀಟೊಗಳನ್ನು ಹಾಕಿದಾಗ ದುಷ್ಟಪ್ರವೃತ್ತಿಯ ಜನರು ಅದರ ದುರುಪಯೋಗ ಮಾಡಿಕೊಳ್ಳುತ್ತಾರೆ. ವಧು-ವರ ಸಂಬಂಧಗಳನ್ನು ಕೂಡಿಸುವಾಗ ಸುಂದರ ¥sóÉÇೀಟೊ ಹಾಕಲೇಬೇಕಾಗುತ್ತದೆ. ಆದರೆ ಜಾಗ್ರತವಿರಬೇಕು ಅಷ್ಟೇ.
‘ಸಂಗಾತಿ’ ಪತ್ರಿಕೆಯು ಅಂಬೆಗಾಲಿಡುತ್ತ ಬಂದು ಈಗ ಐದು ವರ್ಷದ ಮಗುವಾಗಿದೆ. ಕರುನಾಡಿನ ಮೂಲೆ ಮೂಲೆಯಿಂದ ಅಷ್ಟೇಅಲ್ಲ, ಹೊರನಾಡಿನ ಕನ್ನಡಿಗರನ್ನೂ ಕೈಬೀಸಿ ಕರೆಯುತ್ತಲಿದೆ. ತನ್ನ ಆಕರ್ಷಕ ಸುಂದರ ಮೈಬಣ್ಣದಿಂದ, ಮುಗ್ಧವಾಗಿ ಸತ್ಯವನ್ನು ಹೊರಹಾಕುತ್ತ ಬೆಳೆಯುತ್ತಲಿದೆ. ಈ ಬೆಳೆಯುತ್ತಿರುವ ಪತ್ರಿಕೆಗೆ ಎಲ್ಲ ಬರಹಗಾರರ, ಲೇಖಕರ, ಕವಿ-ಕವಿಯಿತ್ರಿಯರ ಶುಭಹಾರೈಕೆಗಳೊಂದಿಗೆ, ನೂರಾರು ವರ್ಷ ಬಾಳಲೆಂದು ಆಶಿಸುವೆ. ಪತ್ರಿಕೆಯ ಸಂಪಾದಕರು, ಹಾಗೂ ಎಲ್ಲ ಪದಾಧಿಕಾರಿಗಳಿಗೆ ತುಂಬು ಹೃದಯದ ಶುಭಾಶಯಗಳು. ಇಷ್ಟು ವರ್ಷ ನಮ್ಮನ್ನು ಕೈಹಿಡಿದು ನಡೆಸಿದಂತೆ, ಮುಂದೆಯೂ ನಡೆಸಲೆಂದು ಪ್ರಾರ್ಥಿಸುವೆ.
—————
ಅನ್ನಪೂರ್ಣ ಸಕ್ರೋಜಿ.