ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ರಕ್ಷಣೆಗೆ ನೆಲವೊಂದಿದೆ

“ಏನಾದರೂ ಆಗಲಿ ಕಡೆಗೆ ರಕ್ಷಣೆಗೆ ನೆಲವೊಂದಿದೆ”
                                                                   ಡಿ.ವಿ.ಜಿ

ಹುಟ್ಟು-ಸಾವುಗಳಿಗೂ ಮಣ್ಣಿನ ನಂಟಿದೆ. ಬಂದ ಬಾಗಿಲು ಮಣ್ಣು; ಹೋಗುವ ಬಾಗಿಲು ಮಣ್ಣು; ನಡುವೆ ಕಾಪಾಡುವುದು ತಾಯಿ ಕಣ್ಣು ಎಂಬುದು ನರಸಿಂಹಸ್ವಾಮಿಯವರ ಆಪ್ತ ನುಡಿಗಳು.

ಜಗತ್ತಿನ ಯಾವ ಜೀವಿಯು ತನ್ನ ಕೊನೆಯ ಗಳಿಗೆಯನ್ನು ಮರೆಯಲಾರ.ಯಾಕೆಂದರೆ ಮೋಹ ಮಾಯೆಯಿಂದ ಪರಿಪಕ್ವವಾದ ಈ ನಶ್ವರ ಎಲಬು,ಚರ್ಮದ ಹೊದಿಕೆಯನ್ನು ನಂಬಿ ಗೈದ ಎಲ್ಲ ಒಳ್ಳೆಯ ಕೆಟ್ಟ ವಿಚಾರಗಳಿಂದ ಬೇಸತ್ತು ಆಕಾಶದತ್ತ ಮುಖ ಮಾಡಿ ಮುಕ್ತಿ ಬೇಡುವಾಗೆಲ್ಲ‌,ಅರಮನೆಯಿಂದ ಮೂರಡಿ‌,ಆರಡಿ ಜಾಗದ ಚಿಂತನೆಯಲ್ಲಿ‌ ಕಳೆಯುವಾಗೆಲ್ಲ ಇಷ್ಟೇ ಪ್ರಪಂಚ ಅನ್ನಿಸದೆ ಇರದು.ಆಗ ಆಶ್ರಯ ನೀಡುವುದು ಮಣ್ಣಲ್ಲಿ ಮಣ್ಣಾಗುವ ಈ ಕಾಯಕಕ್ಕೆ ಸಹಸ್ರಾರು ಜೀವಿಗಳ ಅವಶೇಷಗಳು ಸಾಕ್ಷಿ.ಮಣ್ಣು ಅಷ್ಟು ಪವಿತ್ರ.ಒಂದಿಷ್ಟು ಮಣ್ಣಿನ ಸಂಚಲನದ ಬಗ್ಗೆ ತಿಳಿದಷ್ಟು ಮನಸ್ಸಿಗೆ ಸಮಾಧಾನ ಕಾರಣ ನಮ್ಮ ಫಲವತ್ತತೆಗೆ ಬೇರೆ  ಈ ಮಣ್ಣು.ಆಯತಪ್ಪಿ ಬಿದ್ದಾಗ ಅಥವಾ ಯಾರಾದರೂ ಪ್ರಯತ್ನಪೂರ್ವಕವಾಗಿ ನಮ್ಮನ್ನು ಕೆಡವಿದಾಗ ಆತ್ಮಿಯತೆಯಿಂದ ತಬ್ಬಿಕೊಳ್ಳುವುದು ಮಣ್ಣು. ’ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಹೆಳ್ದಂತೆ ಪಯಣಿಗರು ಮದುವೆಯೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು- ಮಂಕುತಿಮ್ಮ’ ಎಂದು ನಾವು ಓದಿದ್ದೇವೆ. ಅಂದರೆ ಏನಾದರೂ ಆಗಲಿ ಕಡೆಗೆ ರಕ್ಷಣೆಗೆ ನೆಲವೊಂದಿದೆ, ಮಣ್ಣಿದೆ ಭಯಪಡಬೇಡ ಎನ್ನುತ್ತಾರೆ ಡಿ.ವಿ.ಜಿ.

ಮಣ್ಣಿನ ಉತ್ಪತಿ ಅಥವಾ ಅದರ ಅರ್ಥ ಕೊಂಚ ಮೆಲುಕು ಹಾಕಿದಷ್ಟು ,ಮಣ್ಣು ಉಂಟಾಗಲು ಏನೆಲ್ಲಾ ಅಂಶಗಳು ಬೇಕು ಎಂಬ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ.ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳುವಾದ ಹಾಸಿಗೆ, ಇದು ಖನಿಜ ಮತ್ತು ಸೇಂದ್ರೀಯ ದ್ರವ್ಯಗಳಿಂಧ ಸಿದ್ಧವಾಗಿದೆಯಲ್ಲದೆ ಸಸ್ಯ ವರ್ಗದ ಬೆಳವಣಿಗೆಗೆ ಆಧಾರವಾಗಿದೆ. ಸಸ್ಯಗಳ ಬೇರುಗಳು ಬೆಳೆಯಲು ಮಣ್ಣು ಆಧಾರವನ್ನೊದಗಿಸುತ್ತದೆ. ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು. ಅಲ್ಲದೆ, ಸಸ್ಯಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ.ಮಣ್ಣು (ಕೆಲವೊಮ್ಮೆ ಕೊಳಕು ಎಂದು ಕರೆಯಲಾಗುತ್ತದೆ) ಕಲ್ಲು, ಖನಿಜ ತುಣುಕುಗಳು. ಸಾವಯವ ಪದಾರ್ಥಗಳು (ಸತ್ತ ಮತ್ತು ಜೀವಂತ ವಸ್ತುಗಳು), ನೀರು ಮತ್ತು ಗಾಳಿಯ ಸಂಯೋಜನೆಯಾಗಿದೆ. ಇದು ಹೆಚ್ಚಾಗಿ ಗಾಳಿ, ಮಳೆ, ಸೂರ್ಯ, ಹಿಮ, ಇತ್ಯಾದಿಗಳಿಂದ ವಾತಾವರಣದ ಬಂಡೆಗಳ ಧಾನ್ಯಗಳು ಮತ್ತು ವಿವಿಧ ಪ್ರಮಾಣದ ಹ್ಯೂಮಸ್ನಿಂದ ಮಾಡಲ್ಪಟ್ಟಿದೆ.‌ ಮಣ್ಣಿನ ಪ್ರಕಾರವು ಹ್ಯೂಮಸ್ ಮಿಶ್ರಣ ಮತ್ತು ಕಲ್ಲಿನ ಧಾನ್ಯಗಳ ಗಾತ್ರವನ್ನು ಅವಲಂಬಿಸಿರುತ್ತದೆ.ಧಾನ್ಯಗಳು ಜೇಡಿ ಮಣ್ಣಿನಂತಹ ತುಂಬಾ ಚಿಕ್ಕದಾಗಿರಬಹುದು ಮತ್ತು ಮೃದುವಾಗಿರಬಹುದು ಅಥವಾ ಮರಳಿನ ಧಾನ್ಯಗಳು ಅಥವಾ ಜಲ್ಲಿಕಲ್ಲು ತುಂಡುಗಳಂತೆ ದೊಡ್ಡದಾಗಿರಬಹುದು.

ಮಣ್ಣು ರೂಪುಗೊಳ್ಳುವ ಖನಿಜ ವಸ್ತುವನ್ನು ಮೂಲ ವಸ್ತು ಎಂದು ಕರೆಯಲಾಗುತ್ತದೆ. ರಾಕ್, ಅದರ ಮೂಲವು ಅಗ್ನಿ, ಸಂಚಿತ ಅಥವಾ ರೂಪಾಂತರವಾಗಿದ್ದರೂ, ಎಲ್ಲಾ ಮಣ್ಣಿನ ಖನಿಜ ವಸ್ತುಗಳ ಮೂಲವಾಗಿದೆ ಮತ್ತು ಸಾರಜನಕ, ಹೈಡ್ರೋಜನ್ ಮತ್ತು ಇಂಗಾಲವನ್ನು ಹೊರತುಪಡಿಸಿ ಎಲ್ಲಾ ಸಸ್ಯ ಪೋಷಕಾಂಶಗಳ ಮೂಲವಾಗಿದೆ. ಮೂಲ ವಸ್ತುವು ರಾಸಾಯನಿಕವಾಗಿ ಮತ್ತು ಭೌತಿಕವಾಗಿ ಹವಾಮಾನ, ಸಾಗಣೆ, ಠೇವಣಿ ಮತ್ತು ಅವಕ್ಷೇಪಿಸಲ್ಪಟ್ಟಂತೆ, ಅದು ಮಣ್ಣಾಗಿ ರೂಪಾಂತರಗೊಳ್ಳುತ್ತದೆ.

ಮಣ್ಣಿನ ಮಹತ್ವ ಅರಿತಷ್ಟು ಕಡಿಮೆ..
ಆಹಾರಗಳ ಉತ್ಪಾದನೆ, ಸೌದೆ ಮತ್ತು ವಸತಿಗೆ ಅವಶ್ಯವಿರುವ ವಸ್ತುಗಳ ಉತ್ಪಾದನೆಯಲ್ಲೂ ಮಾನವನು ಭೂಮಿಯ ಮೇಲೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಮಣ್ಣನ್ನು ಅವಲಂಬಿಸಿದ್ದಾನೆ.
ಮಣ್ಣಿನ ಉತ್ಪಾದನಾ ಸಾಮಥ್ರ್ಯವನ್ನು ಉನ್ನತ ಮಟ್ಟದಲ್ಲಿಟ್ಟುಕೊಂಡು ಉತ್ತಮ ಸ್ಥಿತಿಯಲ್ಲಿಯೇ ಅದನ್ನು ಮುಂದಿನ ಪೀಳಿಗೆಗೆ  ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.ಅನೇಕ ಜೀವಿಗಳ ಜೀವನಕ್ಕೆ ಮಣ್ಣು ಅತ್ಯಗತ್ಯ. ಮರಗಳು ಮಣ್ಣಿನಿಂದ ಸ್ವತಃ ಪೋಷಿಸಲ್ಪಡುತ್ತವೆ ಮತ್ತು ನಮಗೆ ಹಣ್ಣುಗಳು, ಹೂವುಗಳು, ಆಮ್ಲಜನಕ, ಮರ ಇತ್ಯಾದಿಗಳನ್ನು ನೀಡಲು ಸಮರ್ಥವಾಗಿವೆ. ಇವೆಲ್ಲವೂ ಮನುಷ್ಯರಿಗೆ ಮತ್ತು ಇತರ ಜೀವಿಗಳಿಗೆ ಅತ್ಯಂತ ಮುಖ್ಯವಾದವುಗಳಾಗಿವೆ.

ನಮ್ಮ ಜೀವನಕ್ಕೆ ಬಹಳ ಮುಖ್ಯವಾದ ಮಣ್ಣಿನ ಸಹಾಯದಿಂದ ಮಾತ್ರ ಕೃಷಿ ಮಾಡಬಹುದು. ಕೃಷಿ ಇಲ್ಲದೆ ಮನುಷ್ಯರಿಗೆ ಆಹಾರ ಸಿಗುವುದಿಲ್ಲ. ಆಹಾರ ಪಡೆಯಲು ಕೃಷಿ ಮಾಡುವುದು ಕಡ್ಡಾಯ. ಆದ್ದರಿಂದ, ಮಾನವ ಹಸಿವನ್ನು ಶಾಂತಗೊಳಿಸುವಲ್ಲಿ ಮಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಆಹಾರವನ್ನು ಬೇಯಿಸಲು ಮಣ್ಣಿನ ಪಾತ್ರೆಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರದಲ್ಲಿ ಪೌಷ್ಟಿಕಾಂಶದ ಅಂಶಗಳು ಎಂದಿಗೂ ನಾಶವಾಗುವುದಿಲ್ಲ ಮತ್ತು ಮಾನವನು ಸಂಪೂರ್ಣ ಪೌಷ್ಟಿಕಾಂಶದ ಅಂಶವನ್ನು ತೆಗೆದುಕೊಳ್ಳುತ್ತಾನೆ.

ನಗರ ಅಥವಾ ಗ್ರಾಮ, ಅರಣ್ಯ ಅಥವಾ ಮರುಭೂಮಿ ಎಂದು ಎಲ್ಲೆಡೆ ಮಣ್ಣು ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಮಣ್ಣಿಲ್ಲದಿದ್ದರೆ ನಗರ, ಗ್ರಾಮ, ಕಾಡು, ಮರುಭೂಮಿ ಇತ್ಯಾದಿಗಳನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇದಲ್ಲದೆ, ಬಯಲು, ಪ್ರಸ್ಥಭೂಮಿ ಅಥವಾ ಪರ್ವತ ಪ್ರದೇಶಗಳಲ್ಲಿಯೂ ಮಣ್ಣಿನ ಪಾತ್ರವು ಒಂದೇ ಆಗಿರುತ್ತದೆ ಮತ್ತು ಇವುಗಳಲ್ಲಿ ಇರುವ ಹಸಿರು ಮಣ್ಣಿನಿಂದಲೂ ಇರುತ್ತದೆ.
ಮಣ್ಣನ್ನು ಒಂದು ಬಹು ಸ್ಥಿತಿಯುಳ್ಳ ವ್ಯವಸ್ಥೆ ಎಂದು ಹೇಳಬಹುದು. ಈ ವ್ಯವಸ್ಥೆಯಲ್ಲಿ ಈ ಕೆಳಕಂಡ ಸ್ಥಿತಿಗಳನ್ನು ಗುರುತಿಸಬಹುದು.


ಘನ ಸ್ಥಿತಿ : ಮಣ್ಣಿನ ನೀರವಯವ ಅಥವಾ ಮಣ್ಣಿನ ಸಾವಯವ ಘಟಕಗಳು.
ದ್ರವ ಸ್ಥಿತಿ- ಮಣ್ಣಿನ ನೀರು ಅಥವಾ ಮಣ್ಣಿನ ದ್ರಾವಣ
ಅನಿಲ ಸ್ಥಿತಿ-ಮಣ್ಣಿನ ವಾಯು.
ಜೈವಿಕ ಸ್ಥಿತಿ -ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು.

ಇವುಗಳು ತಟಸ್ಥವಾಗಿರದೆ ಒಂದು ಮತ್ತೊಂದರೊಡನೆ ಅಂತಕ್ರಿಯೆ ಹೊಂದುತ್ತಿರುತ್ತದೆ. ಈ ಕಾರಣದಿಂದ ಮಣ್ಣಿನ ಸಂಯೋಜನೆಯು ಸದಾಕಾಲವೂ ಒದಲಾದ ರೀತಿಯಲ್ಲಿರುತ್ತದೆ.ಮಣ್ಣಿನಲ್ಲಿ ಇರುವ ವಸ್ತುಗಳು.ಇವುಗಳು ಮೂಲತ: ಭೂಮಿಯ ಮೇಲೆ ಇರುವ ಶಿಲೆ ಹಾಗೂ ಖನಿಜ ವಸ್ತುಗಳ ವಿಘಟನೆಯಿಂದ ಉಂಟಾಗುತ್ತವೆ. ಮಣ್ಣು ಶೇ. 45 ರಷ್ಟು ಭಾಗ ನಿರವಯವ ವಸ್ತುಗಳಿದ್ದು ದೊಡ್ಡ ಗಾತ್ರದ ಕಲ್ಲು, ಗುಂಡುಗಳಿಂದ ಹಿಡಿದು ಅತಿ ಸಣ್ಣ ಗಾತ್ರದ ಜೇಡಿ ಕಣಗಳವರೆಗೂ ಇರುತ್ತವೆ. ಈ ಅಸಂಖ್ಯಾತ ಗಾತ್ರದ ಕಣಗಳನ್ನು ವರ್ಗಗಳಾಗಿ ವಿಂಗಡಿಸಬಹುದು. ಗರಸು, ದಪ್ಪ ಮರಳು, ಸಣ್ಣ ಮರಳು, ಒಂಡು ಮತ್ತು ಜೇಡಿ.ದೊಡ್ಡ ಗಾತ್ರದ ಕಣಗಳನ್ನು ಒಳಗೊಂಡ ಗರಸು, ಮರಳು ಮತ್ತು ಒಂಡುಗಳು ಸಸ್ಯ ಪೋಷಕಾಂಶಗಳ ದೃಷ್ಠಿಯಿಂದ ಅಷ್ಟು ಪ್ರಾಮುಖ್ಯವೆನಿಸುವುದಿಲ್ಲ. ಏಕೆಂದರೆ ಇವುಗಳಲ್ಲಿ ಪೋಷಕಗಳು ಪ್ರಾಥಮಿಕ ಖನಿಜಗಳ ರೂಪದಲ್ಲಿರುತ್ತದೆ. ಆದರೆ ಈ ಗಾತ್ರದ ಕಣಗಳು ಸಸ್ಯಗಳಿಗೆ ಬೇಕಾದ ಆಧಾರವನ್ನು ಒದಗಿಸುತ್ತವೆ.ಅತಿ ಸಣ್ಣ ಗಾತ್ರದ ಜೇಡಿ ಖನಿಜವು ಸಸ್ಯ ಪೋಷಕಾಂಶಗಳ ದೃಷ್ಠಿಯಿಂದ ಬಹಳ ಮುಖ್ಯವೆನಿಸುತ್ತವೆ. ಇವುಗಳು ಸಸ್ಯ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡಿರುತ್ತವೆ. ಮತ್ತು ಸಸ್ಯಗಳಿಗೆ ಒದಗಿಸುತ್ತದೆ.

ಮಣ್ಣಿನಲ್ಲಿರುವ ಸಾವಯವ ವಸ್ತುಗಳು ಈ ಕೆಳಗಿನ ರೂಪದಲ್ಲಿರುತ್ತವೆ. ಸ್ವಲ್ಪವೂ ಕಳಿಯದ, ಹೊಸದಾಗಿ ಮಣ್ಣಿಗೆ ಸೇರಿದ ಸಸ್ಯಗಳು ಅಥವಾ ಅವುಗಳ ಭಾಗಗಳು.ತಮ್ಮ ಜೀವನ ಚಕ್ರವನ್ನು ಪೂರ್ತಿಗೊಳಿಸಿ ಸತ್ತ ಕೀಟ, ಎರೆಹುಳು ಮತ್ತು ಇತರ ಪ್ರಾಣಿಗಳ ದೇಹಗಳು.ಮೃತಪಟ್ಟ ಸೂಕ್ಷ್ಮಜೀವಿಗಳು.ಭಾಗಶ: ಕಳಿತ ಸಸ್ಯ ಮತ್ತು ಪ್ರಾಣಿಗಳು.ಮೂಲವನ್ನು ಗುರುತಿಸಲಾಗದಷ್ಟು ಕಳಿತ ಸಾವಯವ ಪದಾರ್ಥಗಳು ಇದಕ್ಕೆ ಹ್ಯೂಮಸ್ ಎಂದು ಕರೆಯಲಾಗುತ್ತದೆ.ಸಾವಯವ ಪದಾರ್ಥದ ಮೂಲ : ಹಲವಾರು ಮೂಲಗಳಿಂದ ಸಾವಯವ ಪದಾರ್ಥಗಳು ಮಣ್ಣಿನಲ್ಲಿ ಸಂಗ್ರಹವಾಗುತ್ತದೆ, ಅವುಗಳು ಸಸ್ಯಗಳ ಎಲೆಗಳು, ಹೂವು, ಹಣ್ಣುಗಳು ಮತ್ತು ಮಣ್ಣಿನೊಳಗಿರುವ ಬೇರುಗಳು.ತಮ್ಮ ಕಾರ್ಯ ಚಟುವಟಿಕೆಯನ್ನು ಮುಗಿಸಿ ಮೃತಪಟ್ಟ ನಂತರ ಮಣ್ಣಿನಲ್ಲಿ ಸೇರಿದ ಸೂಕ್ಮಜೀವಿಗಳು.ಮಣ್ಣಿನಲ್ಲಿ ವಾಸಿಸುವ ಹಲವು ಬಗೆಯ ಪ್ರಾಣಿಗಳ ಮಲ ಮತ್ತು ಅವುಗಳ ದೇಹ.ಬೆಳೆಗಳ ಉದುರಿದ ಎಲೆ ಮತ್ತು ಟೊಂಗೆಗಳು, ಕಟಾವಾದ ನಂತರ ಉಳಿದ ಕಾಂಡ ಮತ್ತು ಬೇರುಗಳು.ಮಣ್ಣಿಗೆ ಸೇರಿದ ಸಗಣಿ ಗೊಬ್ಬರ, ಕಾಂಪೋಸ್ಟ್ ಹಸಿರೆಲೆ ಗೊಬ್ಬರ ಇತ್ಯಾದಿ.

ಮಣ್ಣಿನ ಉತ್ಪತಿಯಾಗುವುದು ಒಂದು ಅಮೋಘ ಸಂಘರ್ಷ.
ಶಿಲೆಗಳು ಹವಾ ಕ್ರಿಯೆಗೊಳಗಾಗಿ ಪರಿವರ್ತನೆ ಹೊಂದಿ ಮಣ್ಣಿನ ರೂಪವನ್ನು ಹೊಂದುವುದಕ್ಕೆ ಮಣ್ಣಿನ ಉತ್ಪತ್ತಿ ಎನ್ನುವರು. ಶಿಲೆಗಳು, ಖನಿಜಗಳು ಮತ್ತು ಸೇಂದ್ರೀಯ ದ್ರವ್ಯಗಳ ಬೌತಿಕ ಮತ್ತು ರಾಸಾಯನಿಕ ಸವಕಳಿಯಂದ ಮಣ್ಣಿನ ಉತ್ಪತ್ತಿಯಾಗುತ್ತದೆ.ಮಣ್ಣಿನ ನಿರ್ಮಾಣವು ಪ್ರಮುಖವಾಗಿ ಮೂಲ ಶಿಲಾವಸ್ತು, ಹವಾಮಾನ.ಭೂಮಿಯ ಇಳಿಜಾರು ,ಜೀವಿಗಳು,ಸಮಯ, ಈ ಅಂಶಗಳನ್ನು ಅವಲಂಬಿಸಿದೆ.
ಹವಾಮಾನ ಮತ್ತು ಜೀವಿಗಳ ಸಮಗ್ರ ಕ್ರಿಯೆಯು ಮೂಲ ಶಿಲಾವಸ್ತುಗಳ ಮೇಲೆ ನೂರಾರು ವರ್ಷಗಳ ಕಾಲ ನಡೆಯುವುದರಿಂದ ಮಣ್ಣಿನ ಉತ್ಪತ್ತಿಯಾಗುತ್ತದೆ.

ಇನ್ನೂ ಮಣ್ಣಿನ ಪ್ರಾಮುಖ್ಯತೆ ನಮಗೆಲ್ಲ ತಿಳಿದೆ ಇದೆ…

1. ಸಸ್ಯಗಳು ಬೆಳೆಯಲು ಮಣ್ಣು ಒಂದು ಸ್ಥಳವಾಗಿದೆ.
2. ಮಣ್ಣುಗಳು ಅವುಗಳ ಮೂಲಕ ಚಲಿಸುವ ನೀರಿನ ವೇಗ ಮತ್ತು ಶುದ್ಧತೆಯನ್ನು ನಿಯಂತ್ರಿಸುತ್ತವೆ.
3. ಮಣ್ಣುಗಳು ಸತ್ತ ಪ್ರಾಣಿಗಳು ಮತ್ತು ಸಸ್ಯಗಳಿಂದ ಪೋಷಕಾಂಶಗಳನ್ನು ಮರುಬಳಕೆ ಮಾಡುತ್ತವೆ.
4. ಮಣ್ಣುಗಳು ಭೂಮಿಯನ್ನು ಸುತ್ತುವರೆದಿರುವ ಗಾಳಿಯನ್ನು ಬದಲಾಯಿಸುತ್ತವೆ, ಇದನ್ನು ವಾತಾವರಣ ಎಂದು ಕರೆಯಲಾಗುತ್ತದೆ.
5. ಮಣ್ಣುಗಳು ಪ್ರಾಣಿಗಳು, ಕೀಟಗಳು ಮತ್ತು ಸೂಕ್ಷ್ಮಜೀವಿಗಳೆಂದು ಕರೆಯಲ್ಪಡುವ ಅತ್ಯಂತ ಚಿಕ್ಕ ಜೀವಿಗಳಿಗೆ ವಾಸಿಸುವ ಸ್ಥಳವಾಗಿದೆ.
6. ಮಣ್ಣುಗಳು ಅತ್ಯಂತ ಹಳೆಯ ಮತ್ತು ಹೆಚ್ಚು ಬಳಸಿದ ಕಟ್ಟಡ ಸಾಮಗ್ರಿಗಳಾಗಿವೆ.

ಮಣ್ಣಿನ ಮಾಲಿನ್ಯದ ಕೂಡಗೂ ಹೆಚ್ಚಿನ ಗಮನ ಕೊಡಬೇಕು. ಮಣ್ಣು ಜನಜೀವನದ ಉಸಿರು..ಮಣ್ಣಿನ ಮಾಲಿನ್ಯವನ್ನು ರಾಸಾಯನಿಕಗಳು, ಲವಣಗಳು, ವಿಷಕಾರಿ ಸಂಯುಕ್ತಗಳು, ವಿಕಿರಣಶೀಲ ವಸ್ತುಗಳ ನಿರಂತರ ಎಂದು ವ್ಯಾಖ್ಯಾನಿಸಬಹುದು, ಇದು ಪ್ರಾಣಿಗಳ ಆರೋಗ್ಯ ಮತ್ತು ಸಸ್ಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಣ್ಣು ಕಲುಷಿತಗೊಳ್ಳಲು ಹಲವು ಮಾರ್ಗಗಳಿವೆ. ಇವು: 
ಕೈಗಾರಿಕಾ ತ್ಯಾಜ್ಯವನ್ನು ಭೂಮಿಯ ಮೇಲ್ಮೈಗೆ ಹೊರಹಾಕುವುದು. 
ಲ್ಯಾಂಡ್ಫಿಲ್ ಮೂಲಕ ಸೀಪೇಜ್. ಭೂಗತ ಶೇಖರಣಾ ಟ್ಯಾಂಕ್‌ಗಳು ಒಡೆದು ಹೋಗುತ್ತಿವೆ.ಮಣ್ಣಿನಲ್ಲಿ ಕಲುಷಿತ ನೀರಿನ ರಚನೆ. ಘನ ತ್ಯಾಜ್ಯ ಸೋರಿಕೆ.ಭಾರೀ ಲೋಹಗಳು,ಪೆಟ್ರೋಲಿಯಂ,ಹೈಡ್ರೋಕಾರ್ಬನ್‌ಗಳು, ದ್ರಾವಕಗಳು ಮತ್ತು ಕೀಟನಾಶಕಗಳಂತಹ ರಾಸಾಯನಿಕಗಳು. ಯಥೇಚ್ಛವಾಗಿ ಮಣ್ಣನ್ನು ಸೇರುತ್ತಿರುವುದು ಮುಂಬರುವ‌ ದಿನಗಳಲ್ಲಿ ಅದರ ದುಷ್ಪರಿಣಾಮಗಳನ್ನು ಎದುರಿಸಲು ನಾವೆಲ್ಲ ಸಿದ್ದರಿರಬೇಕು ಎಂಬುವುದನ್ನು ಮರೆಯಬಾರದು…

ಮಣ್ಣಿನ ವ್ಯಾಮೋಹ ಹಿಂದಿನಿಂದಲೂ‌ ಜೀವಂತ ಹಾಗೂ ಅನಾಹುತಗಳ ಮಾಲಿಕೆಯೆ ನಮ್ಮ‌ಮುಂದಿದೆ.ಹುಟ್ಟುವಾಗ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳಾಗುವುದು ಮಣ್ಣಿನ ಅರ್ಥಾತ್ ಭೂಮಿಯ ಕಾರಣಕ್ಕಾಗಿ. ಒಂದು ಸೂಜಿಮೊನೆಯಷ್ಟು ಜಾಗವನ್ನು ಕೊಡುವದಿಲ್ಲ ಎಂದು ದುರ್ಯೋಧನ ಹಠಹಿಡಿದಾಗ ಮಹಾಭಾರತಯುದ್ಧ ಸಂಭವಿಸಿತು. ಅದರಲ್ಲೂ ಪಾಂಡವರಿಗೆ ಕುರುಕ್ಷೇತ್ರದಲ್ಲಿ ಜಯ ಲಭಿಸಲೂ ಮಣ್ಣೇ ಕಾರಣವಾಯಿತು. ಕರ್ಣನ ರಥ ಮಣ್ಣಿನಲ್ಲಿ ಹೂತುಕೊಂಡಾಗ ಪಾರ್ಥಸಾರಥಿ ಅರ್ಜುನನಿಗೆ ಬಾಣಬಿಡಲು ಆದೇಶ ನೀಡುತ್ತಾನೆ. ಒಂದು ರೀತಿಯಲ್ಲಿ ರಾಮಾಯಣವಾಗುವುದಕ್ಕೂ ಮಣ್ಣೇ ಕಾರಣವಲ್ಲವೆ? ಜನಕ ಮಹಾರಾಜನಿಗೆ ಮಣ್ಣಿನಲ್ಲಿ ಸಿಕ್ಕ ಕುವರಿ ಸೀತೆಯಲ್ಲವೆ? ಅವಳಿಂದಲೇ ಅಥವಾ ಅವಳಿಗಾಗಿಯೇ ತಾನೆ ರಾಮಾಯಣ ನಡೆದದ್ದು. ಕಡೆಗೇನಾಯಿತು ಎಲ್ಲವನ್ನೂ ಗೆದ್ದುಬಂದರೂ ಸೀತೆ ತನ್ನ ತಾಯಿ ಮಡಿಲಲ್ಲೆ, ಭೂಮಿಯೊಳಗೆ ಹೋಗಬೇಕಾಯಿತಲ್ಲವೆ?

ಎಷ್ಟಾದರೂ ನಾವು ಮಣ್ಣಿಗೆ ಅಂಟಿಕೊಂಡ ಜನ. ಮೇಲೇರಬೇಕು ಎಂಬಾಸೆ ಇದ್ದರೂ, ಮಣ್ಣನ್ನು ಬಿಡಲೊಲ್ಲೆವು. ಬೇಕಾದರೆ ಪ್ರಾಣ ಬಿಡುತ್ತೇವೆ ಮಣ್ಣನ್ನು ಬಿಡುವುದಿಲ್ಲ. ಇದರಿಂದಾಗಿ ರಿಯಲ್ ಎಸ್ಟೇಟ್ ಎಲ್ಲದಕ್ಕಿಂತ ದೊಡ್ಡ ಉದ್ಯಮವಾಗುತ್ತಿದೆ. ಎಲ್ಲ ದುರಂತಗಳಿಗೆ, ಅನಾಹುತಗಳಿಗೆ, ಕೊಲೆ-ಸುಲಿಗೆಗಳಿಗೆ ಹೆದ್ದಾರಿಯಾಗಿದೆ.ಒಂದಲ್ಲ ಒಂದು ದಿನ ಎಲ್ಲರೂ ಮಣ್ಣಾಗುವುದು ನಿಶ್ಚಿತ. ಇದ್ದಷ್ಟು ದಿನ ಒಳ್ಳೆಯ ಕೆಲಸಕ್ಕೆ ನಾವು ನೆಲೆಯಾಗಿ ನಿಲ್ಲಬೇಕು ಮಣ್ಣಿನಂತೆ. ಕುಸಿಯುವ ಮಣ್ಣಾಗಾದೆ ಏಳಿಗೆಯ ಏಣಿಯಾಗಬೇಕು.ಆಸರೆಯ ನೆಲೆಯಾಗಬೇಕು. ಹೀಗಾಗಿ ಮಣ್ಣಿನ ಕಣಕಣದಲ್ಲೂ ಜೀವಭಾವವಿದೆ. ಅದನ್ನು ನೈಸರ್ಗಿಕವಾಗಿ ಇರುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ೧)ಬಿಚ್ಚಿಟ್ಟಮನ,೨)ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು ೩) ಗಿರಿನವಿಲನೆನಪುಗಳು ಪ್ರೇಮಲಹರಿಗಳು,೪) ಗೋರಿಯಸುತ್ತ ಸಪ್ತಪದಿ ತುಳಿದಾಗ ಕಥಾ ಸಂಕಲನ, ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿ,ಜಿಲ್ಲಾಧ್ಯಕ್ಷೆ ಕೇ.ಕ.ಸಾ.ವೇದಿಕೆ.ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

10 thoughts on “

  1. ಉತ್ತಮವಾದ ಲೇಖನ…. ಲೇಖಕರು ಹುಟ್ಟಿನಿಂದ ಸಾವಿನವರೆಗೆ ಮಣ್ಣಿನ ಅಸ್ತಿತ್ವವನ್ನು ನವಿರಾಗಿ ತೆರೆದಿಟ್ಟಿದ್ದಾರೆ . ಪರಿಸರದಲ್ಲಿ ಮಣ್ಣಿನ ಉಗಮ ಅದರ ಉಪಯೋಗ ಮಣ್ಣಿನ ಸಂರಕ್ಷಣೆ ಬಗ್ಗೆ ಮಹತ್ವವಾದ ವಿಷಯವನ್ನು ಹಂಚಿಕೊಂಡಿದ್ದಾರೆ

  2. ನಾವು ಬದುಕಿದಾಗಿನಿಂದ ಸಾಯುವವರೆಗೆ ನಮ್ಮ ಸುತ್ತಲಿನ ಬೆಳಕಿಗೆ,ಕತ್ತಲಿಗೆ,ಕನಲುವಿಕೆಗೆ,ನಲಿಯುವಿಕೆಗೆ,ಕೊರಗುವಿಕೆಗೆ,ನಿರಂತರ ಬಾಳ ಬಟ್ಟೆ ತುಂಬ ನಾವುಗಳೆಲ್ಲರೂ ಮಣ್ಣಿನ ಜೊತೆಗೆ ಇರಬೇಕಾಗುತ್ತದೆ.ಸರ್ವಕಾಲಕ್ಕೂ ಮಣ್ಣೇ ಕಾರಣ.ಸೋತರೂ ಮಣ್ಣೇ.ಗೆಲುವಿಗೂ ಮಣ್ಣೆ.
    ಜಗವೆಲ್ಲವೂ ಮಣ್ಣಿನ ಮೇಲೆ ಬದುಕಿದೆ.
    ಮಣ್ಣಿನ ಕಣ ಕಣದ ಕುರಿತು ಅರಿವು ಮೂಡಿಸಿದ ಕವಯಿತ್ರಿಯವರಿಗೆ ಅಭಿನಂದನೆಗಳು.

  3. ಮಣ್ಣಿನ ಕುರಿತು, ನಮಗೆ ಯಾರು ಇಲ್ಲದಿದ್ದರೂ ಕೊನೆಗೆ ಮಣ್ಣಾದರು ಇದೆ ಮಣ್ಣಿನಿಂದ ಹಸಿವು ಹಿಂಗುತ್ತದೆ ಮಣ್ಣು ನಮಗೆ ಆಧಾರ ಸುಂದರವಾಗಿ ಮೂಡಿ ಬಂದಿದೆ ಗೆಳತಿ

  4. ಮಣ್ಣಿನ ಮಹತ್ವದ ಮಹಿಮೆಯ ಲೇಖನ ತುಂಬಾ ಸುಂದರವಾಗಿದೆ.

  5. ಮಣ್ಣಿನ ಕುರಿತು ತುಂಬಾ ಚೆನ್ನಾಗಿ ವಿಷಯಗಳನ್ನು ಮನದಟ್ಟು ಮಾಡಿದ್ದೀರಿ. ಮಣ್ಣಿಗಾಗಿ ದ್ವೇಷ ಅಸೂಯೆ ನಡೆಯತ್ತಿರುವ ಕಾಲವಿದು. ಅದ್ಭುತವಾದ ಬರವಣಿಗೆ ಸಹೋದರಿ..

  6. Beautifully showed how soil related to human being spiritually and in materialistic world.. Science behind soil and overall described well…

  7. Essentially, all life depends upon the soil .there can be no life without soil and no soil without life they have evolved together.. article with deep meaning awesome

  8. ರಕ್ಷಣೆಗೆ ನೆಲವೊಂದಿದೆ ಶಿವಲೀಲಾ ಹುಣಸಗಿ ಅವರ ಅಂಕಣ ಬರಹ. ಮಣ್ಣಿನ ಮಹತ್ವ ಕುರಿತು ವಿವರಣಾತ್ಮಕ ಲೇಖನ. ಯವ ವಿಷಯವನ್ನೇ ಅಧ್ಯಯನ ಮಾಡಿಯೇ ಬರೆದು ಅರ್ಥವತ್ತಾಗಿಯೇ ಅಭಿವ್ಯಕ್ತಿಗೊಳಿಸುತ್ತಾರೆ. ಸಚಿತ್ರಗಳಿಂದ ಲೇಖನ ಸಚೇತನಗೊಳಿಸುವುದು ಬರವಣಿಗೆ ಶೈಲಿಯ ವೈಶಿಷ್ಟ್ಯ. ಕವನಗಳನ್ನು ಉಲ್ಲೇಖಿಸುತ್ತಾರೆ. ಕಾರಂತರ ಮರಳಿ ಮಣ್ಣಿಗೆ ಓದುಗರ ಕಲ್ಪನೆಯಲ್ಲಿ ಮೂಡಿ ಬರುವಂಥ ಇಂದಿನ ಈ ಆಂಕಣ ಉಲ್ಲೇಖನಾರ್ಹವಾದುದು. ಸರಳವಾಗಿ ಬರೆಯುತ್ತಾರೆ. ಪ್ರತಿಯೊಬ್ಬರೂ ತಪ್ಪದೇ ಓದಲೇ ಬೇಕಾದ ಚಿಕ್ಕ ಚೊಕ್ಕ ಚಿತ್ರ ಸಹಿತ ಲೇಖನವಿದು.

    D.s.NAIK sirsi

Leave a Reply

Back To Top