ಲತಾ ಧರಣೇಶ್ ಅವರ ಕಥೆ- ನಿರ್ಧಾರ

ಕಥಾ ಸಂಗಾತಿ

ಲತಾ ಧರಣೇಶ್

ನಿರ್ಧಾರ

ಹೆದ್ದಾರಿ ಬದಿಯ ಶಿವ ಪಾರ್ವತಿಯ ದೇವಾಲಯ ದೇವರ ದರ್ಶನ ಪಡೆದು ಸುಮ ಮತ್ತು ಮಗಳು ಅರತಿ ದೇವಾಲಯದ ಜಗಲಿಯಲ್ಲಿ ಕುಳಿತರು.

ಪಕ್ಕದಲ್ಲಿ ಫಲ ಬಿಟ್ಟ ಮರಗಳ ತರುಲತೆಗಳು ನಗುತಿವೆ, ವನಸುಮ ಬಿರಿದಿವೆ, ಎಲ್ಲವನ್ನು ಕಣ್ತುಂಬಿಕೊಳ್ಳುತ್ತಿದ್ದ, ಸುಮಳಿಗೆ ಕಾರು ಹತ್ತಿರ ಬಂದ ಶಬ್ದ ಗೊತ್ತಾಗಲಿಲ್ಲ.

ರವಿ ಉದಯಿಸುವಾಗ ಬರುವ  ಹುರುಪಿನಂತೆ, ಹರ್ಷ ಸುಮಳ ಕಡೆ ನಗು ಮುಖದಿ ಬಂದೇ ಬಿಟ್ಟ.
ಸುಮಳ ಹೃದಯಕ್ಕೆ ಮೋಡ ಮುಸುಕಿದಂತೆ, ಕತ್ತಲು ಕವಿದಂತೆ, ಒಮ್ಮೆಲೇ ಸೂರ್ಯೋದಯವಾದಂತೆ ,,,,,
ಆಯ್ತು, ಆದರೂ,,,, ತಡವರಿಸುತ್ತಾ ಹರ್ಷನ ಮುಖವನ್ನು ನೋಡಿದಳು.

ಸುಮಾ ಹೇಗಿದ್ದೀರಾ ? ಆರಾಮಾಗಿದ್ದೀನಿ ನೀವು ಹೇಗಿದ್ದೀರಾ?  ನಾನು ಸಹ ಚೆನ್ನಾಗಿದ್ದೇನೆ,
ಅರತಿಯ ಕೈಹಿಡಿದು ಚೆನ್ನಾಗಿದ್ದೀಯ ಪುಟ್ಟ? ಎನ್ನುತ್ತಾ ಹರ್ಷ ಮಾತನಾಡಿಸಿದಾಗ ಆರತಿ ಊಂ ಎಂದು ಕತ್ತು ಆಡಿಸಿದಳು.

ದೇವರದರ್ಶನವಾಯಿತೆ ?ಸುಮ ಹೌದು ಈಗಷ್ಟೇ ಹೋಗಿ ಬಂದೆವು.
ಪ್ರಸಾದ ತಗೊಳ್ಳಿ ಎಂದು ಬಾಳೆಹಣ್ಣನ್ನು ಹರ್ಷನಿಗೆ ಕೊಡುತ್ತಾ ,,,
ನೀವು ಯಾವಾಗ ಬಂದಿರಿ?
ನಾನು ಊರಿಗೆ ಬಂದು  10 ದಿನಗಳು ಕಳೆದವು .

ಸುಮಾ ಎಷ್ಟು ವರ್ಷಗಳಾದವು ?
ನಿನ್ನ ನೋಡದೆ ನಾನು ಕಾಲೇಜು  ಶಿಕ್ಷಣ ಮುಗಿಸಿ ಸೈನಿಕ ತರಬೇತಿಗೆ ಮಂಗಳೂರಿಗೆ ಹೋದೆ ಆನಂತರ ನಿನ್ನ ಭೇಟಿಯಾಗಲೇ ಇಲ್ಲ ಹೌದು ಎನ್ನುವಂತೆ ಕತ್ತಾಡಿಸಿದಳು ಸುಮ.

ಸುಮಾ ನನ್ನ ರಾಶಿ ರಾಶಿ ಕನಸುಗಳಿಗೆ ದೀಪ ಹಚ್ಚಿದಾಕೆ ನಿನ್ನ ನೆನಪಿಲ್ಲದ ದಿನವಿಲ್ಲ ಈ ಬದುಕಿನಲಿ
ನೀ ನನ್ನ ಮರೆತಿದ್ದಾದರೂ ಹೇಗೆ ?

ಇಂದು ನನಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕು.
ಸುಮ
ನೀವು ಮುಂದೆ ಓದಬಹುದಿತ್ತು ?ಅಲ್ವಾ ,,,ಮದುವೆಯಾಗುವ ಆತುರವೇನಿತ್ತು ?
ನಿಮ್ಮ ತಂದೆ ಎಷ್ಟು ಬೇಗ ಮದುವೆ ಮಾಡುತ್ತಾರೆಂದು ಗೊತ್ತಿರಲಿಲ್ಲ .  ನೀನಾದರೂ ಒಂದು ಮಾತನ್ನು ತಿಳಿಸಲಿಲ್ಲ. ನಾನೆಷ್ಟು ನೊಂದುಕೊಂಡೆ ಗೊತ್ತ?
ನನ್ನ ನಿನ್ನ ಪ್ರೀತಿಯ ಕಾಲೇಜು ದಿನಗಳು ,ಪ್ರೇಮಿಗಳ ದಿನದಂದೆ,, ,,ನಾನು ನಿಮಗೆ ಮಾತು ಕೊಟ್ಟಿದ್ದು” ಮದುವೆಯಾಗುತ್ತೇನೆಂದು,   ನಿನ್ನ ಬಿಟ್ಟು ಬೇರೆ ಪ್ರಪಂಚ ನನಗಿಲ್ಲವೆಂದು, ಒಪ್ಪಿ,ಅಪ್ಪಿ ,ಆಣೆಗೆ ಮುತ್ತಿಟ್ಟಿದ್ದು ಇದ್ಯಾವುದು ?ನಿನಗೆ ನೆನಪಾಗಲಿಲ್ಲವೇ ?ಒಂದು ಮಾತು ನನಗೆ ತಿಳಿಸಬೇಕೆಂದು ಅನಿಸಲಿಲ್ಲವೇ ?ಹೇಳಿ ಸುಮ

ಹರ್ಷ ರವರೇ ನಾನು ಎಲ್ಲಿಂದ ,,,,,,,,,,ಪ್ರಾರಂಭ ಮಾಡಿ ಹೇಳಲೆಂದು ತಿಳಿಯುತ್ತಿಲ್ಲ.
ನನ್ನ ತಂದೆ ಆರೋಗ್ಯ ಸರಿ ಇಲ್ಲದ ಕಾರಣ ಇವೆಲ್ಲ ನಡೆದು ಹೋದವು ಎಂದಷ್ಟೇ ಹೇಳಬಹುದು.
ನಾನು ಮದುವೆಗೆ ಒಪ್ಪಲೇ ಬೇಕಾಯಿತು.
ನನ್ನ ತಂದೆ ಹಿಂದೆ ಮುಂದೆ ವಿಚಾರಿಸದೆ ದೂರದ ಸಂಬಂಧಿ ರಾಜು ಜೊತೆ ನನ್ನ ಮದುವೆ ಮಾಡಿ ಕೈ ತೊಳೆದುಕೊಂಡರು ಅವರೆಲ್ಲರಿಗೂ ಮದುವೆ ಮುಗಿಯಬೇಕಿತ್ತು.

ತಂದೆಯ ಈ ನಿರ್ಧಾರ ಬಂಧುಗಳಿಂದ ಬಂಧದಿಂದ ನಾನು ದೂರವಾಗಿ ಕವಲೊಡೆದ ಹಾದಿಯಲ್ಲಿ ಮುಂದೆ ಸಾಗುವ ಅನಿವಾರ್ಯತೆ ನನ್ನದಾಯಿತು. ಹೀಗೆ ವರ್ಷಗಳು ಕಳೆದವು ,,,,,,, ಪ್ರೀತಿ ಇಲ್ಲದ ಈ ಬದುಕಲಿ ನನ್ನ ಮಗಳು ಹುಟ್ಟಿ ಮೂರು ವರ್ಷದವಳಿರಬಹುದು ರಾಜು ಬರುವುದನ್ನು ನಿಲ್ಲಿಸಿದರು .
ನಂತರವೇ ತಿಳಿಯಿತು,  ಅವರು ಬೇರೆ ಹುಡುಗಿಯ ಜೊತೆ ಮದುವೆಗೆ ಒಪ್ಪಿಗೆ ನೀಡಿದ್ದರಂತೆ, ಮನಸ್ಸಿಗೆ ತುಂಬಾ ದುಃಖವಾಯಿತು. ಅಳುತ್ತಾ ಸಾಗುವ ಈ ಬದುಕಿನ ಪಯಣದಲ್ಲಿ ಎಲ್ಲವೂ ಘಟನೆಗಳಾಗಿಯೇ ದಾಖಲಾಗಿವೆ .

ನಂತರ ಒಂದು ದಿನ ವಿಚ್ಛೇದನಪತ್ರವೂ ಬಂದಿತು ಯಾರನ್ನು ದೂರಲಿ ?
ಬಯಸಿದ ಬದುಕು ನಿಮಗಾದರೂ ಸಿಗಲೆಂದು ಹರಸಿ ವಿಚ್ಛೇದನಪತ್ರಕ್ಕೆ ಸಹಿ ಮಾಡಿ ಮನೆಗೆ ಬಂದು “ಮಾತು ಬಾರದ ಕಿವಿ ಕೇಳದ ಮಗಳನ್ನು ತಬ್ಬಿಕೊಂಡು ಸಾಕು ಎನ್ನಿಸುವವರೆಗೂ,,,,,, ಅತ್ತುಬಿಟ್ಟೆ.

ನನ್ನ ಅಳು ನೋವುಗಳ ಕೇಳುವವರು ಯಾರು ?
ಆ ದೇವರಿಗೆ ಕರುಣೆ ಇಲ್ಲ ನನ್ನ ಈ ಹಣೆಯ ಬರಹ .
ಇಲ್ಲ ಇಲ್ಲಾ,, ಸುಮ ತಪ್ಪು  ಹಣೆಯ ಬರಹ ಅಲ್ಲ ನಿಮ್ಮ ಮದುವೆಯ ವಿಷಯದಲ್ಲಿ ನೀವು ಸೂಕ್ತ “ನಿರ್ಧಾರ” ತೆಗೆದುಕೊಳ್ಳದಿರುವುದೇ
ಈ ದುಃಖಕ್ಕೆ ಕಾರಣ .
ಯಾರೋ ಮಾಡಿದ ತಪ್ಪಿಗೆ ನೀವು ಶಿಕ್ಷೆ ಅನುಭವಿಸುತ್ತಿದ್ದೀರಾ.
ಅಪರಂಜಿ ಅಂತ ಜೀವ ನೀವು ನಿನ್ನ ನೆನಪಾದಾಗಲೆಲ್ಲ ನನ್ನ ಮನ ಮಿಡಿಯುತ್ತದೆ ಮರುಗುತ್ತದೆ.  ಸುಮ

ನೀವು ನಿಮ್ಮ ಮಗಳಿಗಾಗಿ ತೆಗೆದುಕೊಂಡ “ನಿರ್ಧಾರ ಗಟ್ಟಿತನ” ನನಗೆ ತುಂಬಾ ಇಷ್ಟವಾಯಿತು.
“ಜೀವನವೆಂದರೆ ನಕಾಶೆಗಳ ಸಹಾಯವಿಲ್ಲದೆ ಸಾಗುವ ಪಯಣ” ನಮ್ಮ ದಾರಿಯನ್ನು ನಾವೇ ಸಾಗಿಸಬೇಕು ಬಂದ ಸವಾಲುಗಳ ಎದುರು ಈಜಲೇಬೇಕು.

ನಮ್ಮ ಕಾಲೇಜು ಹಾದಿಯ ನೆನಪುಗಳಲ್ಲಿ ಯಾವಾಗಲೂ ನನಗೆ ನೆನಪು ತರುವುದು ಜನವರಿ 5 “ಪಕ್ಷಿ ಸಂಕುಲ ಉಳಿಸೋಣ ಬನ್ನಿ “ಎನ್ನುವ ಕಾರ್ಯಕ್ರಮದಲ್ಲಿ ಪಕ್ಷಿ ಸಂಕುಲ ಉಳಿಸೋಣ ಬನ್ನಿ ಎಂದು ಹಾಡು ಹಾಡಿದಾಗ ಎಲ್ಲರೂ ಚಪ್ಪಾಳೆಯ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದು,
ಆ ಕಾಡು ಸಂಚಾರದಲ್ಲಿ ಅಜ್ಜಿಯ ಮನೆಯಲ್ಲಿ ಉಳಿದಿದ್ದು “ಕೆರೆ ನದಿ ಸಮುದ್ರ ಸ್ವಚ್ಛ ಮಾಡೋಣ ಬನ್ನಿ ಪಕ್ಷಿ ಸಂಕುಲ ಉಳಿಸೋಣ ಬನ್ನಿ” ಎಂಬ ಹಾಡಿನಂತೆ ಬೀದಿ ನಾಟಕ ಮಾಡಿದ್ದೆವು.
ನಮ್ಮ ಈ ನಾಟಕ ಹಾಡು ಕೇಳಿದ ಅಜ್ಜಿ ಶ್ಯಾನ  ಖುಷಿಯಾಗಿ “ಈ ತೆರೆದಿಟ್ಟ ಜಗತ್ತಿನಾಗ” ಪಕ್ಷಿಗಳ ಬದುಕು ಉಳಿಸೋಣ ಬನ್ನಿ ಎಂದು ಹಾಡುವ ನೀನು ದಂತದ ಗೊಂಬೆ ಕಣವ್ವ ,ನಿನ್ನ ಸಂತಾನ ಸಾವಿರವಾಗಲಿ. ಎಂದು ಹಾರೈಸಿದಾಗ “ನಾ ಮೆಲ್ಲನೆ ನಿನ್ನ ಕೈ ಹಿಡಿದಾಗ,,,,, ಜಗತ್ತನ್ನೇ ಗೆದ್ದ ಖುಷಿ ನಮಗಾಗ,,,,,,,
ಇದ್ಯಾವುದು ನೆನಪಿನ ಅಂಗಳದಲ್ಲಿ ಉಳಿದಿಲ್ಲವೇ?

ಇದೆಲ್ಲ ಕೇಳುತ್ತಿದ್ದ ಸುಮಳ ಕಂಗಳಲ್ಲಿ ದಳದಳನೆ ನೀರು ಸುರಿಯುತ್ತಿತ್ತು.
ಎಲ್ಲ ನೆನಪುಗಳು ಹೃದಯಕ್ಕೆ ಭಾರವಾಗಿವೆ ,,,,,,,,,,,,,,,,,,,,,,,,,,,,,,ಭಾವಕೋಶದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ.
ಏನೆಂದು ಹೇಳಿಕೊಳ್ಳಲಿ ?ಹರ್ಷರವರೇ,,,,,,,,,

ನಿಮ್ಮ ಬರೀ ನೋಟ ಎಲ್ಲವನ್ನು ಹೇಳುತ್ತಿಲ್ಲ ನಿನ್ನ ಒಳ ನಿಲುವು ಗೊತ್ತಾಗಬೇಕು.

ಏನೇನೋ ಆಸೆಗಳು ಕನಸುಗಳನ್ನು ಕಟ್ಟಿದ ನಮ್ಮ ಪ್ರೀತಿ  ಕಾಣಿಸುತ್ತಿಲ್ಲವೇ?
ನನ್ನ ಬಾಳಲಿ ಯಾವತ್ತೂ ನೀವು ಪ್ರೇಮದ ಸಿರಿ ನೀನೇ,,,,

ಹರ್ಷ ರವರೇ ಈ ನನ್ನ ಬದುಕಿನಲ್ಲಿ ನನ್ನ ಮಗಳನ್ನು ಬಿಟ್ಟರೆ ಬೇರೆ ಪ್ರಪಂಚ ಕಾಣುತ್ತಿಲ್ಲ.

ಬಂಡಿಗಟ್ಟಲೆ ಕನಸು ಕಂಡರಷ್ಟೇ ಸಾಲದು,,,,, ಅವುಗಳನ್ನು ಪಡೆಯಲು ಶ್ರಮಪಡಬೇಕೆಂದು ಗೊತ್ತಾಗುತ್ತಿದೆ ,ಈ ಬದುಕಿನಲಿ,,,
“ಮಗಳಿಗೆ ಕಿವಿ ಕೇಳುತ್ತಿಲ್ಲ ಮಾತು ಬರುತ್ತಿಲ್ಲ” ವೆಂದು ತಿಳಿದಾಗ  ಮತ್ತಷ್ಟು ಕುಸಿದು ಬಿಟ್ಟೆ, ಏನು ಮಾಡುವುದು
“ಮಗಳಿಗಾಗಿ” ಗಟ್ಟಿತನದ ನಿರ್ಧಾರ ಮಾಡಲೇಬೇಕಾಯಿತು.

ನಿಮ್ಮ ಮಗಳ ವಿಷಯದಲ್ಲಿ ನೀವು ತೆಗೆದುಕೊಂಡ ಈ ಗಟ್ಟಿತನದ ನಿರ್ಧಾರ, ಸಾಧನೆ ಸವಾಲುಗಳನ್ನು ಎದುರಿಸಿ ಸಮಾಜಕ್ಕೆ ,ಎಲ್ಲಾ ಹೆಣ್ಣು ಮಕ್ಕಳಿಗೂ, “ಸ್ಪೂರ್ತಿಯಾಗಿದ್ದೀರಿ.

ಭೂಮಿ ತಾಯಿಯಂತೆ ಎಲ್ಲ ನೋವುಗಳನ್ನು ನುಂಗಿ ಯಶಸ್ವಿನ ಏಣಿಯನ್ನು ಏರಿದ ಪರಿ ನಿಜಕ್ಕೂ ಅಚ್ಚರಿ.

ಕಳೆದ ತಿಂಗಳು ಮಠದಲ್ಲಿ ನಡೆದ ಸಮಾರಂಭದಲ್ಲಿ ನಿಮ್ಮ ಸಾಧನೆಯನ್ನು ಗುರುತಿಸಿ ವೇದಿಕೆಗೆ ನಿಮ್ಮನ್ನು ,ಮತ್ತು ಮಗಳನ್ನು, ಕರೆಸಿ “ನಿಮ್ಮ ಮಾತು ಮಗುವಿನ ಮಾತುಗಳು ಕೇಳಿ “ನಿಮ್ಮ ತುಟಿ ಚಲನೆಯ ನೋಡಿ ಮಗು  ಮಾತನಾಡಿದ್ದನ್ನು, ಕಂಡು ನಿಜಕ್ಕೂ ನಿಮ್ಮ ಸಾಧನೆ   ಶ್ರಮ ,ನೋವು, ಗಟ್ಟಿತನ ,ಆಚಲವಾದ ನಿಮ್ಮ ನಂಬಿಕೆಗೆ ಜನರೆಲ್ಲಾ ಚಪ್ಪಾಳೆ ತಟ್ಟಿದರು.
ತಮ್ಮ ಕಣ್ಣಂಚಿನ ನೀರನ್ನು ಒರೆಸಿಕೊಂಡರು.
ತಾಯಿಯೇ ಮೊದಲ ಗುರು ಎಂದು ಕೊಂಡಾಡಿದರು.

ಇಂದಿನ ಆಧುನಿಕ ಯುಗದಲ್ಲಿ ತಾಯಿ ದುಡಿತದ ಬದುಕಿಗಾಗಿ ಮನೆಯಿಂದ, ಮಕ್ಕಳಿಂದ, ದೂರವಾಗುತ್ತಿದ್ದಾಳೆ.
ಎಲ್ಲ ಹೆಣ್ಣು ಮಕ್ಕಳು ನಿಜವಾಗಿಯೂ “ಮಹಾಶಕ್ತಿ ” ಎನ್ನುವುದಕ್ಕೆ,,, ಇಂದು ನಮಗೆ ವೇದಿಕೆಯ ಮೇಲಿರುವ” ಸುಮ ರವರೇ ಸಾಕ್ಷಿ” ಎಂದು ಹೇಳಿದ ಗುರುಗಳು ತಾಯಿ ಮಗಳನ್ನು ವೇದಿಕೆಯಲ್ಲಿ ಸನ್ಮಾನಿಸಿದ ವಿಷಯವನ್ನು ಗೊತ್ತಾಯ್ತು.

ಸುಮ ನಾನು ನಿಮ್ಮ ಗುಣಗಾನ ಮಾಡುತ್ತಿಲ್ಲ. ಇದೆಲ್ಲವನ್ನು ಮಠದ ಗುರುಗಳೇ ನನಗೆ ಹೇಳಿದ್ದು ,ನಾನು ನಿಮ್ಮ “ಮದುವೆ”ಯಾಗುತ್ತೇನೆಂದು ಮಠದ ಗುರುಗಳ ಹತ್ತಿರ ಮೊದಲೇ ಮಾತನಾಡಿದೆ , ನಿಮ್ಮ ಹತ್ತಿರ ಈ ವಿಷಯ ಮಾತನಾಡಲು ಗುರುಗಳಲ್ಲಿ ಹೇಳಿದ್ದೆ. ಗುರುಗಳು ಈ ವಿಷಯವನ್ನು ನಿಮಗೆ ತಿಳಿಸಿದ್ದಾರೆ ಎಂದು ಗೊತ್ತಾಯಿತು.

ಹರ್ಷರವರೇ “ನನ್ನ ಬದುಕು ಆಸೆ ಕನಸು ನನ್ನ ಮಗಳು ಅರತಿ ಅಷ್ಟೇ”, ಮತ್ತೇನು ?ಬಯಸುವುದಿಲ್ಲ.

ಸುಮ ನಿಮ್ಮ ನಿರ್ಧಾರ ಹೀಗೆ ಇರಬೇಕೆಂದು  ಹಠ ನನ್ನದಲ್ಲ .”ನಾನು ಪ್ರೀತಿಸಿದ “ಪ್ರೀತಿ” ಕಮರ ಬಾರದು ಅಷ್ಟೇ,,!

ಸುಮ ಸಮಾಜಕ್ಕೆ ,ತಂದೆ ತಾಯಿಗೆ ,ಮಗಳಿಗೆ ,ಏನೆಂದು ?ಉತ್ತರ ನೀಡಲಿ ?ಎಂದು ಚಿಂತಿಸಬೇಡಿ. “ಕಾಡುವವರೆಲ್ಲ ನಮ್ಮವರೇ” ಒಳ್ಳೆಯ ನಿರ್ಧಾರ ನಿಮ್ಮದಾಗಲಿ.
ನನ್ನ ಪ್ರಶ್ನೆಗೆ ನಾಳೆ ಉತ್ತರ ಹೇಳಬೇಕೆಂದು  ಹೇಳಿ ಹರ್ಷ ಕಾರಿನ ಕಡೆ ಹೊರಟ ಬಿಟ್ಟರು.

ಸುಮಳಿಗೆ ನಿಂತ ನೆಲವೆ ಕುಸಿದಂತಾಯಿತು.
ಮಗಳ ಜೊತೆ ಭಾರವಾದ ಹೆಜ್ಜೆ ಇಡುತ್ತಾ,,,, ,,,, ಮನೆ ಸೇರಿದ್ದು ಗೊತ್ತಾಗಲಿಲ್ಲ.

ಡಿ ವಿ ಜಿ ,ಹೇಳಿರುವ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ” “ಮಾಗುವಿಕೆಗೆಯ ಬದುಕಿನಲ್ಲಿ ಬಾಳುವುದು ಬದಲಾವಣೆಗೆ ಮುಖ ಮಾಡಿ ಬೆಳೆಯುವುದೇ ಅಲ್ಲವೇ” ?
ನಿಜ ಜೀವನದಲ್ಲಿ ಹಲವು ಸಂಬಂಧಗಳ ಜೊತೆ ಜೋಡಿಸಿಕೊಳ್ಳುತ್ತೇವೆ ,,,,,,,,,,,,,ಕಾಲಕ್ರಮೇಣ ದೂರವಾಗುತ್ತಿವೆ ,,,,,,,,,,,,,,,,,,,,,,,,ಇನ್ನು ನಮ್ಮ ಪ್ರಯತ್ನ ಮೀರಿ ಕಳೆದು ಹೋಗುತ್ತೇವೆ,,,,,,,,,,,,,, ಎನ್ನುತ್ತಾ ಗೋಡೆಗೊರಗಿದಳು,

ಕಣ್ಣಲ್ಲಿ ಮಿಂಚು,,,,,, ಮಿಂಚಿದರೂ ಪ್ರೀತಿಯ ಕಣ್ಣುಹನಿಗಳು ಕೆನ್ನೆಗೆ ಜಾರಿ ಹರ್ಷನಿಗೆ ಉತ್ತರ ಹೇಳಿದವು.


 ಲತಾ ಧರಣೇಶ್ 

Leave a Reply

Back To Top