ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಪ್ರಶಂಸೆ

ಹೋದ ತಿಂಗಳು ಸಂಬಂಧಿಕರೊಬ್ಬರ ಮನೆಗೆ ಆ ಊರಿನ ಗ್ರಾಮದ ದೇವಿಯ ಜಾತ್ರೆಗೆ ಹೋಗಿದ್ದೆವು.
 ಅಲ್ಲಿ  ನಮ್ಮಂತೆ  ಬೇರೆ ಊರಿನಿಂದ ದಂಪತಿಗಳು ತಮ್ಮ ಐದು ವರ್ಷದ  ಗಂಡು ಮಗುವಿನೊಂದಿಗೆ ಆಗಮಿಸಿದ್ದರು. ಬಂದವರಿಗೆ ಚಹಾ ಚೂಡ ನೀಡಿ ಕುಶಲೋಪರಿಯನ್ನು ವಿಚಾರಿಸಿ  ದರು.ತುಸು ಹೊತ್ತಿನಲ್ಲಿ ಆ ಮಗು ತಂದೆಯ ಕಿಸೆಯಲ್ಲಿನ ಮೊಬೈಲ್ ತೆಗೆದುಕೊಂಡು ನೋಡತೊಡಗಿತು.ಎಲ್ಲರೂ ಅದರ ಮೇಲೆ ಒಂದು ಕಣ್ಣನ್ನಿಟ್ಟು ತಮ್ಮಗೆ ನೀಡಿದ ಉಪಹಾರ ಮುಗಿಸುವತ್ತ ಮಗ್ನರಾಗಿದ್ದರು.ಆಗ ಆ ಮಗುವಿನ ತಂದೆ ತನ್ನ ಮಗನ ಮೊಬೈಲ್ ಜ್ಞಾನದ ಕುರಿತು ಪ್ರಶಂಸೆ ಪ್ರಾರಂಭಿಸಿದರು.ನನ್ನ ಮಗ ತನಗೆ ಬೇಕಾದ ಆಟಗಳನ್ನು ತಾನೇ ಯು ಟ್ಯೂಬನಲ್ಲಿ ಸರ್ಚ ಮಾಡಿ ಆಡುತ್ತಾನೆ.ಕೋರ್ಟೂನ ನೋಡುತ್ತಾನೆ ಅಷ್ಟೇ ಏಕೆ ತಾನೇ ಕಥೆಯನ್ನು ಕಲಿತಿದ್ದಾನೆ ಎಂದು ಹೇಳು ಪುಟ್ಟ ಅಂದದ್ದೇ ತಡ ಕಂಠಪಾಠ ಒಪ್ಪಿಸತೊಡಗಿದ. ಅದರ ಅರ್ಥ ಕೇಳಿದ ಮಿತ್ರರೊಬ್ಬರಿಗೆ ಉತ್ತರಿಸದೇ ಇದ್ದಾಗ ತಂದೆ ರಮಿಸಿ ಹೇಳಿದರೂ ಹೇಳದಾಗ ಅವರು “ಇವನಿಗೇನು ಬರಲ್ಲ ಇವ ಜಾಣನಿಲ್ಲ”ಎಂದಾಗ ಅಳಲಾರಂಭಿಸಿದ ಎಷ್ಟೇ ಸಮಾಧಾನ ಮಾಡಿ ಮೊಬೈಲ ತೆಗೆದು  ಮರಳಿ ಜೇಬಲ್ಲಿಟ್ಟುಕೊಂಡರು ಅಳು ನಿಲ್ಲಿಸಲಿಲ್ಲ.ಆಗ’ ಇವನು ಯಾವಾಗ ಅಳು ನಿಲ್ಲಿಸುತ್ತಾನೆ?” ಎಂದಾಗ “ಅವನನ್ನ ತುಂಬಾ ಜಾಣ,ಅವನಿಗೆ ಎಲ್ಲ ಬರುತ್ತೆ ಎಂದು ಹೇಳೋವರೆಗೂ ಹಾಗೆ ರಾಗ ನಿಲ್ಲಿಸುವದಿಲ್ಲ” ಎಂದು ಆ ಮಗುವಿನ ತಾಯಿ ಹೇಳಿದಳು.
ಹೀಗೆ ಬಾಲ್ಯದಿಂದಲೇ ನಮ್ಮ ಮಕ್ಕಳನ್ನು ಅತಿಯಾಗಿ ಮುದ್ದಿಸುವ ಭರದಲ್ಲಿ ಅವನನ್ನು ಈಗಲೇ ಪ್ರಶಂಸೆಗೆ ತಲೆಯಾಡಿಸುವಂತೆ ಮಾಡುತ್ತಿದ್ದೇವೆ.

ಪ್ರಶಂಸೆ ಬೇಕು ಯಾಕೆಂದೆ ಮಕ್ಕಳು ಮಾಡಿದ ಉತ್ತಮ ಕೆಲಸವನ್ನು ಪ್ರಶಂಸಿಸುವಲ್ಲಿ ತಪ್ಪಿಲ್ಲ ಯಾಕೆಂದರೆ ಪ್ರಶಂಸೆ ಕೂಡ ಒಂದು ‌ಗುಣಾತ್ಮಕ ಪ್ರೋತ್ಸಾಹವಾಗಿದ್ದು ಅದಕೆ ಅದರದೇ ಆದ ಮಿತಿ ಇರಬೇಕಾಗುತ್ತದೆ. ಪ್ರೋತ್ಸಾಹ ಚಪ್ಪಾಳೆಯು ಕೂಡ ಆಗಿರಬಹುದು ಅದರೊಂದಿಗೆ ಧನಾತ್ಮಕವಾದ ಪ್ರಶಂಸೆ ಅವರ ಮನದಲ್ಲಿ ಆತ್ಮಸ್ಥೈರ್ಯ ಹಾಗೂ ಮತ್ತೆ ಮತ್ತೆ ಪ್ರಯತ್ನಿಸುವಂತೆ ಮಾಡುತ್ತದೆ.

ಹೊಗಳಿಕೆಯನ್ನು ಎದುರುನೋಡುವವನನ್ನು ಮೀಸೆ ಕೂಸುಗಳೆಂದು ಕರೆಯಬಹುದು.ಚಿಕ್ಕ ಮಗು ನಡೆಯಲು ಆರಂಭಿಸುವಾಗ  ಮಿಕ್ಕವರು ಚಪ್ಪಾಳೆ ತಟ್ಟುವುದರಿಂದ ಉತ್ಸಾಹಗೊಳ್ಳುತ್ತದೆ.
ಈ ಹೊಗಳಿಕೆ ಎಂಬುವದು ಪ್ರಾರಂಭದಲ್ಲಿನಮಗೆ  ಚನ್ನಾಗಿರುತ್ತದೆ.ಅದೇ ರೂಢಿಯಾಗಿ ಅದಿಲ್ಲದೇ ಬದುಕಲು ಸಾಧ್ಯವಿಲ್ಲದಂತೆ  ಮಾಡುತ್ತದೆ.
ಹಿರಿಯರೊಬ್ಬರು ಮಾಡುವ ಕೆಲಸಗಳನ್ನೂ ಆಡಿದ ವಿಚಾರಗಳನ್ನು ಯಾರಾದರೂ ಪ್ರಶಂಸಿಸಿದರೆ ಅವರ ಮುಖದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.’ನಾನು ಚಿಕ್ಕವನು ಈ ಹೊಗಳಿಕೆಗೆ ಅರ್ಹನಲ್ಲ’ಎಂದು ಹೇಳಿ, ತಾವು ಎಲ್ಲ ತಿಳಿದವರು ಎಂದು ಪ್ರಚಾರ  ಮಾಡಲು ಕೆಲವರು ನಡೆದುಕೊಳ್ಳುವಂತೆ ಕಿಂಚಿತ್ತೂ ಹೊಗಳಿಕೆಯನ್ನು ಬಯಸದ ತುಂಬಿದ ಕೊಡದಂತ ಸಾಧಕರನ್ನು ಕಾಣಬಹುದು.
ನಮ್ಮ ದೇಶದ ನಾಯಕರೊಬ್ಬರು ತಮ್ಮ ಕೊಠಡಿಯಲ್ಲಿ  ಒಂದು ಹಲಗೆ  ಮೇಲೆ ಈ ರೀತಿ ವಾಕ್ಯಗಳನ್ನು ಬರೆದಿಟ್ಟಿರುತ್ತಿದ್ದರು:’ಹೊಗಳುವುದು ಬೇಡ:ಭಾಗವಹಿಸಲು ಬನ್ನಿರಿ’ಸಭೆಗಳಲ್ಲಿ  ನಡುವೆ ಕೈ ತಟ್ಟುವುದನ್ನು ಅವರು ತಡೆದು ಬಿಡುತ್ತಿದ್ದರು.ಕೀರ್ತಿ,ಆಸೆ,ಪ್ರಶಂಸೆಯ ಮೋಹ ಪ್ರತಿಯೊಬ್ಬರಿಗೂ ಉಂಟು.ಒಂದು ಒಳ್ಳೆಯ ಕೆಲಸವನ್ನು ಮಾಡಿದಾಗ ಯಾರಾದರೂ ಅದನ್ನು ‘ಕೃಷ್ಣಾರ್ಪಣ ಮಸ್ತು’ಎಂದು ದೇವರಿಗರ್ಪಿಸಿ ಆ ಸ್ಥಾನದಲ್ಲಿ ಯಾರಿದ್ದರೂ ಮಾಡುತ್ತಿದ್ದರು ಎಂಬ ಮಾತು ಧನ್ಯತೆಯನ್ನು ಅನಾವರಣ ಮಾಡುತ್ತದೆ.ಪ್ರಶಂಸೆ ಮಾಡುವಾಗ ಅದನ್ನು ಮತ್ತೊಬ್ಬರ ಸಾಮರ್ಥ್ಯಕ್ಕೆ ಹೋಲಿಕೆ ಮಾಡಬಾರದು.
ಒಂದು ನಮ್ಮ ಆತ್ಮ ಶ್ರದ್ಧೆಯಿಂದ ಮಾಡಿದ ಕಾರ್ಯ ನಮ್ಮ ಮನಸ್ಸಿಗೆ ಸಾತ್ವಿಕ ಆನಂದವನ್ನುಂಟು ಮಾಡುತ್ತದೆ.ಆ ಪರಮಾನಂದವೇ ಅದಕ್ಕೆ ತಕ್ಕ ಬಹುಮಾನವಾಗಾರುತ್ತದೆ.
ಗೆಳೆಯರು ಒಳ್ಳೆಯದನ್ನು ಮಾಡುವಾಗ ಮೆಚ್ಚಿಕೊಳ್ಳಬೇಕು,ಉತ್ಸಾಹ ಪ್ರಶಂಸಿಸಬೇಕುತುಂಬಬೇಕು.ಆದರೆ ತಪ್ಪು ಮಾಡಿದಾಗ ಮೃದುವಾಗಿ ಆದರೆ ನಿಶ್ಚಯವಾಗಿ ಅದನ್ನು ತೋರಿಸಿಕೊಡಬೇಕು.ಸ್ನೇಹ ಮುರಿದುಹೋಗುವದೋ ಎನ್ನುವ ತವಕದಿಂದ ತೋರಿಸಿಕೊಡಲು ತಪ್ಪುವನು ಸ್ನೇಹಿತನಲ್ಲ ಶತ್ರುವಾಗುತ್ತಾನೆ.


‘ಅರ್ಹತೆ ಗಳಿಸು ಅನಂತರ ಆಸೆಪಡು’ಎಂಬ ಒಂದು ಇಂಗ್ಲಿಷ್ ಗಾದೆಯಂತೆ ಅರ್ಹತೆಯಿಲ್ಲದವನು ಮೇಲೇರಲು ಪ್ರಯತ್ನಿಸಿದರೆ ಏನು ಲಾಭ?
ಅರ್ಹತೆ ಪಡೆಯದೆ,ದುಡಿಯದೆ ಬುದ್ಧಿಶಕ್ತಿಗಳನ್ನು ಬೆಳೆಸಿಕೊಳ್ಳದೇ ಜೀವನದ ಬಂಡಿ ಸಾಗದು.ನಮ್ಮ ಸಂಸಾರ ರಥ ಸಾಗಿಸುವ  ಮಹಿಳೆ ತಾಯಿಯಾಗಿ,ಪತ್ನಿಯಾಗಿ ಬಾಳ ಪಯಣದಿ ಪತಿಗೆ ಜೊತೆಯಾಗಿ ತನ್ನ  ಪತಿ,ಮಕ್ಕಳಿಗಾಗಿ ಶ್ರೀಗಂಧದಂತೆ ಯಾವುದೇ ರೀತಿಯ ಪ್ರಶಂಸೆಯನ್ನು ಬಯಸದೇ ತನ್ನ ಕರ್ತವ್ಯ ಎಂಬ ನಿಟ್ಟಿನಲ್ಲಿ ತನ್ನ ಜೀವನವನ್ನು ತೇಯುತ್ತಾಳೆ. ಪ್ರಾಮಾಣಿಕತೆ ಬೆರೆತ ಕರ್ತವ್ಯ ಶುಭ ಅಂತ್ಯವನ್ನು ಬಯಸುತ್ತದೆಯೇ ಹೊರತು ಪ್ರಶಂಸೆಯನ್ನಲ್ಲ

ಜನರ ಪೊಳ್ಳು ಹೊಗಳಿಕೆಗೆ ದಾಸರಾದರೆ ನಮ್ಮ ಗುರಿಯಿಂದ ಹಿನ್ನಡೆ ಕಾಣುತ್ತೇವೆ.ಆ ಪ್ರಶಂಸೆಯನ್ನು ಉಳಿಸಿಕೊಳ್ಳುವ  ಹಂಬಲ ಹೆಚ್ಚುತ್ತದೆ.ಆಗ ನಮ್ಮ ಬದುಕು ನಮ್ಮ ಅಧೀನವಾರದು ನಮ್ಮ ಸಮಯ ಕೂಡ ನಮ್ಮದಾಗದು.


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

Leave a Reply

Back To Top