ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಟ್ರ್ಯಾಪ್ಡ್

ತಾರಾಗಣ- ರಾಜಕುಮಾರ್ ರಾವ್, ಗೀತಾಂಜಲಿ ತಾಪ ಇತರರು…

ಚಿತ್ರಕಥೆ- ಅಮಿತ್ ಜೋಶಿ

ನಿರ್ಮಾಣ ಸಂಸ್ಥೆ- ಫ್ಯಾಂಟಮ್ ಫಿಲಂಸ್

ಛಾಯಾಗ್ರಹಣ- ಸಿದ್ದಾರ್ಥ ದಿವಾನ್

ನಿರ್ದೇಶನ -ವಿಕ್ರಮಾದಿತ್ಯ ಮ ಮೋಟ್ವಾನಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಉಳಿವಿಗಾಗಿ ಜೀವಿಗಳು ನಿರಂತರ ಹೋರಾಟ ನಡೆಸುತ್ತಲೇ ಇರುತ್ತವೆ ಎಂಬುದು ಡಾರ್ವಿನ್ ವಾದ ಮನುಷ್ಯ ಅಸಹಾಯಕ ಸ್ಥಿತಿ ಗೆ ತಲುಪಿ ಬದುಕಿಗಾಗಿ ಸೆಣಸಾಟ ನಡೆಸುವಾಗ ಎಂತಹ ಹೋರಾಟಗಳನ್ನು ಮಾಡಬಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾದರೆ  ರಾಜಕುಮಾರ್ ರಾವ್ ಅಭಿನಯದ ಹಿಂದಿ ಸಿನಿಮಾ “ಟ್ರ್ಯಾಪ್ಡ್ “ನೋಡಬೇಕು.

         ಶೌರ್ಯ (ರಾಜಕುಮಾರ್  ರಾವ್)ಈ ಸಿನಿಮಾದ ನಾಯಕ . ಸಾಫ್ಟ್ ವೇರ್ ಇಂಜಿನಿಯರ್ ಮುಂಬೈ ವಾಸಿ, ಸದ್ಯದಲ್ಲೇ ತಾನು ಮದುವೆಯಾಗಬೇಕೆಂದು ನಿರ್ಧರಿಸಿ ತನ್ನ ಬ್ಯಾಚುಲರ್ ರೂಮಿನಿಂದ ಮುಂಬೈನ ಒಂದು ಅಪಾರ್ಟ್ಮೆಂಟ್”  ಸ್ವರ್ಗ”ಗೆ ಶಿಫ್ಟ್ ಆಗುತ್ತಾನೆ .ಅವನ ಬಜೆಟ್ ಗೆ ಅನುಕೂಲವಾಗುವ  ಹಾಗೆ  ಅವನು ಆಯ್ಕೆ ಮಾಡಿಕೊಂಡದ್ದು 35 ನೇ ಅಂತಸ್ತಿನಲ್ಲಿದ್ದ ಮನೆ ಇಡೀ ಅಪಾರ್ಟ್ಮೆಂಟ್ನ ಯಾವ ಮನೆಯಲ್ಲೂ ಯಾರು ವಾಸವಿಲ್ಲ ,ಇರುವ ಒಬ್ಬ ವಾಚ್ ವಾಚ್ ಮ್ಯಾನ್ ನೆಪಕ್ಕೆ ಮಾತ್ರ ಅವನಿಗೆ ಕಿವಿಯು ಸ್ವಲ್ಪ ಮಂದ.

         ಕಚೇರಿಗೆ ಹೊರಡುವ ದಾವಂತದಲ್ಲಿ ಕೀ ಬಾಗಿಲಿಗೆ ಸಿಕ್ಕಿಸಿ ಒಳಗಿಂದ ಲಾಕ್ ಆಗುತ್ತಾನೆ ನಮ್ಮ ನಾಯಕ ಶೌರ್ಯ ಇಲ್ಲಿಂದ ಅವನ ವನವಾಸ ಪ್ರಾರಂಭ. ಮನೆಗೆ ವಿದ್ಯುತ್ ಸಂಪರ್ಕ ಸರಿ ಇಲ್ಲದ್ದರಿಂದ ಅವನ ಫೋನ್ ಸಹ ಚಾರ್ಜ್ ಆಗಿಲ್ಲ ಹಾಗಾಗಿ ಅವನು ಹೊರಗಿನವರೊಂದಿಗೆ ಸಂಪರ್ಕ ಕಳೆದುಕೊಂಡು ಒಳಗೆ ಬಂಧಿ ಆಗುತ್ತಾನೆ. ಬಾಗಿಲನ್ನು ತೆಗೆಯಲು ಅವನು ನಡೆಸುವ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತದೆ.

       ಹೀಗೆ ಬಂಧಿತನಾದ ನಾಯಕ ಹೊರಗೆ ಬರಲು ನಡೆಸುವ ಪ್ರಯತ್ನವೇ ಚಿತ್ರದ ಹೂರಣ. ಸತತ ನಾಲ್ಕೈದು ದಿನ ಮನೆಯೊಳಗೆ ಬಂಧಿ ಆಗುವ ನಾಯಕನ ಅವಸ್ಥೆಯ ಚಿತ್ರಣ ಇಲ್ಲಿ ಕಾಣಬಹುದು ಧಾವಂತ ಬದುಕಿನ ಮುಂಬೈ ಜೀವನದಲ್ಲಿ 35ನೇ ಅಂತಸ್ತಿನ ಕೋಣೆಯಲ್ಲಿ ಸಹಾಯಕ್ಕಾಗಿ ಅಂಗಲಾಚುವ ಅವನ ಯತ್ನಗಳು ಅವು ನಿರರ್ಥಕಗೊಳುವುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

           ಮೊದಲನೆಯ ದಿನ ತನ್ನದೊಂದು ನೀರಿನ ಬಾಟಲ್ ಎರಡು ಬಿಸ್ಕೆಟ್ ಪ್ಯಾಕೆಟ್ ನೊಂದಿಗೆ ಅವನು ಕಾಲ ಹಾಕುತ್ತಾನೆ, ಆದರೆ ಮರುದಿನದ ಹೊಟ್ಟೆ ಹಸಿವಿಗೆ ಅವನಲ್ಲಿ ಏನು ಉಳಿದಿಲ್ಲ , ನೀರು ಆಹಾರಕ್ಕಾಗಿ ಪರದಾಡುವ ಸ್ಥಿತಿಗೆ ಅವನು ತಲುಪುತ್ತಾನೆ.

           ಬಾಲ್ಕನಿಯಲ್ಲಿ ನಿಂತು ಸಹಾಯಕ್ಕಾಗಿ ಕೂಗುವುದು ಅರಣ್ಯರೋದನವಾಗುತ್ತದೆ, ತನ್ನ ಸಂಕಷ್ಟ ಸ್ಥಿತಿ ತಿಳಿಸಲು ಟೂತ್ಪೇಸ್ಟ್ ನಿಂದ ಹೆಲ್ಪ್ ಎಂದು ಬೋರ್ಡ್ ಬರೆದು (ಹಳೆಯ ಕಾರ್ಡ್ ಬೋರ್ಡ್) ಮೇಲೆ ಎಲ್ಲಾ ಕಡೆ ಎಸೆಯುತ್ತಾನೆ ಜನರ ಗಮನ ತನ್ನಡೆಗೆ ಸೆಳೆಯಲು ಬೆಂಕಿಯನ್ನು ಹಚ್ಚುತ್ತಾನೆ ಬೆಂಕಿಯಲ್ಲಿ ಹೆಲ್ಪ್ ಮೀ ಎಂದು ಬರೆಯುತ್ತಾನೆ , ಆದರೆ ಅವೆಲ್ಲವೂ ನಿರರ್ಥಕವಾಗುತ್ತದೆ…!

         ಅಪಾರ್ಟ್ಮೆಂಟ್ ನಲ್ಲಿ ಮೂರನೆಯ ದಿನಕ್ಕೆ ಅವನ ವನವಾಸ ಮುಂದೂಡಲ್ಪಡುತ್ತದೆ.i ಅನ್ನ ಆಹಾರವಿಲ್ಲದೆ, ಕುಡಿಯಲು ನೀರು ಇಲ್ಲದೆ ಜನ ಸಂಪರ್ಕವೂ ಇಲ್ಲದೆ ವಿದ್ಯುತ್ ಇಲ್ಲದೆ ಸಂಪೂರ್ಣ ಕಗ್ಗತ್ತಿನಲ್ಲಿ ಅವನ ಜೀವನ ತಳ್ಳಲ್ಪಡುತ್ತದೆ. ಉಳಿವಿಗಾಗಿ ಅವನು ಪಡುವ ಪರಿಪಾಟಲು ದಯಾನೀಯ …!!ಅಪ್ಪಟ ಸಸ್ಯಾಹಾರಿಯಾಗಿದ್ದ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಲು ಬಾಲ್ಕನಿಗೆ ಬರುವ ಪಾರಿವಾಳವನ್ನು ಸುಟ್ಟು ತಿನ್ನುತ್ತಾನೆ ಬಾಯಾರಿಕೆಯಿಂದ ಬಳಲಿ ತನ್ನ ಮೂತ್ರ ತಾನೇ ಕುಡಿದು ವಾಂತಿ ಮಾಡಿಕೊಳ್ಳುತ್ತಾನೆ..!!

ತನ್ನ ಉಳಿವಿಗಾಗಿ ಪರಿಸರಕ್ಕೆ  ಹೊಂದಿಕೊಳ್ಳುವ ಮನುಷ್ಯ ಪ್ರಯತ್ನಗಳನ್ನು ಇಲ್ಲಿ ನಾವು ಗುರುತಿಸಬಹುದು.

            ಇಂಥ ಕರುಣಾ ಜನಕ ಸ್ಥಿತಿಯಿಂದ ಅವನು ತಪ್ಪಿಸಿಕೊಂಡಿದ್ದು ಹೇಗೆ ? ಇಂಥ ವಿಷಮ ಪರಿಸ್ಥಿತಿಯಿಂದ ಹೊರಬರಲು ಅವನು ಕಂಡುಕೊಂಡ ಉಪಾಯಗಳೇನು? ಸಾವು ಬದುಕಿನ ನಡುವಿನ ಅವನ ಹೋರಾಟಕ್ಕೆ ಅಂತಿಮ ಹೇಗೆ? ಏನು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಿನಿಮಾ ನೋಡಲೇಬೇಕು..

ಬಂಧನದಿಂದ ಹೊರಬರಲು ಅವಿರತ ಪ್ರಯತ್ನ ನಡೆಸುವ ನಾಯಕನ ಪಾತ್ರದಲ್ಲಿ ರಾಜಕುಮಾರ್ ರಾವ್ ಅವರ ಅಭಿನಯ ಮನೋಜ್ಞ. ಹೊರಬರಲು ನಡೆಸುವ ಪ್ರತಿ ಪ್ರಯತ್ನಗಳು ಅವುಗಳು ವಿಫಲಗೊಂಡಾಗ ಆಗುವ ಹತಾಶೆ ನಿರಾಶೆ ಇವೆಲ್ಲವೂಗಳನ್ನು ಅತ್ಯುತ್ತಮವಾಗಿ ಅಭಿವ್ಯಕ್ತಿ ಪಡಿಸಿದ್ದಾರೆ ಅವರು .ಬಿಡದ ಛಲ ಕೆಚ್ಚು ಮೌನ ಹೋರಾಟದ ಭಾವ ನಿರ್ಲಿಪ್ತತೆ ಇವೆಲ್ಲ ಗಮನಿಯ.

         ಸಿದ್ದಾರ್ಥ್ ದಿವಾನ್ ರವರ ಕ್ಯಾಮೆರಾ ಕಣ್ಣುಗಳಲ್ಲಿ ಅಪಾರ್ಟ್ಮೆಂಟ್ನ ನೈಜ ಬೆಳಕು ಕತ್ತಲು

ಸೆರೆಗೊಂಡಿದೆ .ಅವರ ಕ್ಯಾಮರಾಕಣ್ಣುಗಳಲ್ಲಿ ಸೆರೆಯಾದ ರಾತ್ರಿಯಲ್ಲಿನ ಮುಂಬೈನ ಅಪಾರ್ಟ್ಮೆಂಟ್ ಗಳ ಬೆಳಕಿನ ಚಿತ್ರಣ ಚೆಂದ.  .

           ಬಂಧಿತನಾಗುವವನ ಅಸಹಾಯಕತೆ ಭಯ ಸಿಟ್ಟು ಭೀತಿ ಮನಸ್ಥಿತಿಗಳನ್ನು ಚಿತ್ರಿಸುವುದರಲ್ಲಿ ಚಿತ್ರದ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನಿ ಯಶಸ್ವಿಯಾಗಿದ್ದಾರೆ.

          ಚಿತ್ರದ ನಿರ್ದೇಶಕ ಹಾಗೂ ನಾಯಕ ಇಬ್ಬರ ಪ್ರಾಮಾಣಿಕ ಪ್ರಯತ್ನ ವೀಕ್ಷಕರನ್ನು 102 ನಿಮಿಷಗಳ ಕಾಲ ಮುಂದೇನು ಎಂಬಂತೆ  ಕಟ್ಟಿ ಹಾಕುವುದಂತು ಸತ್ಯ .ಇಲ್ಲಿನ ನಾಯಕನ ಗೆಲುವಾಗಲೀ ಸೋಲಾಗಲೀ ಯಾವುದು ಇತರ ಚಿತ್ರಗಳಂತೆ ವೈಭವಿಕರಿಸಲ್ಪಟ್ಟಿಲ್ಲ ಇಲ್ಲಿ ಎಲ್ಲವೂ ಸಹಜ ಸ್ವಾಭಾವಿಕ ,ಇದು ಈ ಚಿತ್ರದ ಹೆಗ್ಗಳಿಕೆಯು ಕೂಡ. ಸಣ್ಣ ಸಣ್ಣ ವಿಷಯಗಳು ನೀರವ ಮೌನ ಎಲ್ಲವನ್ನು ಗಮನಾರ್ಹವಾಗಿ ಚಿತ್ರಿಸಿರುವುದು ನಿರ್ದೇಶಕರ ಸೂಕ್ಷ್ಮತೆಗೆ ಸಾಕ್ಷಿ ,ಮಸಾಲೆ ಬಯಸಿ ಮನರಂಜನೆಗಾಗಿ ಕುಳಿತರೆ ಸಿನಿಮಾ ನಿರಾಶೆ ಗೊಳಿಸುತ್ತದೆ.

     ಬದುಕಿನಲ್ಲಿ ಅನಿರೀಕ್ಷಿತವಾಗಿ ಬಂದೊದಗುವ ಅಪಾಯಗಳು ಸನ್ನಿವೇಶಗಳು ಮನುಷ್ಯನನ್ನು ಹೇಗೆ ಇಕಟ್ಟಿಗೆ ಸಿಲುಕಿಸುತ್ತವೆ ಅದರಿಂದ ಪಾರಾಗುವ ಬಗ್ಗೆ ಹೇಗೆ ?ಅವನ ಸ್ಪಂದನೆ ಹೇಗೆ ? ಎಂಬುದಕ್ಕೆ ಈ ಸಿನಿಮಾ ಪ್ರೇರಣೆ…

ತಾರಾಗಣ- ರಾಜಕುಮಾರ್ ರಾವ್, ಗೀತಾಂಜಲಿ ತಾಪ ಇತರರು…

ಚಿತ್ರಕಥೆ- ಅಮಿತ್ ಜೋಶಿ

ನಿರ್ಮಾಣ ಸಂಸ್ಥೆ- ಫ್ಯಾಂಟಮ್ ಫಿಲಂಸ್

ಛಾಯಾಗ್ರಹಣ- ಸಿದ್ದಾರ್ಥ ದಿವಾನ್

ನಿರ್ದೇಶನ -ವಿಕ್ರಮಾದಿತ್ಯ ಮ ಮೋಟ್ವಾನಿ

ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top