ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ದತ್ತ ಸಾಲು ಸೋಲಲು ಬಿಡದೆ ಒಲವ ಆಸರೆ ನೀಡುತ ನಡೆದೆಯಲ್ಲ ನೀನು.
ಸೋಲಲು ಬಿಡದೆ ಒಲವ ಆಸರೆ ನೀಡುತ ನಡೆದೆಯಲ್ಲ ನೀನು
ಗೆಲುವು ಹುಡುಕಿ ಬರುವಂತೆ ಪ್ರೀತಿಯ ಕಡೆದೆಯಲ್ಲ ನೀನು.
ಬೆಂಗಾಡಿನ ಬದುಕಿಗೆ ಅನುರಾಗದ ತೈಲವ ಎರೆದೆಯಲ್ಲವೇ.
ಸಂಗಡದಿ ಸದಾ ಧೈರ್ಯ ತುಂಬುತ ದುಃಖ ತೊಡೆದೆಯಲ್ಲ ನೀನು.
ಗೆಳೆತನದ ವಿಶಾಲ ಅಂಬರದಿ ಲವಲೇಶವೂ ಭಯವಿಲ್ಲ.
ಹಗೆತನದ ಹಂಗಿಲ್ಲದೆ ಬದುಕಿನ ಪಾಠ ಜಡೆದೆಯಲ್ಲ ನೀನು.
ಏನೆಲ್ಲ ಕಳೆದುಕೊಂಡರೂ ಮಿತೃತ್ವದ ಬಾಂಧವ್ಯ ಬಿಟ್ಟಿರಲಾರೆನು
ಹಗಲೆಲ್ಲ ಹೆಗಲ ನೀಡಿ ಪೊರೆದು ಆತಂಕ ಸರಿಸಿ ತಡೆದೆಯಲ್ಲ ನೀನು
ಜೇನ ಹೊಳೆಯಂತೆ ತಬ್ಬಿ ಆಸರೆ ಇತ್ತಾಗ ಜಯಳಿಗೇನು ಕೊರತೆ .
ಮೇಣ ಬಸದಿಯ ಶಿಲೆಯಂತೆ ಕರಗಿ ಮೆತ್ತಗೆ ಪಡೆದೆಯಲ್ಲ ನೀನು.