ಪ್ರೊ. ರಾಜನಂದಾ ಘಾರ್ಗಿ-ಗಝಲ್

ಕಾವ್ಯ ಸಂಗಾತಿ

ಗಜಲ್

ಪ್ರೊ. ರಾಜನಂದಾ ಘಾರ್ಗಿ

ಹೃದಯ ಚೂರಾದರೂ ಕದಲದಿರು ಮನವೇ
ಕಣ್ಣಿರ ಧಾರೆಯಲಿ ಮುಳುಗಿ ಕರಗದಿರು ಮನವೇ

ನೋವಿನಲಿ ಹುಟ್ಟಿ ನೋವಿನಲೇ ಬೆಳೆದಿರುವೆ
ಗಟ್ಟಿಗೊಳಿಸಿದ ಮೈ ಮನಗಳ ಸಡಲಿಸದಿರು ಮನವೇ

ಭಾವಬಂಧನಗಳು ನೆಮ್ಮದಿಯ ಕದಿಯುವವು
ಸಂಭಂದಗಳ ಸಂಕೀರ್ಣತೆಗೆ ಹೆದರದಿರು ಮನವೇ

ನಡೆವ ದಾರಿಯಲಿ ಕಷ್ಟ ಕೋಟಲೆಗಳು ನೂರು
ಜೀವನದ ಸಂಕೀರ್ಣತೆಗೆ ಬೆದರದಿರು ಮನವೇ

ರಾತ್ರಿ ಕಳೆದು ಬರುವ ನೇಸರನಿಗಾಗಿ ಕಾದಿಹಳು ರಾಜಿ
ಕಳೆದ ಕನಸುಗಳಿಗಾಗಿ ಕನವರಿಸದಿರು ಮನವೇ


Leave a Reply

Back To Top