ಬಯಲ ಹೂ-ಪುಸ್ತಕ ಪರಿಚಯ(ಕವನ ಸಂಕಲನ)

ಪುಸ್ತಕ ಸಂಗಾತಿ

ಬಯಲ ಹೂ

ಗೀತಾ ಭರಮಸಾಗರ

ಬಯಲ ಹೂ
ಕವನ ಸಂಕಲನ
ಗೀತಾ ಭರಮಸಾಗರ

ನೇರಿಶಾ ಪ್ರಕಾಶನ
ಕಡೂರ್
ಪುಟ ಸಂಖ್ಯೆ 96
ಬೆಲೆ ರೂ 120/


ಕಾಲದ ಸಿಕ್ಕು ಬಿಡಿಸಿಕೊಳ್ಳುವ ಬಯಲ ಹೂ

ನೀರಿಶಾ ಪ್ರಕಾಶನದ 11ನೇ ಕುಸುಮ ಬಯಲ ಹೂ.ಶಿಕ್ಷಕಿ ಶಿಕ್ಷಕರ ಸಂಘದ ನಿರ್ದೇಶಕರೂ, ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪ್ರತಿನಿಧಿ ಗೀತಾ ಭರಮಸಾಗರ ಅವರ ಮೊದಲ ಕವನ ಸಂಕಲನ
ಚಿತ್ರದುರ್ಗ ಕಲ್ಲಿನ ಕೋಟೆಯ ಮಣ್ಣಿನ ಘಮದ 57 ಹೂಗಳು ಬಯಲಲಿ ಸಹಜವಾಗಿ ಅರಳಿ ಓದುಗರ ಮನದಲಿ ಪರಿಮಳ ಸೂಸುವ ಬಯಲ ಹೂಗಳಿವು

ಕವಯತ್ರಿ ಗೀತಾ ಅವರಿಗೆ ಕಾಡಿದ ಪ್ರೀತಿ, ಪ್ರೇಮ ಪ್ರಣಯ,ತಾಯಿ,ಪ್ರಕೃತಿ ಹೆಣ್ತನ, ರೈತ,ರಾಧೆ, ಸ್ವಾಮಿ ವಿವೇಕಾನಂದ, ಪುಟ್ಟರಾಜ ಕವಿ ಗವಾಯಿ,ಬಾಹುಬಲಿ ಮುಂತಾದವರು ಕಾವ್ಯದ ವಸ್ತು ವಾಗಿದ್ದಾರೆ.ಸ್ತೀ ಸಂವೇದನೆ ಹಿನ್ನಲೆಯಲ್ಲಿ ಕೆಲ ಕವಿತೆಗಳು ರಚಿತವಾಗಿವೆ.

ಮನುಷ್ಯ ಸಂಬಂಧಗಳಅನಿವಾರ್ಯತೆ, ವಾಸ್ತವದ ಜಗತ್ತಿನ ಚಿತ್ರಣ ಕಾವ್ಯ ಕಸೂತಿ ಗಟ್ಟಿಯಾಗಿ ನೇಯ್ದದ್ದನ್ನು ಸಂಕಲನದಲ್ಲಿ ಕಾಣಬಹುದು.
ಬದುಕಿನ ಅನೂಹ್ಯ ಸಾಧ್ಯತೆಗಳ ಬಗ್ಗೆ ಓದುಗರಿಗೆ ಚಿಂತನೆಗೆ ತೊಡಗಿಕೊಳ್ಳುವಂತೆ ಚಿತ್ರಿತವಾಗಿವೆಸಾಮಾಜಿಕ ಅಸಮಾನತೆ ಕುರಿತು ತಣ್ಣನೆಯ ಸಿಟ್ಟು, ಸೆಡವು,ಆಕ್ರೋಶ ವರ್ತಮಾನದ ತಲ್ಲಣ, ಕಾಲದ ಸಿಕ್ಕುಗಳನ್ನು ಬಿಡಿಸಿ ಕೊಳ್ಳವ ಪ್ರಾಮಾಣಿಕ ಪ್ರಯತ್ನ ಮೊದಲ ಸಂಕಲನ ದ ಮೂಲಕ ಮಾಡಿದ್ದಾರೆ. ಸಂಕಲನ ದಲ್ಲಿ ಎಚ್ ಆರ್ ರಮೇಶ್ ಅವರ ಮುನ್ನುಡಿ ಮೇದೂರ ತೇಜ, ಪ್ರೊ.ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಕನಕ ರಾಜ್ ಆರನ ಕಟ್ಟೆ ಅವರ ಪ್ರತಿಸ್ಪಂದನೆಯ ಮಾತುಗಳು ಸಂಕಲನಕ್ಕೆ ನುಡಿ ತೋರಣ ಕಟ್ಟಿ ದಂತಿವೆ


ಕಾಲಚಕ್ರ ದ ಅಡಿಯಲ್ಲಿ ಸಿಲುಕಿ
ಮನ್ವ0ತರಕೆ ನಾಂದಿಯಾಗು
ಪರಿವರ್ತನೆಗೆ ಸಿದ್ದನಾಗು
ಕಾಲಂತರಕೆ ಹೊಸ ಮುನ್ನುಡಿ


ಬರೆ ಎನ್ನುವ ಭರವಸೆಯ ಕವಯತ್ರಿ ಗೀತಾ ಭರಮಸಾಗರ ಅವರು ಕಾವ್ಯ ನನ್ನೊಡಲುಕೆಡದ ಕೆಂಡದ ಉರಿ ಬೂದಿ ಯೊಳಗೆ ಅಡಗಿದ್ದು
ಆ ಉರಿಯತಾಪ ವನ್ನೇ ಸಹಿಸಿ, ಸಹನೆಯ ಮದ್ದು ಅರೆದು ಗುಟುಕಿ ಹಾಕಬೇನ್ನುವ ಹಪಾ ಹಪಿಇದೆ. ಕವಯತ್ರಿ ಒಡಲಲ್ಲಿ ಬಯಲು ಬೆರಗಾಗಿದೆ. ಬಯಲು ಹೂ ವಾಗಿ ಅರಳಿದೆ. ಮೊಗ್ಗು ಹೂ ಕಾಯಿ ಯಾಗಿ ಹಣ್ಣಾಗಿ ಮಾಗುವ ನೋಡುವ ಮುಟ್ಟುವ ಮುಸೂವಅನುಭವಿಸುವ ವಾಸ್ತವ ಲೋಕಕ್ಕೆ ಹತ್ತಿರ ವಾಗುವ ಧಾವಂತ ಕವಯತ್ರಿ ಇದೆ.

ಒಡಲ ಹೊಕ್ಕಳು ಬಳ್ಳಿಯಲ್ಲಿ ಅರಳಿದ ಬಯಲ ಹೂ ಮುಡಿಯಬೇಕು. ಸೂಸುವ ಸುಗಂಧ ಪರಿಮಳ ಅಸ್ವಾದಿಸ ಬೇಕು. ಅಂದಾಗ ಮಾತ್ರ ಕವಯತ್ರಿ ಗೀತಾ ಅವರ ಶ್ರಮ ಸಾರ್ಥಕವಾಗುತ್ತದೆ ಕನ್ನಡ ಸಾರಸ್ವತ ಲೋಕದ ಪ್ರೋತ್ಸಾಹ ಗೀತಾ ಅವರ ಬೆನ್ನ ಹಿಂದಿನ ಬೆಳಕಾಗಿ ಪ್ರಕಾಶಿಸಲಿ ನೇರಿಶಾ ಪ್ರಕಾಶನ ದ ಗೆಳೆಯರು ಹೊಸ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಡಲಿ ಎಂದು ಆಶಿಸುತ್ತೇನೆ


ಎ ಎಸ್. ಮಕಾನದಾರ

Leave a Reply

Back To Top