ರೂಪ ಶಿವಕುಮಾರ್ ಕವಿತೆ-ಮಾತು

ಕಾವ್ಯ ಸಂಗಾತಿ

ಮಾತು

ರೂಪ ಶಿವಕುಮಾರ್

ಮಾತು ಮಾತು ಮಾತು
ಜನರೆಲ್ಲಾ ಕಳೆಯುವರು
ಇದರಲಲ್ಲೇ ಬಹಳ ಹೊತ್ತು
ಮಾತು ಏನಿದರ ಕಿಮ್ಮತ್ತು
ಯಾರು ಅರಿಯರು ಇದರ ಗಮ್ಮತ್ತು

ನುಡಿಯ ಬಲ್ಲವರಿಗೆ ಇದುವೇ
ನಿಜ ಬಂಡವಾಳ
ಕೆಲವರ ಜೀವನದ ಜೀವಾಳ
ಅಂದು ಧರ್ಮರಾಯನ ಅರಿವಿಲ್ಲದ ಮಾತಿನಿಂದಾಯಿತು ಮಹಾಭಾರತ
ಅಂತೆಯೇ ದಶರಥನ ಮೋಹದ ಮಾತಿನಿಂದಾಯಿತು ರಾಮಾಯಣ

ಮಾತು ಏನಿದರ ಗಮ್ಮತ್ತು ಜಾರಿದರೆ ಏನಿಲ್ಲ ಕಿಮ್ಮತ್ತು ಒಂದೊಂದು ಮಾತು ಮನಕೆ ಮುದ ಕೊಡುವಂತೆ ಒಂದೊಂದು ಮಾತು ಚುಚ್ಚುವುದು ಮನವ ಮುಳ್ಳಂte

ಅದಕ್ಕೆ ಶರಣರು ನುಡಿದಿರುವುದು
ಮಾತೆ ಮುತ್ತು
ಮಾತೇ ಮೃತ್ಯು


Leave a Reply

Back To Top