ಕಾವ್ಯ ಸಂಗಾತಿ
ಎಮ್ಮಾರ್ಕೆ
“ಬರಗಾಲ”

ಬ್ಯಾಸಗಿ ಯಾಕಾದರ ಬರತಾದೋ
ಭರಪೂರ ಬಿಸಿಲನ್ನು ತರತಾದೋ,
ಭೂತಾಯಿ ಒಡಲೆಲ್ಲ ಬಿರಿದಾದೋ
ಮರಗಿ ಮಳಿಹನಿಯ ಕರದಾದೋ
ಹಳ್ಳ-ಕೊಳ್ಳ ಬಾಂವೆಲ್ಲ ಬತ್ತ್ಯಾವೋ
ನೀರಿರದೇ ಮೀನೆಲ್ಲವು ಸತ್ತಾವೋ,
ಹಸುಕರು ಹುಲ್ಲಿರದ ಹಲುಬ್ಯಾವೋ
ಕೂಸೆಲ್ಲ ಹಾಲಿರದ ಸೊರಗ್ಯಾವೋ
ರೈತಪ್ಪ ಮರ ಮರ ಮರಗ್ಯಾನೋ
ತಲಿಕೆಟ್ಟು ಹುಚ್ಚಾಗಿ ತಿರಗ್ಯಾನೋ,
ಕಡಿಗಿ ಟೊಂಗಿಗಿ ನೇಣ ಬಿಗಿದಾನೋ
ನೇಣಿನೊಳಗ ಗೊನ ಒಗದಾನೋ
ಮಿತಿ ಮೀರಿ ಎಂದು ಮೆರಿಬಾರದೋ
ಎಲ್ಲಾ ಇದ್ದು ಸತ್ತಂಗ ಇರಬಾರದೋ,
ಬರಗಾಲ ಮತ್ತೆಂದು ಬರಬಾರದೋ
ಕೇಡುಗಾಲ ಕೈ ಬೀಸಿ ಕರಿಬಾರದೋ
ಎಮ್ಮಾರ್ಕೆ

ಬರಗಾಲ ಕವನ ಚೆನ್ನಾಗಿದೆ.