ಅಂಕಣ ಸಂಗಾತಿ

ಪ್ರಸ್ತುತ

ಕನ್ನಡಕದ ಕಥೆ ಮತ್ತು ವಾಗ್ದಾನ

    ವರುಷದ ಹಿಂದಿನ ಮಾತು.  ಒಮ್ಮೆ ಓದುವಾಗ ಅಕ್ಷರ ಮಂಜಾದಂತೆನಿಸಿ ಬೇರೆ ಬುಕ್ ನೋಡಿದೆ ಅದೂ ಹಾಗೇ ಅನಿಸಿದಾಗ ಕಣ್ ತಿಕ್ಕಿಕೊಂಡು, ದೊಡ್ಡದು ಮಾಡಿ ನೋಡಿದೆ ಊಹುಂ ಮತ್ತೆ ಅದೇ ಮಬ್ಬು, ಅಂದರೆ ನನಗೆ ಚಷ್ಮಾ ಬಂದಿವೆಯಾ? ಅನಿಸಿ ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ನಮ್ಮನೆ ಎದುರಿನ ಆ ಅಜ್ಜ (ಎಪ್ಪತ್ತು  ಎಂಭತ್ತು ಇರಬಹುದು) ಬರಿಗಣ್ಣಿನಲ್ಲೇ ಪೇಪರ್ ಓದ್ತಿದ್ರು. ನನಗೆ ಇಷ್ಟು ಬೇಗ ಅನಿಸಿತು. ನಮ್ಮೆಜಮಾನರು ಹೇಳ್ತಿದ್ದ ಒಂದು ಗಾದೆ ನೆನಪಾಯ್ತು. “ಚಾಲೀಸ್ ಆದ್ಮೇಲೆ ಚಾಳೀಸ್ ಬರೂದ” ಅವಾಗ ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ ಅನ್ನೂದು ಮತ್ತೆ ಪ್ರೂವ್ ಆಯ್ತು. ಜೊತೆಗೆ ನಲವತ್ತರ ಮೇಲಾಗಿದ್ದು ಗಮನಕ್ಕೆ ಬಂತು. ಅಇವರದೇ ರೀಡಿಂಗ್ ಗ್ಲಾಸ್ ಹಾಕಿ ಓದಿದೆ . ವಾವ್! ಎಷ್ಟು ನಿಚ್ಚಳವಾಗಿ ಕಾಣಿಸುತ್ತಿವೆ ಅಕ್ಷರ ಇದನ್ನು ಹೇಗೆ ಮಾಡಿರಬಹುದು ಎನಿಸಿ ಒಮ್ಮೆ ಹಾಕಿ ಒಮ್ಮೆ ತೆಗೆದು ವ್ಯತ್ಯಾಸ ಕಂಡು ವಿಸ್ಮಯಗೊಂಡೆ. ಕನ್ನಡಕ ಇರದಿದ್ದರೆ ಹೇಗಿತ್ತು? ಎನಿಸಿತು. ಯೋಚಿಸಲಾಗಲಿಲ್ಲ.

   ಕನ್ನಡಕ ಬರಲು ಕಾರಣ ಇದೇ ಎಂದು ಹೇಳಲಾಗದು. ಅನುವಂಶೀಯತೆ, ಆಹಾರ ಪದ್ಧತಿ, ಜೀವನ ಕ್ರಮಹೀಗೆ ಕಾರಣವಿದ್ದೀತು. ಪುಟ್ಟ ಮಕ್ಕಳಿಗೆ ಕನ್ನಡಕ ಬಂದಿದ್ದು ನೋಡಿ ಎಷ್ಟೋ ಸಲ ಮರುಗಿದ್ದುಂಟು. ಆಗೆಲ್ಲ ದೇವರು ನಮಗೆ ಈ ನಿಚ್ಚಳವಾದ ಆರೋಗ್ಯಕರ ಕಣ್ಣು ಕೊಟ್ಟು ಈ ನಿಸರ್ಗ ಚೆಲುವ ಕಾಣಲು ಅವಕಾಶ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದೂ ಇದೆ. ಕಣ್ಣಿರದಿದ್ದರೆ ಏನೂ ಇಲ್ಲ. ಅದಕ್ಕೇ ಹೇಳುವುದು “ಪಂಚೇAದ್ರಿಯಾನA ನಯನಂ ಪ್ರಧಾನಂ”

   ಕಣ್ಣಿರದಿದ್ದರೂ ಪುರಾಣ, ಕೀರ್ತನ ರಚಿಸಿ ಹಾಡಿ ಹೊಸ ಹೊಸ ರಾಗಗಳ ಕೊಡುಗೆ ನೀಡಿದ ಪುಟ್ಟರಾಜ ಗವಾಯಿ, ಪಂಚಾಕ್ಷರೀ ಗವಾಯಿಯಂಥವರು ವೈಕಲ್ಯ ಎನ್ನುವುದುದೇಹಕ್ಕೆ ಸಂಬAಧಿಸಿದ್ದು, ವಿದ್ವತ್ತಿಗಲ್ಲ, ಸಾಧನೆಗಲ್ಲ ಎಂದು ತೋರಿಸಿದ ಮಹನೀಯರು.

   ಅಂದಹಾಗೆ ಕನ್ನಡಕದ ಕತೆ ಯಾಕೆ ಬರೆಯಿಸಿಕೊಂಡಿತೆಂದರೆ… ಮೊನ್ನೆ ಸುಧಾ ವಾರಪತ್ರಿಕೆ ಬಂತು, ಹಾಗೇ ಕಣ್ಣಾಡಿಸಲು ಕುಳಿತೆ ದೊಡ್ಡ ಅಕ್ಷರ ಕಾಣ್ತಿವೆ. ಒಳ್ಳೆಯ ವಿಷಯ, ಲೇಖನಗಳಿವೆ. ಓದಲಾಗ್ತಿಲ್ಲ. ಛೆ! ಸವಿರುಚಿ ಮುಂದೆ ಕುಳಿತಿದ್ದರೂ ತಿನ್ನಲಾಗುತಿಲ್ಲವೆನಿಸಿತು. ಒಳಬಂದು ಕನ್ನಡಕ … ಅಡುಗೆ ಮನೆ, ಡ್ರೆಸ್ಸಿಂಗ್ ರೂಂ, ರೀಡಿಂಗ್ ರೂಂ, ಟೀಪಾಯ್ ಮೇಲೆ … ಊಹುಂ ಇಲ್ಲ ಕಾಣ್ತಿಲ್ಲ. ಎಲ್ಲಿಟ್ಟೆ ನೆನಪಿಲ್ಲ ಕೊನೆಗೆ ಮನೆಯವರನ್ನೆಲ್ಲಾ ‘ನೀವು ಕಾಣಿರೇ ನೀವು ಕಾಣಿರೇ?’ ಎಂದು ಕೇಳಿ ಇವರ ಹತ್ರ ಬೈಸಿಕೊಂಡು ಡೈನಿಂಗ್ ಟೇಬಲ್ ಮೇಲೆ ಇದ್ದ ಓದುವ ಕಣ್ಣಿನ ಮೇಲೆ ನ್ಯಾಪ್ಕಿನ್ ಬಿದ್ದಿದೆ. ಆಗ ಓದುವ ಇಂಟ್ರೆಸ್ಟ್ ಹೋಯ್ತು ಆಗ ಈ ಕನ್ನಡಕದ ಕಥೆ ಮೂಡಿತು.

     ಕನ್ನಡಕದ ಪುರಾಣ ಒಂದೊಂದು ತರಹ. ಮರೆಗುಳಿ ವಯಸಿಗೆ ವಕ್ಕರಿಸುವ ಇದು ಎಲ್ಲರನ್ನೂ ಓಡಾಡಿಸುತ್ತದೆ.

    ಓದಿಗಾಗಿ ಬಂದಿದ್ದು ಓಕೆ, ಕೆಲವರಿಗೆ ಟಿ ವಿ ನೋಡಿ, ತಲೆಇದ್ದವರಿಗೆ ತಲೆನೋವಿಗೆ ಕನ್ನಡಕ ಬಂದು ಎದ್ದಕೂಡಲೇ ಹಾಕಬೇಕು ಮಲಗುವಾಗ ಎತ್ತಿಡಬೇಕು ಎಂದಿರುತ್ತಾರೆ ಡಾಕ್ಟರ್. ಅದರಲ್ಲೂ ಬೈಪೊಕಸ್ ಲೆನ್ಸ್, ಪ್ರೊಗ್ರೆಸಿವ್ ಲೆನ್ಸ್, ರೀಡಿಂಗ್ ಗ್ಲಾಸ್ ಹೀಗೇ ಅನೇಕ ವಿಧಗಳಿವೆ. ಒಂದೇ ಚಷ್ಮಾದಲ್ಲಿ ದೂರದ ಹತ್ತಿರದ ದೃಷ್ಠಿದೋಷಗಳನ್ನು ಸಮತೋಲಿಸುವ ಗ್ಲಾಸ್‌ಗಳಿಸುತ್ತವೆ. ಮತ್ತು ಅದು ಕೂಲಿಂಗ್ ತರನೂ ಆಗಿರುತ್ತೆ. ಬೆಲೆ ಹೆಚ್ಚಾದಂತೆ ಗ್ಲಾಸ್ ಎಕ್ಯುರೇಟ್, ಥಿನ್ ಅಂಡ್ ವೇಟ್‌ಲೆಸ್ ಆಗಿರುತ್ತವೆ. ಸೋಜಿಗವೆಂದರೆ ಎರಡೂ ಕಣ್ಣುಗಳ ದೃಷ್ಟಿ ಅಂಶ ಬೇರೆ ಬೇರೆ ಇರುತ್ತದೆ.

  ಚಷ್ಮಾ ಚೆಲುವಿಗೂ ಓಕೆ, ವಿಕಲತೆಗೂ ಓಕೆ.

   ಕನ್ನಡಕಕ್ಕೆ ತನ್ನದೇ ಆದ ಚೆಲುವಿದೆ. ಆ ಚೆಲುವಿಗೆ ಧರಿಸಿದವರ ಚೆಲುವು ಹೆಚ್ಚಿಸುವ ತಾಕತ್ತಿದೆ. ಆಗ ಜಾತ್ರೆಯಲ್ಲಿ ಬಣ್ಣದ ಕನ್ನಡಕ ರ‍್ತಿದ್ವು. ಈಗಲೂ ಕೇಜ್ ಹುಡುಗರು ಬಣ್ಣದ ಗಾಲ್ ಇಷ್ಟಪಡುತ್ತಾರೆ. ಗಾಗಲ್ ಹಾಕುವುದೂ ಒಂದು ಗತ್ತೇ. ಎರಡೂ ಕೈಯಿಂದ ಹಾಕುವುದು, ಒಂದೇ ಕೈಯಿಂದ ತಿರುಗಿಸಿ ಹಾಕುವುದು, ತಲೆ ಎತ್ತಿ ಹಾಕುವುದು, ತಲೆ ಮೇಲೆ ಹಾಕುವುದು ಹೀಗೆ. ಗಾಗಲ್ ಈಗ ಕಾಮನ್ ಆಗಿಬಿಟ್ಟಿದೆ. ಕನ್ನಡಕ ಭಾರ, ಇರಿಟೇಶನ್ ಎನ್ನುವವರಿಗೆ ಲೆನ್ಸ್ ಅಳವಡಿಕೆ ಅವಕಾಶವೂ ಇದೆ. ತ್ರೀಡಿ ಮೂವಿಗಳಿಗಾಗಿಯೇ ಒಂದುರೀತಿಯ ವಿಶೇಷ ಕನ್ನಡಕಗಳು ಇರುತ್ತವೆ. ಅದನ್ನು ಹಾಕಿ ಒಮ್ಮೆ ಎಂಜಾಯ್ ಮಾಡಲೇಬೇಕು.

    ಪುರಾಣದಲ್ಲಿ ಎಷ್ಟು ವಯಸ್ಸಾದವರಿಗೂ ಕನ್ನಡಕ ಇಲ್ಲದಿರುವುದು ಅಚ್ಚರಿ. ಅವಾಗ ಕನ್ನಡಕದ ಆವಿಷ್ಕಾರವಾಗಿರಲಿಕ್ಕಿಲ್ಲ, ಅಥವಾ ಅವರಿಗೆ ಅದರ ಅವಶ್ಯಕತೆಯೇ ಬಂದಿರಲಿಕ್ಕಿಲ್ಲ. ಮುಗಿದ ಕತೆ ಬೇಡ ಮುಂದೆ ಬರಲಿರುವ ಮೆಟಾವರ್ಸ ಅಂದರೆ ಇದು ಒಂದು ಡಿಜಿಟಲ್ ಪ್ರಪಂಚ. ಈ ವರ್ಚುವಲ್ ಪ್ರಪಂಚದಲ್ಲಿ ವಿಹರಿಸಲೆಂದೇ ನಿರ್ಮಿಸಲಾದ ಒಂದು ವಿಶೇಷ ಕನ್ನಡಕ ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಸಧ್ಯ ಆ ಜಗತ್ತಿನಲ್ಲೆ ಯುವ ಸಮೂಹ ಕಳೆದುಹೋಗದಿದ್ದರೆ ಸಾಕು. ವಿಜ್ಞಾನ, ತಂತ್ರಜ್ಞಾನದ ಉಪಯೋಗ, ಬಳಕೆಯ ಸಾಧಕ ಬಾಧಕಗಳನ್ನು ಅರಿತು ಬಾಳಿದರೆ ಒಳ್ಳೆಯದು.

    ಈ ಕನ್ನಡಕ ದಾಟಿ ಒಂದು ಹೆಜ್ಜೆ ಮುಂದೆ ಹೋಗೋಣ ಬನ್ನಿ. ಮೊನ್ನೆ ಒಂದು ಸೀಮಂತ ಕಾರ್ಯಕ್ರಮದ ಸಮಯದಲ್ಲಿ ಆ ಬಸಿರಿ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಘೋಷಿಸಿದಳು. ಯಾಕೆ ಆ ಸಮಯವನ್ನೇ ನೇತ್ರದಾನ ವಾಗ್ದಾನಕ್ಕೆ ಆಯ್ಕೆ ಮಾಡಿಕೊಂಡೆ ಎಂದರೆ, “ಆ ಸಮಯದಲ್ಲಿ ಬಂಧುಗಳು ನೆಂಟರು ಬಂದಿರುತ್ತಾರೆ ಆಗ ನಾನು ತೆಗೆದುಕೊಳ್ಳುವ  ಈ ನಿರ್ಧಾರದಿಂದ ಅವರೂ ಪ್ರೇರೇಪಿತರಾಗಲಿ ಎಂಬುದೆ ಉದ್ದೇಶ” ಎಂದರು ಆ ಸೆಲೆಬ್ರಿಟಿ ಪತ್ನಿ. ಹಾಗೇ ಆಯಿತಂತೆ ಬಂದವರಲ್ಲಿ ಎಂಬತ್ತು ರ‍್ಸೆಂಟ್ ಜನ ತಾವೂ ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದಾಗ ಅವರ ಆ ಕಾರ್ಯಕ್ರಮ ಮಾಡೆಲ್ ಸೀಮಂತವಾಗಿ ನಿಜಕ್ಕೂ ಸಾರ್ಥಕವಾಗಿತ್ತಂತೆ.

   ಮೊನ್ನೆ ನಿಧನರಾದ ಕರ್ನಾಟಕ ರತ್ನ ಪುನೀತ ರಾಜ್‌ಕುಮಾರ ಅವರ ನೇತ್ರಗಳನ್ನು ನಾಲ್ಕು ಜನರಿಗೆ ಅಳವಡಿಸಿದ್ದನ್ನು ಡಾ|| ಭುಜಂಗಶೆಟ್ಟಿ ಅವರು ಮಾಧ್ಯಮಗಳಲ್ಲಿ ಹೇಳಿದಾಗಲೇ ನಾನೂ ನಿರ್ಧರಿಸಿದ್ದೇನೆ ನೇತ್ರದಾನ ಮಾಡಲು, ಅಂಧರ ಕಣ್ಣಾಗಲು,  ನೀವು?

   ಇಲ್ಲದಾಗಲೇ ಇದ್ದುದರ ಅರಿವಾಗುವುದು ಅನ್ನುವಂತೆ ಕಣ್ಣು ಸರಿ ಇರುವಾಗ ಏನೂ ಅನಿಸುವುದಿಲ್ಲ. ಕನ್ನಡಕ ಬಂದಾಗ ಕಣ್ಣಿಲ್ಲದವರ ಬಗ್ಗೆ ಏನೇನೋ ಹೊಳೆಯತೊಡಗಿತು.

    ಒಂದು ಕುತೂಹಲಕಾರಿ ಸಂಗತಿ : ಮೆಕ್ಸಿಕೋದ ಟಿಲ್ಟೆಪಾಕ್ ಗ್ರಾಮವನ್ನು ಕುರುಡರ ಗ್ರಾಮವೆಂದು ಪ್ರಸಿದ್ಧವಾಗಿದೆ. ಇಲ್ಲಿ ಮನುಷ್ಯರಷೇ ಅಲ್ಲ ಪ್ರಾಣಿಗಳೂ ಕುರುಡರು

ಅದರಂತೆ ಮೆಕ್ಸಿಕೋದ ಒಂದು ಹಳಿ ಇದೆ ಅಲ್ಲಿ ಮಕ್ಕಳು ಹುಟ್ಟುವಾಗ ಚೆನ್ನಾಗಿರುತ್ತಾರೆ. ಕೆಲವು ದಿನಗಳ ಬಳಿಕ ಕುರುಡರಾಗುತ್ತಾರೆ. ಅದಕ್ಕೆ ಕಾರಣ ಇಲ್ಲಿ ಒಂದು ವಿಷಪೂರಿತ ಮರವಿದೆ ಆ ಮರವನ್ನು ನೋಡಿದ ಕೂಡಲಢ ಕುರುಡರಾಗುತ್ತಾರೆ. ಅದು ಶಾಪಗ್ರಸ್ತ ಮರ ಅಂತ ಆ ಗಾಮದವರ ನಂಬಿಕೆ. ಅದು ಮೂಢನಂಬಿಕೆ ಅಲ್ಲಿ ವಿಷಪೂರಿತ ನೊಣಗಳಿವೆ ಅಉ ಕಚ್ಚಿದ್ರೆ ದೃಷ್ಟಿ ಹೋಗುತ್ತದೆ ಎಂಬುದು ತಜ್ಞರ ಅಂಬೋಣ. ಅವರನ್ನು ಬೇರೆಡೆಗೆ ವಾಸಿಸಲು ಸರಕಾರ ವ್ಯವಸ್ಥೆ ಮಾಡಿದರೂ ಆ ವಾತಾವರಣ ಅವರಿಗೆ ಸರಿಹೋಗದ ಕಾರಣ ಅವರು ಅದೇ ಗ್ರಾವiದಲ್ಲೇ ಇದ್ದಾರಂತೆ.

   ಜಗತ್ತಿನಲ್ಲಿ ಸುಮಾರು ೪೯ ಮಿಲಿಯನ್ ಅಂಧರು ಮತ್ತು ೨೮೫ ಮಿಲಿಯನ್ ದೃಷ್ಟಿಹೀನರು ಇರುವುದಾಗಿ ತಿಳಿದುಬಂದಿದ್ದು ಭಾರತದಲ್ಲೇ ಶೇ. ೨೦ ಜನರಿದ್ದಾರೆ

   ಒಂದು ಸಾರಿ ಯೋಚಿಸಿ ಬಂಧುಗಳೇ ಚೂರು ಸಂಜೆಯಾದರೆ ಸಾಕು ಬೀದಿದೀಪಗಳಿರದಿದ್ದಾಗ ನಾವು ಮುಂದೆ ನಡೆಯಲು ನಿಧಾನಿಸಿ ಕೈಲಿರುವ ಫೋನ್ ಟಾರ್ಚ ಆನ್ ಮಾಡಿಕೊಳ್ತೇವೆ. ಅಲ್ವಾ? ಇಡೀ ಜೀವನವನ್ನೇ ಕತ್ತಲಿನಲ್ಲಿ ಕಳೆಯುತ್ತಾರಲ್ಲ ಅವರಿಗೆ ನಾವು ಸತ್ತಮೇಲೆ ಮಣ್ಣಾಗುವ ಒಂದು ಕಣ್ಣಾದರೂ ಕೊಡಲು ಸಾಧ್ಯವಾದರೆ ಯಾಕಾಗಬಾರದು?  ಈಗ ಒಂದು ಸಣ್ಣ ಪ್ರಯೋಗ ಮಾಡಿ ಹಗಲು ಒಂದು ಗಂಟೆ ಬೇಡ ಅರ್ಧ ಗಂಟೆ ಅಂಧರAತೆ ಕಣ್ಣು ಮುಚ್ಚಿ ಒಳಗೆ ಹೊರಗೆ, ಮೇಲೆ ಕೆಳಗೆ. ಓಡಾಡಲು ಪ್ರಯತ್ನಿಸಿ. ಅವರ ಕಷ್ಟ ಏನೆಂದು ಅರಿವಿಗೆ ಬರುತ್ತದೆ.  ಅದು ಮಜವೂ ಆಗಿರುತ್ತದೆ. ನಮ್ಮನ್ನು ನಾವು ಸಂಭಾಳಿಸಿಕೊಳ್ಳುವ ಬಗೆಯೂ ಆಗುತ್ತದೆ. ‘ವಿಶ್ವ ದೃಷ್ಟಿ ದಿನಾಚರಣೆ’ ಯನ್ನು ಅಕ್ಟೋಬರ್ ೧೩ ರಂದು ಆಚರಿಸಲಾಗುತ್ತದೆ. ಅಂದು ನಾವೂ ಒಂದು ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಬೇಕಿದೆ.

   ಅಂಧರಿಗಾಗಿಯೇ ಬ್ರೈಲ್ ಲಿಪಿ (ಉಬ್ಬು ಅಕ್ಷರ) ಕಂಡು ಹಿಡಿದು ಅವರೂ ಸಾಕ್ಷರರಾಗು ಸಾಧ್ಯವಾಗಿಸಿದ ‘ಲೂಯಿಸ್ ಬ್ರೈಲ್’ ಅವರಿಗೆ ಈ ಥಣ್ಣನೆಯ ಹೊತ್ತಿನಲ್ಲಿ ಮನಸಾರೆ ಧನ್ಯವಾದಗಳನ್ನು ಅರ್ಪಿಸೋಣ. ಅಂದಹಾಗೆ ವಿಶ್ವ ‘ಬ್ರೈಲ್ ದಿನಾಚರಣೆ’ ಯನ್ನು ಲೂಯಿಸ್ ಅವರ ಜನುಮದಿನವಾದ ಜನೆವರಿ ೪ ರಂದು ಆಚರಿಸಲಾಗುತ್ತದೆ. ಹಾಗೇ ಬರೆಯುತಿದ್ದರೆ ಮನಸು ಆರ್ದ್ರ ಗೊಳ್ಳುತ್ತದೆ  ಈಗ ಸಾಕು. ನಮಸ್ಕಾರಗಳು

—————————-

.

                                                          


ನಿಂಗಮ್ಮ ಭಾವಿಕಟ್ಟಿ 

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿ

2 thoughts on “

Leave a Reply

Back To Top