ಕಾವ್ಯ ಸಂಗಾತಿ
ಮೌನ ಮರೆಸೀತೇನು
ಉಷಾಜ್ಯೋತಿ, ಮಾನ್ವಿ

ಮೌನ ತಾನು ಮರೆಸಿತೇನು
ಕಳೆದ ಒಲವ ಕ್ಷಣಗಳನು
ನೀನು ನಾನು ನಾವು ಆದ
ಆ ಮಧುರ ಸಮಯವನು
ಮೌನ ತಾನು ಮರೆಸಿತೇನು
ಮಿಡಿವ ಎದೆಯ ನೋವನು
ದೇಹವೆರಡು ಜೀವವೊಂದಾಗಿ
ನಲಿದ ಸವಿ ಘಳಿಗೆಗಳನು

ಮೌನ ತಾನು ಮರೆಸಿತೇನು
ನಮ್ಮ ಪವಿತ್ರ ಬಂಧವನು
ಮಾತು ಮೂಕವಾಗಲು
ಮುರಿದ ಪ್ರೇಮ ಹಂದರವನು
ಮೌನ ತಾನು ಮರೆಸಿತೇನು
ಉಕ್ಕಿ ಬರುವ ವೇದನೆಯನು
ಭಾವಗಂಗೆ ಸುಳಿಯಲಿ ಸಿಕ್ಕ
ಸಾವಿರಾರು ಭ್ರಮೆಗಳನು
