ಗಜಲ್

ಕಾವ್ಯ ಸಂಗಾತಿ

ಗಜಲ್

ನಯನ ಭಟ್. ಜಿ. ಎಸ್.

Loved Ones' Ashes Swirled into Comforting Glass Art Creations

ಒಸರುತಿಹ ಶಾಹಿಯಲಿ ಕ್ಲೇಶಗಳ ಗಾಢ ಅಟ್ಟಹಾಸ ವ್ಯಥೆಯನು ಅಡಗಿಸುವುದು ಎಂತು
ತಿರುಗುವ ಕಾಲಚಕ್ರದಿ ಆವರಿಸಿದೆ ಭೀತಿಯ ಛಾಯೆ ಆಸೆಯನು ಚಿಗುರಿಸುವುದು ಎಂತು

ನೋವುಗಳ ತಣಿಸಿದ ಗೆಲುವುಗಳನು ನಡುಗಿಸುತಿದೆ ತಲ್ಲಣಗಳ ನಖ ಹಿಂಜರಿಕೆಗೆ ದೂಡಿ
ಮಳೆಬಿಲ್ಲ ವನಪಿನಂತಾಗಿದೆ ಭರವಸೆಯ ಭವ್ಯತೆ ಗಾಢ ಕಂಬನಿಗಳ ಒರೆಸುವುದು ಎಂತು

ಚಿತ್ತ ಬಿತ್ತಿಗೆ ಮಡಿಲ ತುಂಬಿಸುವ ಕಾತುರ ನಾಳೆಗಳ ಹೆಜ್ಜೆಗಳನು ನಗುವಿವ ಸಖ್ಯದಿ ಕ್ರಮಿಸಿ
ಕುಹಕತೆಯ ತಿವಿತದಿ ಬೆಂದ ಮನಸ್ಸಿನ ಗಮ್ಯಕೆ ಒಗ್ಗದ ಹಟಗಳ ಕಮರಿಸುವುದು ಎಂತು

ಬೆಟ್ಟು ಮಾಡಿ ಬೊಟ್ಟಿಡುತಿದೆ ಭಾವಗಳ ಬಣ್ಣ ಬೇಲಿಹೂ ನೀನೆನುತ ಜರೆದು ಮನವೊಡೆದು
ಸುಖ್ಯಗೊಳ್ಳದ ಅನುಭಾವದಿ ಗೊಣಗುತಿಹ ಅಬ್ಬೇಪಾರಿ ಕನಸುಗಳ ಚಿವುಟುವುದು ಎಂತು

ಭಾವಗಡಲಲಿ ಮಿಂದೇಳುತ ನವ್ಯ ನಾಳೆಗಳ ಅರಸಿ ನಡೆಯುತಿದೆ ‘ನಯನಾ’ ಳ ಅವಗಾಹನೆ
ಬಾಳ ಚಕ್ರಕೆ ತಿರುವುಗಳು ಅಗಣಿತ ಸದ್ಭಾವ ಹಾರೈಕೆಗಳ ನಿರ್ಲಕ್ಷಿಸುವುದು ಎಂತು.


Leave a Reply

Back To Top