ಗಜಲ್

ಗಜಲ್

ನಯನ . ಜಿ . ಎಸ್

text

ಹೌದು ಗಾಂಧಿವಾದಿ ಆಗಬಯಸಿ ಹೋರಾಡುವವಳಿದ್ದೇನೆ ತೊಂದರೆ ಏನೀಗ
ಕ್ಷಣ ಕ್ಷಣವೂ ಸೋಲನುಂಡರೂ ಎದ್ದುನಿಲ್ಲುವವಳಿದ್ದೇನೆ ತೊಂದರೆ ಏನೀಗ !

ಧಮನಿ ಧಮನಿಯೊಳು ಸಿಡಿದೇಳುತ್ತೇನೆ ಅಕ್ರಮಗಳ ಜಾಲ ಕಂಡಾಗ
ಪ್ರೀತಿಯ ಭಾವಕೆ ಹನಿಯಾಗಿ ಜೊತೆಯಾಗುವವಳಿದ್ದೇನೆ ತೊಂದರೆ ಏನೀಗ !

ಅಲ್ಲಲ್ಲಿ ಕಾರುಣ್ಯತೆಯ ಸೋಗಿನಲಿ ಬೀಗುವವರು ಇದ್ದಾರೆ
ಗರ್ವಿಷ್ಟರಾದವರನು ಶಿಕ್ಷಿಸಲು ಹೊರಡುವವಳಿದ್ದೇನೆ ತೊಂದರೆ ಏನೀಗ !

ಸತ್ಯಾಸತ್ಯತೆಗಳ ಜಾಲವನು ಅರಸಿ ಬೇಧಿಸಲು ಸದಾ ಮುನ್ನುಗುತ್ತೇನೆ
ನನ್ತತನವ ಗೌರವಿಸದವರನ್ನು ದೂಷಿಸುವವಳಿದ್ದೇನೆ ತೊಂದರೆ ಏನೀಗ !

ಸದ್ಭಾವ ಸನ್ಮಾರ್ಗಗಳ ತತ್ವವನು ಗೌರವಿಸುವುದು ‘ನಯನಾ’ ಳ ಮನ
ಅನವರತ ಈ ತತ್ವಕೆ ಬಾಳ ಮುಡಿಪಾಗಿಡುವವಳಿದ್ದೇನೆ ತೊಂದರೆ ಏನೀಗ !!

**************************************

One thought on “ಗಜಲ್

  1. ಚೆನ್ನಾಗಿದೆ ಬರವಣಿಗೆ ಮುಂದುವರಿಯಲಿ ನಯನ

Leave a Reply

Back To Top