ರಾಜಕಾರಣ
ಮೂರನೇ ಶಕ್ತಿಯಾಗಿ
ಬೆಳೆಯಬೇಕಾದ
ಜನತಾದಳ
ಕು.ಸ.ಮಧುಸೂದನರಂಗೇನಹಳ್ಳಿ
ಸಂಸದೀಯ ಪ್ರಜಾಸತ್ತೆಯಲ್ಲಿ ಚುನಾವಣೆಗಳು ಅತ್ಯಂತ ಮಹತ್ವಪೂರ್ಣವಾದವು. ಆ ಚುನಾವಣೆಗಳಲ್ಲಿ ಭಾಗವಹಿಸುವ ರಾಜಕೀಯ ಪಕ್ಷಗಳಿಗೂ ಅಷ್ಟೇ ಮಹತ್ವವಿದೆ.ಚುನಾವಣಾ ಆಯೋಗದ ಮಾನ್ಯತೆ ಪಡೆದ ಸುಮಾರು ೨೬೩೮ ರಾಜಕೀಯ ಪಕ್ಷಗಳು ನಮ್ಮಲ್ಲಿ ಇವೆ.ಇವುಗಳಲ್ಲಿ ಎಂಟು ರಾಷ್ಟಿçಯ ಪಕ್ಷಗಳಿದ್ದು ಉಳಿದವು ಪ್ರಾದೇಶಿಕ ಪಕ್ಷಗಳಾಗಿವೆ.
ಈ ಎಂಟು ರಾಜಕೀಯ ಪಕ್ಷಗಳಲ್ಲಿ ಕೇವಲ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಮಾತ್ರ ಇವತ್ತಿಗೂತಮ್ಮ ರಾಷ್ಟಿçಯ ಸ್ವರೂಪವನ್ನು ಉಳಿಸಿಕೊಂಡಿವೆಯೆನ್ನಬಹುದು.ಈ ಪಕ್ಷಗಳು ಸ್ಥಳೀಯ ಜನರ ಹಿತತಾಸಕ್ತಿಗಳನ್ನು ನಿರ್ಲಕ್ಷಿಸಿದಾಗೆಲ್ಲ ಮತದಾರರು ತಮ್ಮ ನೆಲದಲ್ಲಿ ಜನಿಸಿದ ಪ್ರಾದೇಶಿಕ ಪಕ್ಷಗಳನ್ನು ಆರಿಸಿ ತಮ್ಮ ಹಿತ ಕಾಪಾಡಿಕೊಳ್ಳಲು ಮುಂದಾಗಿರುವುದು ನಡೆದು ಬಂದಿದೆ.
ಆದರಿವತ್ತು ದೇಶದ ರಾಜಕೀಯ ಚಿತ್ರಣ ಬಹಳಷ್ಟುಬದಲಾಗಿದೆ.ತನ್ನ ಭ್ರಷ್ಟತೆ ಮತ್ತು ಚೇತರಿಸಿಕೊಳ್ಳಲಾಗದಂತಹ ಜಡತ್ವದಿಂದ ಕಾಂಗ್ರೇಸ್ ರಾಷ್ಟç ಮಟ್ಟದಲ್ಲಿ ದುರ್ಬಲಗೊಂಡಂತೆ ಕಾಣುತ್ತಿದೆ.ತನ್ನ ಮತೀಯವಾದ ಮತ್ತು ಸಾಂಸ್ಕೃತಿಕ ರಾಜಕಾರಣದ ಸಿದ್ದಾಂತಗಳಿಂದ ಬಿ.ಜೆ.ಪಿ. ದೇಶದೆಲ್ಲೆಡೆ ಬೇರು ಬಿಡುತ್ತ, ದಿನ ದಿನಕ್ಕೆ ಬಲಿಷ್ಠವಾಗುತ್ತಿದೆ
ಇಂತಹ ಸಂಕೀರ್ಣ ಸಂದರ್ಭದಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಹೊರತಾದ ಮೂರನೇ ರಾಜಕೀಯ ಶಕ್ತಿಯೊಂದರ ನಿರೀಕ್ಷೆಯಲ್ಲಿ ಜನತೆಯಿದ್ದಾರೆ.ರಾಷ್ಟç ಮಟ್ಟದಲ್ಲಿ ಇಂತಹದೊಂದು ತೃತೀಯ ರಂಗವೊಂದು ಸದ್ಯಕ್ಕೆ ಸೃಷ್ಠಿಯಾಗಲಾರದಂತಹ ಸನ್ನಿವೇಶ ದೇಶದಲ್ಲಿದೆ. ಆದರೆ ಕೆಲವೊಂದು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಾಜಪದ ಓಟಕ್ಕೆ ತಡೆಗೋಡೆಯಾಗಿ ನಿಲ್ಲುವ ಹೋರಾಟ ನಡೆಸಿವೆ. ಉದಾಹರಣೆಗೆ: ಬಿಹಾರದಲ್ಲಿ ತೇಜಸ್ವಿ ಯಾದವ್ ಅವರ (ಲಲ್ಲೂಪ್ರಸಾದ್ ಯಾದವರ) ರಾಷ್ಟಿçಯ ಜನತಾದಳ, ತಮಿಳುನಾಡಲ್ಲಿಸ್ಟಾಲಿನ್ ಅವರ.ಡಿ.ಎಂ.ಕೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೇಸ್, ಒಡಿಸ್ಸಾದಲ್ಲಿ ನವೀನ್ ಪಟ್ನಾಯಕರ ಬಿಜು ಜನತಾದಳ,ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನಪಕ್ಷ, ಅಖಿಲೇಶ್ ಯಾದವರ ಸಮಾಜವಾದಿ ಪಕ್ಷಗಳು,ದೆಹಲಿಯಲ್ಲಿ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷಗಳು ಇದುವರೆಗೂ ಬಾಜಪವನ್ನು ತಮ್ಮ ರಾಜ್ಯದಲ್ಲಿ ಎದುರಿಸಿ ಹೋರಾಡುತ್ತಿವೆ(ಈಹೋರಾಟದಲ್ಲಿ ಕೆಲವು ಪಕ್ಷಗಳು ಕಾಂಗ್ರೇಸ್ಸಿನ ಸಹಾಯವನ್ನೂ ಪಡೆಯುತ್ತಿರುವುದೂ ಇದೆ.)
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಹೊರತಾಗಿ ಕನ್ನಡಿಗರ ಹಿತಾಸಕ್ತಿಗಳನ್ನು ಕಾಯಬಲ್ಲಂತಹ ಪ್ರಾದೇಶಿಕ ರಾಜಕೀಯ ಪಕ್ಷವೊಂದು ಬೇಕೆಂದು ಕನ್ನಡಿಗರು ಬಯಸುವುದರಲ್ಲಿ ತಪ್ಪೇನೂ ಇಲ್ಲ.
ಕಾಂಗ್ರೇಸ್ ಮತ್ತು ಬಿ.ಜೆ.ಪಿ.(ಬಿ.ಜೆ.ಪಿ. ಆಗಿನ್ನು ಜನಿಸಿತ್ತು) ಎರಡನ್ನೂ ಅದಿಕಾರದಿಂದ ದೂರವಿಡುವ ಹಾಗು ಸ್ಥಳೀಯ ನೆಲ-ಜಲದ ಹಿತಾಸಕ್ತಿಗಳ್ನು ಕಾಪಾಡಬಲ್ಲ ಪ್ರಾದೆಶಿಕ ರಾಜಕೀಯ ಶಕ್ತಿಯೊಂದರ ಅನಿವಾರ್ಯತೆಯನ್ನು ಕರ್ನಾಟಕದ ಜನತೆ ಎಂಭತ್ತರ ದಶಕದ ಪೂರ್ವಾರ್ದದಲ್ಲಿಯೇ ಅರಿತು ಜನತಾ ಪರಿವಾರವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದರು.ತದನಂತರದ ದಿನಗಳಲ್ಲಿ ಸ್ಪಷ್ಟ ಸಿದ್ದಾಂತಗಳ ಬದ್ದತೆಯಿರದೆ ಮತ್ತು ನಾಯಕರುಗಳ ಅಹಮ್ಮಿನ ನಡವಳಿಕೆಗಳಿಂದಾಗಿ ಜನತಾ ಪರಿವಾರ ಚೂರುಗಳಾಗಿ ಒಡೆಯುತ್ತ ಇವತ್ತು ಶ್ರೀ ಹೆಚ್. ಡಿ.ದೇವೇಗೌಡರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳದ ಹೆಸರಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.
ಇವತ್ತು ಇಡೀ ರಾಷ್ಟçದಲ್ಲಿ ತನ್ನ ಬೇರುಗಳನ್ನು ಬಿಡುತ್ತಾ, ರಾಜ್ಯಗಳನ್ನು ಒಂದೊಂದಾಗಿ ಗೆಲ್ಲುತ್ತಾ ಹೋಗುತ್ತಿರುವ ಬಾಜಪ ತನ್ನ ಪ್ರತ್ಯಕ್ಷ ಕೋಮುವಾದಿ ರಾಜಕಾರಣವನ್ನು ಬದಿಗಿಟ್ಟು ಅದರ ಇನ್ನೊಂದು ಮುಖವಾದ ರಾಷ್ಟಿçಯತೆ-ದೇಶಭಕ್ತಿಯೆಂಬ ಸಾಂಸ್ಕೃತಿಕ ರಾಜಕಾರಣ ಮಾಡುವಲ್ಲಿ ಯಶಸ್ವಿಯಾಗುತ್ತ ಹೋಗುತ್ತಿದೆ. ಅದರ ನಾಯಕತ್ವದ ಹೇಳಿಕೆ ನಡವಳಿಕೆಗಳನ್ನು ನೋಡಿದರೆ ಒಂದೇ ಪಕ್ಷದ ಸರ್ವಾಧಿಕಾರಿ ಆಳ್ವಿಕೆಯತ್ತ ಅದು ಸಾಗುತ್ತಿರುವಂತೆ ಕಾಣುತ್ತಿದೆ. ಇನ್ನು ಬಹುತೇಕ ರಾಜ್ಯಗಳಲ್ಲಿ ಸೋತು ಏದುಸಿರು ಬಿಡುವಂತೆ ಕಾಣುತ್ತಿರುವ ಕಾಂಗ್ರೇಸ್ ೨೦೨೪ರ ವೇಳೆಗೆ ಸುದಾರಿಸಿಕೊಂಡು ಚುನಾವಣೆಯನ್ನುಎದುರಿಸುವ ಶಕ್ತಿ ಮತ್ತು ಉತ್ಸಾಹ ಹೊಂದಿರುತ್ತದೆಯೇ ಎನ್ನುವುದು ಅನುಮಾನದ ವಿಷಯವಾಗಿದೆ.ಇನ್ನು ಅದಕ್ಕೂಮುಂಚೆಯೇ ೨೦೨೩ರಲ್ಲಿ ಕರ್ನಾಟಕವು ವಿದಾನಸಭಾ ಚುನಾವಣೆಗಳಿಗೆ ಹೋಗಲಿರುವುದರಿಂದ ರಾಜ್ಯದ ಜನತೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಬಯಸುತ್ತಿದ್ದಾರೆ. ಹೀಗೆ ಕಾಂಗ್ರೇಸ್ ಮತ್ತು ಬಾಜಪ ಹೊರತು ಪಡಿಸಿ ಮೂರನೇ ಆಯ್ಕೆಯೊಂದನ್ನು ಕನ್ನಡದ ಜನತೆ ಬಯಸುತ್ತಿರುವ ಸಂದರ್ಭದಲ್ಲಿಯೇ ಜನತಾದಳ ತೀವ್ರವಾದ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಬಲಾಢ್ಯ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬಲ್ಲ ಶಕ್ತಿ ಹೊಂದಿದ್ದ ಅದು ತನ್ನ ಆಂತರೀಕ ವೈರುಧ್ಯಗಳಿಂದ ಒಣಪ್ರತಿಷ್ಠೆಗಳಿಂದಾಗಿ,ಎರಡನೇ ಹಂತದ ನಾಯಕತ್ವದ ಕೊರತೆಯಿಂದಾಗಿ ದುರ್ಬಲವಾಗಿರುವಂತೆ ಕಾಣುತ್ತಿದೆ. ಹೀಗಾಗಿ ಜನತೆ ಎರಡೂ ರಾಷ್ಟಿçಯ ಪಕ್ಷಗಳನ್ನೂ ಸೋಲಿಸಿ ಅಧಿಕಾರ ಹಿಡಿಯಬಲ್ಲದೆಂಬ ನಂಬಿಕೆಯಲ್ಲಿ ಜನತಾ ದಳಕ್ಕೆ ಮತಹಾಕುವ ಸ್ಥಿತಿಯಲ್ಲಿ ಇಲ್ಲ.
ಆದರೆ ೨೦೦೮ರ ಮೊದಲು ಜನತಾದಳ ಹೀಗಿರಲಿಲ್ಲ. ಅವತ್ತು ಮತದಾರರ ಕಣ್ಣಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಗೆ ಪರ್ಯಾಯ ಸ್ಥಳೀಯ ರಾಜಕೀಯ ಶಕ್ತಿಯಾಗಿತ್ತು.ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಯನ್ನು ನಿರಾಕರಿಸುವ ಮನಸ್ಸುಗಳಿಗೆ ಜಾತ್ಯಾತೀತಜನತಾದಳ ಆಪ್ತವೆನಿಸಿತ್ತು.ಆದರೆ ಯಾವಾಗ ಹೆಚ್.ಡಿ.ಕುಮಾರಸ್ವಾಮಿಯವರು ೨೦೦೬ರಲ್ಲಿ ಬಿ.ಜೆ.ಪಿ.ಜೊತೆ ಮೈತ್ರಿ ಮಾಡಿಕೊಂಡರೊ ಅಲ್ಲಿಗೆ ರಾಜ್ಯದ ಜಾತ್ಯಾತೀತ ಜನತೆಗೆ ಬಾರಿ ಭ್ರಮನಿರಸನವಾಯಿತೆನ್ನಬಹುದು. ತದನಂತರ ಸ್ಥಳೀಯ ಮಟ್ಟದಲ್ಲಿ ತಮಗನಿಕೂಲವಾಗುವ ರೀತಿಯಲ್ಲಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಾ ಬಂದಿದೆ.ಮತ್ತೆ ೨೦೧೮ರ ಚುನಾವಣೆಯಲ್ಲಿ ಅತಂತ್ರ ವಿದಾನಸಭೆ ರಚನೆಯಾದಾಗ ಕಾಂಗ್ರೇಸ್ ಬೆಂಬಲದೊಂದಿಗೆಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅದಿಕಾರ ಸ್ವೀಕರಿಸಿ ತನ್ನ ಅವಕಾಶವಾದಿ ರಾಜಕಾರಣವನ್ನು ಮುಂದುವರೆಸಿತು.ಇದೀಗ ಅಧಿಕಾರ ಕಳೆದುಕೊಂಡು ವಿರೋದಪಕ್ಷದಲ್ಲಿ ಕೂತಿರುವಜನತಾದಳ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಎರಡರ ಜೊತೆಯು ಕಣ್ನಾಮುಚ್ಚಾಲೆಯಾಟ ಆಡುತ್ತಿದೆ.
ಮೈಸೂರು ನಗರಪಾಲಿಕೆಯಲ್ಲಿ ಕಾಂಗ್ರೇಸ್ ಜೊತೆ ಅಧಿಕಾರ ಹಂಚಿಕೊಳ್ಲುವ ಜಾತ್ಯಾತೀತ ಜನತಾದಳ,ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ಬಿ.ಜೆ.ಪಿ.ಯ ಜೊತೆ ಒಪ್ಪಂದಕ್ಕೆ ಬಂದು ಮುಮುಲ್ ಆಡಳಿತವನ್ನು ಬಿ.ಜೆ.ಪಿ.ಯ ಕೈಗೆ ಒಪ್ಪಿಸಬಲ್ಲದು.ಜನತಾದಳದ ಇಂತಹ ಅವಕಾಶವಾದಿ ರಾಜಕಾರಣವೇ ಇವತ್ತುಜನರನ್ನು ಅದರಿಂದ ದೂರ ಮಾಡುತ್ತಿದೆ.
ಜಾತ್ಯಾತೀತತೆ,ಕೋಮುವಾದದ ವಿರೋಧಿ ಮುಂತಾದ ಸಿದ್ದಾಂತಗಳ ಬಗ್ಗೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಯವ ನಂಬಿಕೆಯು ಇರುವಂತೆ ಕಾಣುತ್ತಿಲ್ಲ.ವಿರೋಧಪಕ್ಷವಾಗಿ ಆಡಳಿತಾರೂಢ ಬಿ.ಜೆ.ಪಿ. ಸರಕಾರವನ್ನು ಟೀಕಿಸವುದಕ್ಕಿಂತ ಹೆಚ್ಚಾಗಿ ತಮ್ಮ ಸಹ-ವಿರೋಧಪಕ್ಷವಾದ ಕಾಂಗ್ರೇಸ್ ಮೇಲೆಯೇ ಟೀಕಾಪ್ರಹಾರ ನಡೆಸುವುದೇ ಜನತಾದಳದ ನಾಯಕರುಗಳ ಚಾಳಿಯಾದಂತಿದೆ. ಆದರೆ ೨೦೨೩ರ ರಾಜ್ಯವಿದಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದು,ಜನತಾದಳದ ವರಿಷ್ಠರು ಮನಸ್ಸು ಮಾಡಿದರೆ ತಮ್ಮ ಪಕ್ಷವನ್ನು ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಗೆ ರ‍್ಯಾಯವಾಗಿ ಕಟ್ಟಿ ಬೆಳೆಸಬಹುದಾಗಿದೆ
ಹೀಗಾಗಿ ಜನತಾದಳ ಒಂದಿಷ್ಟು ಚಿಂತನೆ ನಡೆಸಿ ತನ್ನ ಸಿದ್ದಾಂತಗಳ ಪುನರ್ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲದು ಕಾಂಗ್ರೇಸ್ ಮತ್ತು ಬಾಜಪಗಳೆರಡನ್ನೂ ಸಮಾನಾಂತರ ದೂರದಲ್ಲಿಟ್ಟು ರಾಜಕಾರಣ ಮಾಡಬೇಕಿದೆ.ತಾತ್ಕಾಲಿಕ ಅಧಿಕಾರಕ್ಕೆ ಆಸೆ ಪಡುವ ನಾಯಕರುಗಳು ಮತ್ತು ಕಾರ್ಯಕರ್ತರುಗಳನ್ನು ಕಳದುಕೊಂಡರು ಪರವಾಗಿಲ್ಲ, ಉಳಿದೆರಡು ವರ್ಷಗಳಲ್ಲಿ ಹೊಸ ನಾಯಕ ಮತ್ತು ಕಾರ್ಯಕರ್ತರÀ ಪಡೆಯನ್ನು ಸಿದ್ದಪಡಿಸುತ್ತೇವೆಂಬ ಹಟತೊಟ್ಟು ಎಲ್ಲೆಲ್ಲಿ ಅದು ಬಾಜಪ ಮತ್ತು ಕಾಂಗ್ರೇಸ್ಸಿನ ಜೊತ ಮೈತ್ರಿ ಮಾಡಿಕೊಂಡಿದೆಯೊ ಆ ಮೈತ್ರಿಯನ್ನು ಮುರಿದುಕೊಂಡು ಹೊರಬೇಕಾಗಿದೆ. ಇದರಿಂದ ಒಂದಷ್ಟು ಹಿನ್ನಡೆಯಾಗಿ ಕೆಲವು ನಾಯಕರು ಕಾರ್ಯಕರ್ತರುಗಳು ದೂರ ಹೋದರೂ, ಪಕ್ಷದ ನಿಷ್ಠಾವಂತರು ಪಕ್ಷದಲ್ಲಿ ಉಳಿದೇ ಉಳಿಯುತ್ತಾರೆ.ಇದರಿಂದಾಗಿ ಎರಡು ಲಾಭಗಳಾಗಲಿವೆ. ಮೊದಲಿಗೆ ಬಾಜಪದಿಂದ ದೂರಬರುವುದರಿಂದ ಅಲ್ಪಸಂಖ್ಯಾತರ ಬೆಂಬಲ ಪಡೆಯಬಹುದಾಗಿದೆ.ಇನ್ನು ಕಾಂಗ್ರೇಸ್ಸಿನಿಂದ ದೂರ ಸರಿಯುವುದರಿಂದ ಕಾಂಗ್ರೇಸ್ಸಿನ ಭ್ರಷ್ಟತೆಯ ಬಗ್ಗೆ ಮಾತಾಡುವ ನೈತಿಕ ಶಕ್ತಿ ಗಳಿಸಿಕೊಳ್ಳುವ ಪಕ್ಷ ಜನರ ಮನಸ್ಸನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಖಂಡಿತಾ ಜನತಾದಳಕ್ಕೆ ತಾತ್ಕಾಲಿಕ ಹಿನ್ನಡೆಯುಂಟಾಗುವುದು ನಿಶ್ಚಿತವಾಗುವುದಾದರು ಮುಂದಿನ ದಿನಳಲ್ಲಿ ಒಳ್ಳೆಯ ಪಲಿತಾಂಶ ಪಡೆಯಬಹುದಾಗಿದೆ. ಇನ್ನು ಪಕ್ಷವನ್ನು ದೇವೇಗೌಡರು ಮತ್ತಷ್ಟು ಪ್ರಜಾಸತ್ತಾತ್ಮಕವಾಗಿ ನಡೆಸುವತ್ತ ಮನಸ್ಸು ಮಾಡಬೇಕಿದೆ. ಜನತಾ ಪರಿವಾದ ಅಧಿಕಾರ ವಿಕೇಂದ್ರಿಕರಣ ಸಿದ್ದಾಂತವನ್ನು ಪಕ್ಷದಲ್ಲಿಯೂ ಜಾರಿಗೆ ತಂದಲ್ಲಿ ಎರಡನೆ ಸಾಲಿನ ನಾಯಕರುಗಳಿಗೆ ಪಕ್ಷ ಕಟ್ಟುವ ಹುಮ್ಮಸ್ಸುದೊರೆತಂತಾಗುತ್ತದೆ. ಇನ್ನು ಮುಂದಿನ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿನ ವಿವಿಧ ಜನಪರ ಸಂಘಟನೆಗಳೊAದಿಗೆ ಮೈತ್ರಿ ಮಾತುಕತೆ ನಡೆಸಿ ಆದಷ್ಟು ಬೇಗ ಒಂದು ಜನಪರ ವೇದಿಕೆಯನ್ನು ರಚಿಸಿಕೊಳ್ಳಬೇಕಿದೆ.
ಕರ್ನಾಟಕದ ಮಟ್ಟಿಗೆ ಮೂರನೇ ಶಕ್ತಿಯಾಗಬಹುದಾದ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಸೃಷ್ಠಿಸುವಷ್ಟು ಶಕ್ತಿ ಇವತ್ತಿಗೂ ದೇವೇಗೌಡರಿಗಿದ್ದು,( ಈ ವಿಷಯದಲ್ಲಿ ಕುಮಾರಸ್ವಾಮಿಯವರು ದೇವೇಗೌಡರ ದಳಪತಿಯಾಗಿ ಅವರ ಶೈಲಿಯಲ್ಲಿಯೇ ಕೆಲಸ ಮಾಡಬೇಕಿದೆ) ಈ ಕುರಿತುಅವರು ರೈತ,ದಲಿತ,ಕನ್ನಡಪರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಉದಾರ ಹೃದಯದಿಂದ ಸಿದ್ದವಾಗಬೇಕಿದೆ.ಕನ್ನಡದ ನೆಲ-ಜಲಗಳ ರಕ್ಷಣೆಗಾಗಿ ಎಂಬ ಘೋಷವಾಕ್ಯದೊಂದಿಗೆ ಕಟಿಬದ್ದರಾಗಿ ಹೋರಾಟ ಮಾಡಿದ್ದೇ ಆದಲ್ಲಿ ೨೦೨೩ರ ಹೊತ್ತಿಗೆ ಜನತಾದಳ ಬಲಿಷ್ಠವಾಗವುದರಲ್ಲಿ ಸಂದೇಹವಿಲ್ಲ. ಈ ವಿಚಾರದಲ್ಲಿ ಶ್ರೀಕುಮಾರಸ್ವಾಮಿಯವರೂ ಸಹ ತಮ್ಮ ಬಾಜಪ ಪರವದ ಒಲವನ್ನು ತೊರೆದು ನಿಂತರೆ ಮಾತ್ರ ಇದು ಸಾದ್ಯವಾಗುತ್ತದೆ. ಇಲ್ಲದೆ ಇದ್ದಲ್ಲಿ ಜನತಾದಳ ಯಾವುದೇ ರಾಷ್ಟಿçಯ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡರೂ, ಆ ಪಕ್ಷಗಳು ಜನತಾದಳವನ್ನು ಮುಗಿಸುವ ದೃಷ್ಠಿಯಿಂದಲೇ ರಾಜಕೀಯ ಮಾಡುತ್ತವೆಯೆಂಬುದನ್ನು ಮರೆಯಬಾರದು.
ಪ್ರಾದೇಶಿಕ ಕ್ಷಗಳನ್ನು ಇಲ್ಲವಾಗಿಸಲು ನಡೆಸುವ ಕುತಂತ್ರಗಳ ವಿಷಯಕ್ಕೆ ಬಂದರೆ ಕಾಂಗ್ರೇಸ್ ಮತ್ತು ಬಾಜಪ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ಕುಮಾರಸ್ವಾಮಿಯವರು ಮನಗಾಣಬೇಕು. ಕೇಂದ್ರದ ಜನವಿರೋಧಿ ನಡೆಗಳ ವಿರುದ್ದ ಮತ್ತು ರಾಜ್ಯಸರಕಾರದ ಜಡ ಸರಕಾರದ ವಿರುದ್ದ ನಡೆಸುವ ಹೋÀರಾಟಮಾತ್ರ ಜನತೆಯ ನಂಬಿಕೆ ಗಳಿಸುತ್ತದೆಯೆಂಬುದನ್ನು ಜನತಾದಳದ ನಾಯಕರುಗಳು ಅರ್ಥಮಾಡಿಕೊಳ್ಳಬೇಕು
ಇಂತಹದೊಂದು ಧನಾತ್ಮಕ ಬೆಳವಣಿಗೆ ಬೇಕಾಗಿರುವುದು ಜನತಾದಳದ ಪುನಶ್ಚೇತನಕ್ಕೆ ಮಾತ್ರವಲ್ಲ. ಬದಲಿಗೆ ಕನ್ನಡನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಕನ್ನಡಿಗರ ಹಿತಕಾಪಾಡಲು ಸಹ ಎಂಬುದನ್ನು ಅವರುಗಳು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದೆ ಜನತಾದಳ ತೆಗೆದುಕೊಳ್ಳುವ ನಿರ್ದಾರಗಳು ಕರ್ನಾಟಕರಾಜ್ಯದ ಜನತೆಯ ಬದುಕಿನ ಮೇಲೆ ದೀರ್ಘಕಾಲಿನ ಪ್ರಬಾವ ಬೀರುತ್ತವೆ.
ಹೀಗಾಗಿ ಇವತ್ತು ದೇವೇಗೌಡರ, ಕುಮಾರಸ್ವಾಮಿಯವರ ಮುಂದಿನ ರಾಜಕೀಯ ತೀರ್ಮಾನಗಳನ್ನು ಕನ್ನಡದ ಜನತೆ ಅತೀವ ಕುತೂಹಲದಿಂದ ನೋಡುತ್ತಿದ್ದಾರೆ. ಎರಡೂ ರಾಷ್ಟಿçÃಯ ಪಕ್ಷಗಳಿಂದ ಬೇಸತ್ತಿರುವ ಮತದಾರರ ಸಂಖ್ಯೆ ಜನತಾದಳವನ್ನು ಅಧಿಕಾರಕ್ಕೆ ತರುವಷ್ಟಂತು ಇದೆ.ಇಷ್ಟು ವರ್ಷ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕರ್ನಾಟಕರಾಜ್ಯಕ್ಕೇನು ಮಾಡಿದರು ಎಂಬುದು ಮುಖ್ಯವಲ್ಲ. ಬದಲಿಗೆ ಮುಂದೇನು ಮಾಡಲಿದ್ದಾರೆ ಎಂಬುದು ಮಾತ್ರ ಇತಿಹಾಸವಾಗಲಿದೆ ಎನ್ನುವುದನ್ನು ಅವರು ಮರೆಯಬಾರದು.
ಕೆಲವರಿಗೆ ನನ್ನ ಮಾತುಗಳು ವಾಸ್ತವದಿಂದ ದೂರವಿರುವ ಅತಿ ಆದರ್ಶದ ಮಾತುಗಳೆನಿಸಬಹುದು,ನಿಜ. ಆದರಿಂತಹ ಆದರ್ಶದ ರಾಜಕಾರಣ ಮಾತ್ರ ಕನ್ನಡಿಗರನ್ನು-ಕನ್ನಡತನವನ್ನು ಕಾಪಾಡಬಲ್ಲದು.
********************************
ತಮ್ಮ ಮಾತುಗಳನ್ನು ಒಪ್ಪಬಹುದು, ಆದ್ರೆ ಇದನ್ನು ದೇವೇಗೌಡ ರ ಕುಟುಂಬ ವು ಸ್ವಾರ್ಥ ವನ್ನು ತೊರೆದು ವಿಚಾರ ಮಾಡಬೇಕು, mr ಕುಮಾರ ಸ್ವಾಮಿ ಸಹೃದಯಿಯಾದರೂ ಅವರ ಕುಟುಂಬದಲ್ಲಿ ಉಳಿದವರು ಹಾಗಿಲ್ಲ, ಆ ರೇವಣ್ಣ ಅಂತೂ ಹೊಳನರಸೀಪುರ / ಹಾಸನ ಬಿಟ್ಟು ಹೊರಬರುವುದೇ ಇಲ್ಲ ಅಥವಾ ಬರುವ ಯೋಗ್ಯತೆ ಇಲ್ಲವಾ? ಇನ್ನು ಈ ದಳ ದವರಿಗೆ ಜಂಟಿ ಅಧಿಕಾರ ಸಿಕ್ಕರೂ ಸಾಕು ಮಾನ್ಯ ರೇವಣ್ಣ ಕ್ಯಾಬಿನೆಟ್ ಸಚಿವ with pwd / ಪವರ್ / irrigation ಖಾತೆ, ಮೊನ್ನೆ 2019 ಲೋಕ ಸಭೆಯಲ್ಲೇ ನೋಡಿ ಇವರ ಅತೀ ಆಸೆಯ, ಮಂಡ್ಯ ದಲ್ಲಿ ಇವರ ಪಕ್ಷ ದಿಂದಲೇ ಸುಮಲತಾ ಗೆ ಟಿಕೆಟ್ ನೀಡಿಬಿಟ್ಟಿದ್ದರೆ ಎಷ್ಟು ಗೌರವ ಇರುತ್ತಿತ್ತು ? ಕನ್ನಡಿಗರು ಇವರನ್ನು ನಂಬಬೇಕಾದರೆ ಮಾನ್ಯ ಕುಮಾರಸ್ವಾಮಿ ರವರು ತಮ್ಮ ಕುಟುಂಬ ರಾಜ ಕೀಯ ಕ್ಕೆ ಕಡಿವಾಣ ಹಾಕುವ ಬಗ್ಗೆ ಜನರಿಗೆ ಖಾತ್ರಿ ಕೊಡಬೇಕು ! ರಾಜ್ಯದ ಉದ್ದಗಲಕ್ಕೂ ತಾವು ಹೇಳಿದಂತೆ ಯುವಪಡೆ ಯನ್ನು ಕಟ್ಟಬೇಕು, ಇವರ ಹಳೆಯ ತಪ್ಪಿಗೆಲ್ಲ ಕಾರಣ ಗಳನ್ನು ಹೇಳದೆ ಬೇಷರತ್ ಕ್ಷಮೆ ಯಾಚಿಸಿ ತಪ್ಪು ಒಪ್ಪಿಕೊಳ್ಳಬೇಕು. ಇಷ್ಟಾದರೂ ಈ ಬಿಜೆಪಿ – ಕೋಮುವಾದಿ ಪಕ್ಷ ಕ್ಕೆ ಮರುಳಾಗಿರುವ ಮಂದಿ ಯನ್ನು ಸೆಳೆಯುವುದು ಸುಲಭವಲ್ಲ, ಅದೇ ಕಾರ್ಯವನ್ನು ಇವರು ಚಾಕಚಕ್ಯತೆ ಯಿಂದ ಮತ್ತು ನಿಸ್ವಾರ್ಥ ದಿಂದ ಕೈಗೊಳ್ಳಬೇಕು.
ಪ್ರಸ್ತುತ ನೈಜತೆಯನ್ನು ಎತ್ತಿ ಹಿಡಿಯುವ ಲೇಖನ
ಧನಾತ್ಮಕ ಬೆಳವಣಿಗೆಯ ತೀರ್ಮಾನ ಕೈಗೊಳ್ಳುವುದು ಪಕ್ಷದ ಪುನಶ್ಚೇತನಕ್ಕೆ ಅನುಕೂಲಕರ ಮತ್ತು ಪರರನ್ನು ಬೆಳೆಸುತ್ತಾ ಬೆಳೆಯುವ ಆರೋಗ್ಯಕರ ನಾಯಕತ್ವ ದೊಂದಿಗೆ ಕನ್ನಡನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಕನ್ನಡಿಗರ ಹಿತಕಾಪಾಡಲು ಪಣ ತೊಡಬೇಕು ಆಗಲೇ ಸಫಲತೆ
ನೀವು ಹೇಳಿದ್ದು ಸತ್ಯ. ಆದರೆ ಜನತಾ ದಳ ಕೇವಲ ದಕ್ಷಿಣ ಭಾರತದ ನಾಲ್ಕೈದು ಜಿಲ್ಲೆಗಳಿಗಷ್ಟೇ ಸೀಮಿತ ಎನ್ನುವ ಅಪವಾದದಿಂದ ಹೊರಬರಬೇಕಿದೆ.
ಕರಾರುವಕ್ಕಾದ ರಾಜಕೀಯ ವಿಶ್ಲೇಷಣೆ. ಕುಮಾರಸ್ವಾಮಿ ತನ್ನ ಸಲಹೆಗಾರರನ್ನಾಗಿ ಯಾರನ್ನು ಇಟ್ಟುಕೊಳ್ತಾರೆ ಎಂಬುದು ಮುಖ್ಯ. ಅಹಿಂದ ಮಾದರಿ ಬೇಕು. ರೈತ ಮತ್ತು ಶ್ರಮಿಕರು ಹಾಗೂ ಅಲ್ಪಸಂಖ್ಯಾತರ ಜೊತೆ ಗಟ್ಟಿಯಾಗಿ ನಿಲ್ಲಬೇಕು. ಮಠಗಳಿಂದ ದೂರ ಇರಬೇಕು. ತುಂಬಾ ಆಶಾವಾದದ ಲೇಖನ.ಕಾದು ನೋಡೋಣ .ಸರ್