ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ ದಿಕ್ಕಿನ ಕಡೆ ಹಾರಿ ಹೋದೆಅಂದಿನಿಂದ ಇಂದಿನವರೆಗೂಮತ್ತೊಮ್ಮೆ ಕಾಣದ ಹಾಗೆ…ಆ ಪ್ರೇಮದ ಗಣಿಯಲ್ಲಿಈಗ ನಿತ್ಯ ನಿರಂತರ ಕತ್ತಲೆ! ಅಂದು ಅದೆಷ್ಟೆಷ್ಟು ಆಳದಲ್ಲಿಎಂಥೆಂಥಾ ಅಂಕು ಡೊಂಕಲ್ಲಿಆ ಗಣಿ ಅಗೆದರೂ ಬಗೆದರೂಕಣ್ಣು ಕೋರೈಸಿದ್ದ ಪ್ರಖರ ಬೆಳಕುಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!ಜಗವೆಲ್ಲ ಹೃದಯಂಗಮದಂಗಳ…ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿನಿಂತ ಹಾಗೆ ಮೂಕಮೌನದಲಿ!ಹಗಲು ಕಂಡ ಒಲವ ಹೊನಲುಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿರಾತ್ರಿ ಕನಸಿನಲಿ ಶಶಿರಥದೈಸಿರಿ! ಯಾರೋ ನಲವಿನಾಗಂತುಕರುಎದೆಯಾಳದಲಿ ಥಕಥೈ ಕುಣಿದುದಿನವಿಡೀ ಬೆಳಕಿನ ಮುಗುಳುನಗೆ ನಕ್ಕ ಹಾಗೆ…ಒಮ್ಮಿಂದೊಮ್ಮೆಗೆಎಲ್ಲೆಲ್ಲೂ ಕಂಡರಿಯದ ಆನಂದದಿಅಂಗಣದಲೆಲ್ಲ ಹೃದಯದೋಕುಳಿ ೨)ಓ ಪ್ರಿಯೆಐದನೆ ದಶಕ ಇನ್ನೇನು ಅಸ್ತಮಾನದಹಂತ ತಲುಪಿದೆಇನ್ನೂ ಮಾಸಿಲ್ಲ ಮಸ್ತಕದಿ ನೆನಪುಹಳೆಯ ನೆಲಭಾವಿಯ ನೀರ ಸೆಲೆಯ ಹಾಗೆ… ಎಲ್ಲಿರುವೆ ಮತ್ತು ಹೇಗಿರುವೆ?ದಶಕಗಳ ಆಚೆಗೂ ಒಂದಾದರೂಅಣು ಮಾತ್ರ ಸುದ್ದಿ ಕೂಡನನ್ನತ್ತ ಹಾರಿಸದೆ…ಹೇಗಿರುವೆ…?ಒಲವಿನ ಅಮೃತ ತುಳುಕಿಸಿದೆದೆಹೇಗಾಯಿತಿಷ್ಟು ಕಠೋರ ಬಂಡೆ! ನಿನ್ನ ಬಗೆಯ ಅರಿವೂ ಇರದಅಂಧನ ಥರ ನಾನೀಗಆ ಸ್ಥಿರ ದೂರವಾಣಿಗೂಈ ಮೊಬೈಲ್ ಮಾಣಿಕ್ಯಕ್ಕೂಇರುವಂಥ ಅಗಾಧ ಅಂತರಈಗ ನನಗೂ ನಿನಗೂ…ಬಲು…ಬಲು ದೂರ! ಹಾಗಾಗಿ ಈ ನನ್ನೆದೆ ಸ್ಪಂದನದಅನಂತ ಒಲವ ತರಂಗ ಧಾರೆನೀನಿರುವ ದಿಕ್ಕು ಹುಡುಕಿತೂರಿ ಬಂದು ಸೇರಬಹುದೋನಿನ್ನ ನೇರ ವಿಚಾರಿಸಿ ಹಿಂತಿರುಗಿಬರಲೂಬಹುದೋ ಎಂಬಾಸೆ…ಹಾಗೆಯೇ ಕೇಳು:ಒಮ್ಮೆ ಕಾಲೇಜಿನ ಕಡೆ ಹೋಗಿದ್ದೆ:ಕಾಂಪೌಂಡ್ ಸುತ್ತ ಮುತ್ತೆಲ್ಲಒಳ ಹೊರಗಿನ ಗೋಡೆಗಳೂಮರೆತಂತಿಲ್ಲ ಅಂದಿನ ನಮ್ಮ ಕಥೆ…ಅದೆಂಥ ಹೃದಯ ತಟ್ಟಿದನುಭವ ನಿನಗೆ ಗೊತ್ತೇ…? ೩)ನನ್ನ ಹಾಗೆ ನೀನೂ ವೈದ್ಯೆ…ಈಗಷ್ಟೇ ಕೋವಿಡ್ ಕರಿ ಕೋಣಮುಳುಗು ಹಾದಿ ಹಿಡಿದ ಹಾಗಿದೆ…ನಾನೇನೋ ಇಲ್ಲೇ ಇರುವೆ ಜೀವಂತಹಾಗಯೇ ಈಗಲೂ ವೃತ್ತಿ ನಿರತ…ನೀನೀಗ ಎಲ್ಲಿರಬಹುದೋ ಏನೋಯಾರ ಕೇಳಲಿ ಕೇಳಿ ತಿಳಿಯಲಿ…ಆದರೂ ಒಮ್ಮೆ ಪ್ರಶ್ನಿಸಿಬಿಡಲೇ-ನಿನ್ನನ್ನೇ ನೇರ…?ನೀ ಬದುಕಿರುವೆಯಾ…?ಹೇಗೆ…ಈಗಲೂ…?ಪ್ರಿಯೆ… ************************************

Read Post »

ಇತರೆ, ಗಜಲ್ ವಿಶೇಷ

ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರ ವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ತಾಯ್ತನ ಎನ್ನುವದು ಬರಿದೆ ಜೈವಿಕ ತಾಯ್ತನಕ್ಕೆ ಸಂಬಂಧ ಪಟ್ಟುದಲ್ಲ. ಅದೊಂದು ಭಾವ. ಆ ಭಾವವಿದ್ದವರೆಲ್ಲಾ ತಾಯಂದಿರಾಗಬಹುದು ಎನ್ಬುವುದು ಸಾವಿತ್ರಿಯವರಿಂದ ಸಾಬೀತಾಗುತ್ತದೆ. ಆಕೆ ತಮ್ಮದೇ ಒಂದು ಮಗುವನ್ನು ಹೆರಲಿಲ್ಲ. ಆದರೆ ದೀನ ದಲಿತರ ಪಾಲಿಗೆ ನಿಜವಾದ ಮಾತೃಪೂರ್ಣ ತಾಯಿಯೇ ಆದರು.

Read Post »

You cannot copy content of this page

Scroll to Top