Day: February 7, 2021

ಗಜ಼ಲ್

ಗಜ಼ಲ್ ಎ . ಹೇಮಗಂಗಾ ‘ನಾನು , ನನ್ನದೆಂ’ದು ಎಷ್ಟು ಬಡಿದಾಡಿದರೂ ಸೇರಲೇಬೇಕು ಗೋರಿಯನ್ನು‘ನಾನೇ ಎಲ್ಲವೆಂ’ದು ಎಷ್ಟು ಸೆಣಸಾಡಿದರೂ ಸೇರಲೇಬೇಕು ಗೋರಿಯನ್ನು ನಿಲ್ಲದೇ ನಡೆದಿಹ ಬಾಳ ನಾಟಕದಿ ನೀನೂ ಬರಿಯ ಪಾತ್ರಧಾರಿಯಷ್ಟೆನಿರ್ಗಮಿಸುವ ಕ್ಷಣದಿ ಇರಬೇಕೆಂದರೂ ಸೇರಲೇಬೇಕು ಗೋರಿಯನ್ನು ಎಲ್ಲರನೂ ತನ್ನೊಳಗೆ ಮಣ್ಣಾಗಿಸುವ ಮಣ್ಣಿಗೆ ಭೇದ ಭಾವವೆಲ್ಲಿದೆಅಂತಕನಿಗೆ ಮಣಿದು ಅರಸನಾದರೂ ಸೇರಲೇಬೇಕು ಗೋರಿಯನ್ನು ಹಣ, ಪ್ರತಿಷ್ಠೆ ಯಾವುದೂ ಬರದು ನಿನ್ನೊಡನೆ ಮಸಣದಿ ಮಲಗಿರಲುಕೋಟೆ ಕಟ್ಟಿ ಅಧಿಕಾರದಿ ಮೆರೆದರೂ ಸೇರಲೇಬೇಕು ಗೋರಿಯನ್ನು ಮೂರು ದಿನದ ಬಾಳಿನಾಟದಿ ಎಲ್ಲಕೂ ಕೊನೆಯೊಂದಿದೆ ಹೇಮಚಿರಂಜೀವಿ […]

ಹೆಜ್ಜೆಗಳ ಸದ್ದು

ಕವಿತೆ ಹೆಜ್ಜೆಗಳ ಸದ್ದು ವೀಣಾ ರಮೇಶ್ ನೀಬರುವ ದಾರಿಯಲಿ ಹೆಜ್ಜೆಗಳ ಸದ್ದುನನ್ನೆದೆಯ ರಂಗಮಂದಿರದಲ್ಲಿಗೆಜ್ಜೆ ಕಾಲ್ಗಳ ಸದ್ದು ಕುಣಿದು ಬಿಡು ಇನ್ನಷ್ಟುನನ್ನ ಭಾವನೆಗಳುಹುಚ್ಚೆದ್ದು ಕುಣಿಯಲಿಸಾಲು ಸಾಲು ಗೆಜ್ಜೆಗಳಲಿಸಾಲು ಸಾಲು ನೆನಪುಗಳು ನೀ ಇಡುವ ಗಗ್ಗರದಲಿಗಿರಕಿಯಾಡುವ ನನ್ನ ಕನಸುಗಳುಗುಂಗುರುಗಳ ನಡುವೆಉಂಗುರ ಅಪ್ಪಿದತುಂಟ ಬೆರಳುಗಳು,ತಪ್ಪಿದ ತಾಳಗಳು ನನ್ನೆದೆಯ ರಂಗ ವೇದಿಕೆಯಲಿನೀ ಬರೆದು ಗೀಚಿದ ಸರಸದಪಿಸುಮಾತುಗಳು ತಪ್ಪು ಹೆಜ್ಜೆಗಳಲಿಕುಣಿಯುತ್ತಿದೆಉನ್ಮಾದ,ಉದ್ವೇಗಗಳುನಾದ, ನೀನಾದಗಳುನೂಪುರದಗಲ್ ಗಲ್ ತಾಳದಲಿನೀ ತರುವ ಹೆಜ್ಜೆಗಳು ****************

ದಾರಾವಾಹಿ- ಅದ್ಯಾಯ-02 ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ […]

ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನ‌ನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು […]

Back To Top