Day: February 6, 2021

ಹೀಗೆ

ಕವಿತೆ ಹೀಗೆ ಗೋನವಾರ ಕಿಶನ್ ರಾವ್ ಹೆಣ್ಣೆಂದರೆ,ಪೂಜೆ-ಅಸಡ್ಡೆಉಭಯನೀತಿ,ಕೀಳು,ಅವಮಾನ- ಅತ್ಯಾಚಾರ, ಭರತವರ್ಷೇ,ಭರತಖಂಡೇ ಜಂಬೂ ದ್ವೀಪದಿ,ಗಂಡುಕಾಮಿಗಳ,ಹೀನಾಯ, ನಡೆ,ಪುರುಷಗಣಗಳಿಗೆಲ್ಲಚುಕ್ಕೆಬೊಟ್ಟು ನೆನಪು.ತವರು ಮನೆಗೆ ಬಂದ ಹೆಣ್ಣುವರುಷದಲಿ , ಹುಟ್ಟಿದ ಕೋಣೆತೋರಿಸಲು ತವರಿಗೆಮತ್ತೆ ಹುಟ್ಟಿ ಬೆಳೆದ ಮನೆಯನೇನೋಡುವ ಮತ್ತೆ ಮತ್ತೆ ನೋಡುವಕಹಿ ಚಪಲ, ಮನೆ-ಮನವ ಮುರಿದಿರುವಕ್ರೂರ ಜಗದ ಈ ಕೆಟ್ಟಗಂಡುಗಳ ಸಂತೆ ನಿರ್ಭಯದ ಅಂಗಡಿಯಲಿಸಾವು ಕೊಳ್ಳುವ ಅ ದಂಡುಪಾಠ ಕಲಿಯದೆ ಮತ್ತೆಹತರಾಸ್!! ಕಲಿತದ್ದು ರಾವಣನಿಂದ ?ಕೀಚಕನಿಂದ ?ಅವರು ಮಣ್ಣಾದರೂಇವರು, ಗಲ್ಲಾ ದರೂ……… ಹೀಗಾದರೆ ? ಹೇಗೆ ? ತಡವಾಗಿ ಬಂದ ಉತ್ತರವಿರದಪ್ರಶ್ನೆ,! ಶೇಷ ಪ್ರಶ್ನೆ […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11 ಆತ್ಮಾನುಸಂಧಾನ ಕೇರಿ — ಕೊಪ್ಪಗಳ ನಡುವೆ…. ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ […]

ಅಂಕಣ ಬರಹ ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ  ಮಡಚಿದ ಹತ್ತು, ಐದು, ಎರಡು, ಒಂದರ ‌ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ. ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ  […]

Back To Top