ಅವಳನ್ನು ಸಂತೈಸುವವರು

ಕವಿತೆ

ಅವಳನ್ನು ಸಂತೈಸುವವರು

ಮಾಲಾ ಮ ಅಕ್ಕಿಶೆಟ್ಟಿ

ನಾ ಮೆಚ್ಚಿದ ನಾಟಕ

ಕಳೆದುಕೊಂಡೆ ನನ್ನವನನ್ನ ಶಾಶ್ವತವಾಗಿ
ಮತ್ತೆ ಸಿಗಲಾರ’ ದುಃಖಿಸಿತು ಹೆಣ್ಣುಜೀವ
ಮನದ ನೋವು ಹಂಚಿಕೊಳ್ಳಲು
ನನ್ನೊಂದಿಗೆ, ಆ ಗೆಳತಿಯ ಹೃದಯ
ನೋವನ್ನು ತಡೆಯಲಾರದೆ, ಸಿಡಿಲು
ಮಳೆಯಿಲ್ಲದೇ ಬಡಿದಿತ್ತು ಬೇಸಿಗೆಯಲ್ಲಿ

ಯಾವತ್ತೂ ಗಂಭೀರ ಮೂರ್ತಿ
ತೂಕದಲ್ಲಿ ಮಾತುಗಳ ಸಂಕಲನ
ಅಪಘಾತದಲ್ಲಿ ಬಾರಲಾರದ
ಲೋಕಕ್ಕೆ ತೆರಳಿದ ಮರಣ
ಒಟ ಒಟ ಎಂದು ಒಟಗುತ್ತಿದ್ದಳು
ತಡೆಯಲಾರದ ಸೊಲ್ಲುಗಳಲ್ಲಿ

ಮೊನ್ನೆ ಇನ್ನೀತರ ಗೆಳೆತಿಯರೊಂದಿಗೆ
ಭೇಟಿಯಾಗಿದ್ದಳು ಇಕೆ ಅಕಸ್ಮಾತ್
ನೋವು ನೋವು ಎಂದು ಜರ್ಜರಿತವಾದ
ದೇಹ, ಮತ್ತೆ ಮತ್ತೆ ಒಟಗುಡುತ್ತಿತ್ತು
ಸ್ಥಿತಿಯನ್ನು ಅರಿಯಲಾರದ ಇತರರು
ಒಟಗುಟುವಿಕೆ ನೋವು ಅರಿಯದೇ ಬೆಸರಿಸುತ್ತಿದ್ದರು

ದುಃಖದ ಸುಣ್ಣದಲ್ಲಿ ಅದ್ದಿ
ತೆಗೆದ ನನ್ನ ದೇಹಕ್ಕೆ ತುಸು
ಅರ್ಥವಾಗಿತ್ತು ಆಕೆಯ ವೇದನೆ
ಸಹಜವಲ್ಲಾ? ಆತ್ಮೀಯ
ಕೊಂಡಿ ಕಳಚಿದಾಗ ಕೈಯಿಂದ
ನಿಲುಕದು ಸಂವೇದನೆರಹಿತರಿಗೆ

ಭ್ರಮೆಯೇ ಎಲ್ಲಾ?
ಹೆಣ್ಣು, ಹೆಣ್ಣನ್ನು ಅರ್ಥೈಸುವುದು
ರುಚಿ ಗೊತ್ತು ನೋವುಂಡವರಿಗೆ
ವಿಚಿತ್ರ ನೋಡಿ ಪ್ರಸಂಗ
ನನ್ನ ಮತ್ತು ಆಕೆಯ ಭೇಟಿ,ಇತ್ತು
ಮರುದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

******************************

Leave a Reply

Back To Top