ಅಮ್ಮನಿಗೀಗ ೬೬
ನಾಗರಾಜ ಮಸೂತಿ
ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳು
ಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ
ಆರು ಹೆರಿಗೆಗೆ ನಲುಗದವಳು
ಮಂಡೆ ನೋವಿಗೆ ಕುಸಿದಿದ್ದಾಳೆ
ಬಿಸಿ ರೊಟ್ಟಿ ಉಣಬಡಿಸಿದವಳು
ಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ
ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದ
ಅವಳ ಪ್ರತಿ ಹೆಜ್ಜೆ
ನನ್ನೆದೆಗೆ ಭಾರ ಅನಿಸುತ್ತಿವೆ
ತಿಂಡಿ ತಿನಿಸು, ಧಿರಿಸು ತಂದಿಡುವ
ಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲ
ಅವಳಿಗೀಗ ಅರವತ್ತಾರರ ಹರೆಯ
ಅಮ್ಮನಿಗೆ ವಯಸ್ಸಾಗ್ತಿದೆ
ಅದೇ ಬೇಸರವಾಗ್ತಿದೆ…
**************
ಅಮ್ಮ ಸರ್ವ ಕಾಲಕ್ಕೂ ಪೂಜ್ಯನಿಯ…..ಸುಂದರವಾಗಿದೆ
ಧನ್ಯವಾದಗಳು
ಧನ್ಯವಾದಗಳು
ಮಕ್ಕಳಿಗಾಗಿಯೇ ಜೀವ ತೇಯ್ದ ತಾಯಿಯ ಪದ್ಯ ಚೆನ್ನಾಗಿದೆ.
ಎಲ್ಲಾ ನೋವನ್ನು ನುಂಗಿಕೊಂಡು ನಮ್ಮನೆಲ್ಲಾ ಮುನ್ನೆಡೆಸುವ ಮಹಾ ಚೇತನ