ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!!

ಜಯಶ್ರೀ ಜೆ.ಅಬ್ಬಿಗೇರಿ

                                               

   ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ ವಿಧ ವಿಧ ಗಿಡಗಳಿಗೂ ಜಾಗ ಕಡ್ಡಾಯವಾಗಿರುತ್ತಿತ್ತು. ಕೆಲವರಂತೂ ಊರಾಚೆಗೆ ತೋಟದಲ್ಲಿ ಮನೆ ಕಟ್ಟಿಕೊಂಡು ಪ್ರಕೃತಿ ಮಾತೆಯ ಮಡಿಲಲ್ಲಿ ಆನಂದಿಸುವ ಪರಿಯೂ ಕಂಡು ಬರುತ್ತಿತ್ತು. ಇತ್ತೀಚಿಗೆ  ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ನಾವು ಉನ್ಮಾದಿತರಾಗಿದ್ದೇವೆ ಎಂದರೆ ನಮ್ಮ ಕಾಲ ಮೇಲೆ ನಾವು ಕಲ್ಲು ಹಾಕಿಕೊಳ್ಳುತ್ತಿರುವುದು ನಮಗೆ ತಿಳಿಯುತ್ತಿಲ್ಲ. ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ನಮ್ಮ ಬುಡಕ್ಕೇ ಪೆಟ್ಟು ಎನ್ನುವುದು ಬುದ್ಧಿಗೆ ತಿಳಿದಿದ್ದರೂ ಶೋಕಿ ಹಿಂದೆ ಬೆನ್ನು ಹತ್ತಿ ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿಕೊಂಡು ಮರಗಳ ರಕ್ಷಣೆಯನ್ನು ಕೇವಲ ಉದ್ದುದ್ದ ಭಾಷಣಗಳನ್ನು ಮಾಡಿ ಸಾಲು ಮರದ ತಿಮ್ಮಕ್ಕನಂಥ ಮರಗಳ ಪ್ರೇಮಿ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆವೆ. ಮರಗಳ ರಕ್ಷಿಸುವ ಯೋಜನೆಗಳೆಲ್ಲ ಕಾಗದದ ಕುದುರೆಗಳಾಗಿವೆ. . ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಣ ಹೊಂದಿದ ಮರಗಳ ಸಂಖೈಯಂತೂ ಲೆಕ್ಕಕ್ಕಿಲ್ಲ. ದಿನವೂ ಯಾವುದೋ ಒಂದು ಹೆಸರಿಗೆ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ನಮ್ಮ ದುರಾಸೆಗೆ ಬಲಿಯಾಗುತ್ತಿರುವ ಮರಗಳು ನಮ್ಮ ಅವಿವೇಕತನಕ್ಕೆ ಮರ ಮರ ಮರಗುತ್ತಿವೆ

   ಧರ್ಮೋ ರಕ್ಷತಿ ರಕ್ಷತಃ ಎನ್ನುವ ಮಾತಿನಂತೆ ವೃಕ್ಷೊ ರಕ್ಷತಿ ರಕ್ಷತಃ ಮಾತು ದಿಟವೇ ಎನ್ನುವುದು ಅರಿತಿದ್ದರೂ ನಮ್ಮ ನಡೆ ಮಾತ್ರ ಪೈಶಾಚಿಕದಂತೆನೆಸುತ್ತಿದೆ. ಮರಗಳನ್ನೆಲ್ಲ ನೆಲಕ್ಕುರುಳಿಸಿ ಆಕಾಶ ಮುಟ್ಟುವ ಮಹಲು ಮಾಲ್ಗಳನ್ನು ಕಟ್ಟಲೇಬೇಕೆಂಬ ಪಣ ತೊಟ್ಟವರಂತೆ ಹಳ್ಳಿ ಪಟ್ಟಣ ನಗರಗಳೆಂಬ ಭೇದ  ಭಾವ ತೋರದೆ ತಾತ ಮುತ್ತಾತಂದಿರು ವಷರ್ಾನುಗಟ್ಟಲೇ ನೀರುಣಿಸಿ ಬೆಳೆಸಿದ ಮರಗಳನ್ನು ಕ್ಷಣಾರ್ಧದಲ್ಲಿ ಕೊಡಲಿ ಹಿಡಿದು ನೆಲಸಮಗೊಳಿಸುತ್ತಿದ್ದೇವೆ. ಇದು ಊರುಗಳಲ್ಲಿಯ ಕತೆಯಾದರೆ, ಕಾಡಿನತ್ತ ಧಾವಿಸಿ  ಕಾಂಚಾಣ ಎಣಿಸಲು ಹವಣಿಸಿ, ಕಾಡಿನ ಪ್ರಾಣಿಗಳನ್ನು ನಾಡಿಗೆ ಕರೆತರುತ್ತಿದ್ದೇವೆ.  ಇದೇ ಸ್ಥಿತಿ ಮುಂದುವರೆದರೆ ಭವಿಷ್ಯ ಘನಘೋರ. ನಮ್ಮ ಜೀವಕ್ಕೆ  ಕುತ್ತು ಖಚಿತ.ಎಂಬುದು ಪರಿಸರ ವಾದಿಗಳಿಗೆ  ಪ್ರಕೃತಿ ಪ್ರೀಯರಿಗೆ ಬಿಡದೇ ಕಾಡುತ್ತಿರುವ ಭಯ. 

ಸೃಷ್ಟಿ ಹುಟ್ಟಿದ ಆರಂಭದಲ್ಲಿ ಮೂರು ಭಾಗದಷ್ಟು ನೀರು ಒಂದು ಭಾಗದಷ್ಟೇ ಭೂಮಿ ಇತ್ತು. ಭೂಮಿಯ ಮೇಲೆಲ್ಲ ಹಸಿರು ಕಂಗೊಳಿಸುತ್ತಿತ್ತು. ಆಹಾರ ಧಾನ್ಯಗಳ ಉತ್ಪಾದನೆಗಾಗಿ ಜಮೀನಿನ ಅವಶ್ಯಕತೆಯಿದೆ ಎಂದು   ಮಾನವ ಕಾಡನ್ನು ನಾಶ ಪಡಿಸಿದ. ದೈವತ್ವದ ಸ್ಥಾನ ನೀಡಿ ಪೂಜಿಸುತ್ತಿದ್ದ ಮರಗಳನ್ನು ಬರುಬರುತ್ತ ಸಂಚಾರಿ ಹೆಸರಿನಲ್ಲಿ ಸಾವಿರಾರು ಮರಗಳ ತಲೆಗಳನ್ನು ತುಂಡರಿಸಿದ. ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಪಡೆದ ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ಸುಮಾರು 500ಕ್ಕೂ ಹೆಚ್ಚು ಪಕ್ಷಿ ಸಂಕುಲಗಳ ಕ್ರಿಮಿ ಕೀಟಗಳ ನಾಶಕ್ಕೂ  ಮುನ್ನುಡಿ ಬರೆಯತೊಡಗಿದ. ಈ ವಿನಾಶವನ್ನು ಕಂಡ ಪ್ರಾಜ್ಞರು, ಆಯುವರ್ೇದದ ಚಿಕಿತ್ಸೆ ತಜ್ಞರು ಸಸಿಗಳ ನೆಡುವಿಕೆಗೆ ಪ್ರೇರೇಪಿಸಿದರು.. ಬೇವು ಆಲದ ಮರದಂಥ ಅತ್ಯುಪಯುಕ್ತ  ಮರಗಳ ಮಹತ್ವವನ್ನು ಸಾರಿದರು.ಅವುಗಳ ಗಾಳಿಯನ್ನು ಶ್ವಾಸಿಸಿದರೆ ಶ್ವಾಸಕೋಶಗಳಿಗೆ ಅತ್ಯುತ್ತಮವೆಂದು  ಜನಮಾನಸದಲ್ಲಿ ಬಿತ್ತಿದರು.

ಒತ್ತಡದ  ಬದುಕಿನ ಫಲಶೃತಿಯಾಗಿ ರಕ್ತದೊತ್ತಡ ಮಧುಮೇಹದಂಥ ಜೀವನ ಪೂತರ್ಿ ಜೀವ ತಿನ್ನುವ ಕಾಯಿಲೆಗಳು ವಯೋ ಭೇದವಿಲ್ಲದೇ ಬೆನ್ನು ಬಿದ್ದಿವೆ. ದಿನವಿಡಿ ಕಂಪ್ಯೂಟರ್ ಇಂಟರ್ಪಪಪಪಪಪನೆಟ್ನಲ್ಲಿ ಮುಳುಗಿದ ಕಣ್ಣುಗಳಿಗೆ ದಿನದ ಕೆಲ ಹೊತ್ತು ಹಸಿರು ಗಿಡಗಳೆಡೆಗೆ  ದೃಷ್ಟಿಯಿಡುವಂತೆ, ಹಸಿರನ ಮಧ್ಯದಲ್ಲಿ ವಾಯುವಿಹಾರ ನಡೆಸುವಂತೆ ವೈದ್ಯರು ಗ್ರೀನ್ ಥೆರಪಿ ಸಲಹೆ ನೀಡುತ್ತಿದ್ದಾರೆ. ಆದರೆ ಹಸಿರು ಗಿಡ ಮರಗಳೆಲ್ಲಿ ಸಿಗುತ್ತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಾಡುಗಳು ಸಣ್ನ ಪುಟ್ಟ ಪಾಕರ್್ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಸಮೀಕ್ಷೆಯ ಅಧ್ಯಯನದ ಪ್ರಕಾರ ಹಸಿರು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಇತ್ತೀಚಿಗೆ ಹೆಚ್ಚುತ್ತಿರುವ ಹೃದ್ರೋಗದ ಸಾವುಗಳನ್ನು ಕಡಿಮೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ವರದಿ ಹೊರ ಬಿದ್ದಿದೆ. ಮನೆಯ ಮುಂದೆ ಹಿಂದೆ ಹಸಿರಿಗೆಂದೇ ಮೀಸಿಲಿಟ್ಟಿದ್ದ ಜಾಗ ಈಗೀಗ ಫೋರ್ ವ್ಹೀಲರ್ಸ್ ಬೈಕ್ ಪಾಕರ್ಿಂಗ್ನ ಪಾಲಾಗುತ್ತಿದೆ. ಮರಗಳಿಗಾಗಿ ಹುಡುಕಿಕೊಂಡು ಮೈಲುಗಟ್ಟಲೇ ನಡೆಯುವ ಪ್ರಸಂಗ ತಲೆದೋರಿದೆ.  ಮರ ಗಿಡಗಳು ಮನೆ ಮುಂದೆ ಇದ್ದರೆ ಕೋಟಿ ಕೋಟಿ ಅದಾಯ ಅದ್ಹೇಗೆ ಎಂದು ಹುಬ್ಬೇರಿಸುತ್ತೀರೇನು! ಮರವೊಂದು ತನ್ನ ಜೀವಿತಾವಧಿಯಲ್ಲಿ ಹೂವು ಕಾಯಿ ಹಣ್ಣು ಉರುವಲು ರೂಪದಲ್ಲಿ ಆದಾಯ ತರುವುದಲ್ಲದೇ ತಜ್ಞರ ಪ್ರಕಾರ ಶ್ವಾಸ ಸಂಬಂಧಿತ ಕ್ಯಾನ್ಸರ್ನಿಂದ ಬಳಲುವ 10 ಲಕ್ಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಜೀವ ದಾನ ನೀಡುತ್ತವೆ. ಅವು ನೀಡುವ  ಪ್ರಾಣ ವಾಯುವಿಗೆ ಬೆಲೆ ಕಟ್ಟಲಾದೀತೆ? ವೈಭವೀಕರಣದ ಜೀವನದ ಭ್ರಾಂತಿಯಲ್ಲಿ  ಸ್ವಚ್ಛ ಗಾಳಿಗೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ ಎಲ್ಲೆಲ್ಲೂ ಕಾಖರ್ಾನೆಯ ವಿಷಾನೀಲ ವಾಹನದ ದಟ್ಟನೆಯ ಧೂಳು ನಮ್ಮ ಶ್ವಾಸದ ಗೂಡಿಗೆ ಕೈ ಹಾಕುತ್ತಿದೆ. ಮಳೆಯ ಆರ್ಭಟವನ್ನು ಸಹಿಸಿಕೊಂಡು ಮಣ್ಣಿನ ಸವಕಳೀಯನ್ನು ತಡೆಯುತ್ತಿದ್ದ ಮರಗಳು ಇದೀಗ  ನಮ್ಮ ಆರ್ಭಟಕ್ಕೆ  ತಾವೇ  ಕೊನೆಯುಸಿರೆಳೆಯುತ್ತಿವೆ. “      

ಅತಿಯಾದ ಕಾಡಿನ ನಾಶ ಅತಿವೃಷ್ಟಿ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ  ತುತ್ತಿನ ಚೀಲ ತುಂಬಿಸುವ ಅನ್ನದಾತನ ತುತ್ತಿಗೆ ತತ್ವಾರ ತಂದೊಡ್ಡಿ ಆತನನ್ನು ಆತನ ಕುಟುಂಬವನ್ನೂ ಬಲಿತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ.   ನಮ್ಮ ಸ್ವಾರ್ಥಕ್ಕೆ ಭೂ ಮಂಡಲವೆಲ್ಲ ಧಗ ಧಗ ಉರಿಯುವ ಕೆಂಡದುಂಡೆಯಂತೆ ಭಾಸವಾಗುತ್ತಿದೆ. ಕಾಡುಗಳ ಕಣ್ಮರೆಯಿಂದ. ಜೀವ ವೈವಿಧ್ಯತೆಯ ಅಮಾಯಕ ಮೂಕ ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಅವಸಾನವಷ್ಟೇ ಅಲ್ಲ ಪ್ರಕೃತಿಯ ಸಮತೋಲನವನ್ನೇ ಅಲ್ಲಾಡಿಸುತ್ತಿದೆ. ಅದಲ್ಲದೇ ಮಳೆಯ ಪ್ರಮಾಣವೂ ತುಂಬಾ ಕುಸಿಯುತ್ತಿದೆ. ರೆಫ್ರಿಜರೇಟರ್ನಂತಹ ವಸ್ತುಗಳ ಬಳಕೆಯಿಂದ ಭೂಮಿಗೆ ರಕ್ಷಣಾ ಕವಚದಂತಿರುವ ಓಜೋನ್ ಪರದೆಗೂ ಅಲ್ಲಲ್ಲಿ ರಂಧ್ರಗಳು ಬಿದ್ದು ಅದಕ್ಕೂ ಜೀವ ಭಯ ಕಾಡುತ್ತಿದೆ. ಇದರ ಪರಿಣಾಮ ಜಾಗತಿಕ ತಾಪಮಾನ ಏರಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪಕ್ಕೆ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಪ್ರವಾಹಗಳ ಭೀತಿಯೂ ಹೆಚ್ಚುತ್ತಿದೆ.

ಜೀವ ರಕ್ಷಕ ಆಮ್ಲಜನಕ ನೀಡುವ ಗಿಡ ಮರಗಳ ರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಮರಗಳ ಧರೆಗುರುಳಿಸುವುದು ಅತಿ ಸುಲಭ. ಮರಗಳನು ಧರೆಯ ಮೇಲೆ ಬೆಳೆಸುವುದು ಕಷ್ಟದ ಕೆಲಸ.

ಅಶ್ವತ್ಥಮೇಕಂ ಪಿಚುಮಂದುಮೇಕಮ್

ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ

ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್

ಧಮರ್ಾರ್ಥಮಾರೋಪ್ಯ ಸ ಯಾತಿ ನಾಕಂ

ಒಂದು ಅರಳಿ ಮರ ಒಂದು ಬೇವಿನ ಮರ ಒಂದು ಆಲದ ಮರ ಹತ್ತು ಹುಣಸಿ ಮರ ಸಾಕಷ್ಟು ಬೇಲ ಬಿಲ್ವ ನೆಲ್ಲಿ ಮತ್ತು ಮಾವಿನ ಮರಗಳನ್ನು ಧಮರ್ಾರ್ಥಕ್ಕಾಗಿ ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುವ ಸಂಸ್ಕೃತ ಶ್ಲೋಕ ಧರೆಯನ್ನೇ ಸ್ವರ್ಗವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮರಗಳು ಆಮ್ಲಜನಕ ತಯಾರಿಸುವ ಕಾಖರ್ಾನೆಗಳು ಒಂದು ಬಲಿತ ಮರವು ಪ್ರತಿ ವರ್ಷ 25-30 ಕಿಲೊ ಇಂಗಾಲದ ಡೈ ಆಕ್ಸೈಡ್ ತೆಗೆದು ಹಾಕಬಲ್ಲದು. ಜೀವ ರಕ್ಷಕ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ  ಕಡಿದರೆ ಖಚಿತ ನಮ್ಮದೇ ಮಾರಣ ಹೋಮ.  ಇನ್ನಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಹೊಸ ಹೆಜ್ಜೆ ಇಡೋಣ.

                                                  *********

Leave a Reply

Back To Top