Month: March 2020

ಕಾವ್ಯಯಾನ

ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ […]

ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ […]

ಕಾವ್ಯಯಾನ

ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********

ಕಾವ್ಯಯಾನ

ಬೆಳಕಿನ ಬೀಜಗಳು.. ಚಂದ್ರಪ್ರಭ ಬೆಳಕಿನ ಬೀಜಗಳು.. ಪುರುಷನೆಂದರು ಪ್ರಕೃತಿಯೆಂದರು ನಾವು ತಲೆದೂಗಿದೆವು ಗಂಡೆಂದರು ಹೆಣ್ಣೆಂದರು ನಾವು ತಲೆದೂಗಿದೆವು ಅವನೆಂದರು ಅವಳೆಂದರು ನಾವು ತಲೆದೂಗಿದೆವು ತುದಿಯೆಂದರು ಮೊದಲೆಂದರು ನಾವು ತಲೆದೂಗಿದೆವು ಅಖಿಲವೆಂದರು ಅಣುವೆಂದರು ನಾವು ತಲೆದೂಗಿದೆವು ಅನಾದಿಯಿಂದ ಇದು ನಡೆದೇ ಇದೆಯಲ್ಲ ಹೊಸತೇನಿದೆ ಇದರಲ್ಲಿ!! ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ ಸೂರುಗಳಿಗೆ ಜೀವ ತುಂಬಿ ಲವಲವಿಕೆಯ ಮನೆಯಾಗಿಸುತ್ತೇವೆ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜ಼ಲ್ ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ ಕಡಲೇಕೆ ಕುದಿಕುದಿದು ಮರಳಿದೆ ಹೀಗೆ ಎದೆಯಾಳದ ಉಮ್ಮಳಗಳ ಬರೆಯಲಾರೆ ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು ಬದುಕಿನ ಬದುಕಾದ ಚಣಗಳ ಬರೆಯಲಾರೆ ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’ ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ **********

ಸ್ವಾತ್ಮಗತ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕೋಟ ಶಿವರಾಮ ಕಾರಂತರು..! ಕೆ.ಶಿವು ಲಕ್ಕಣ್ಣವರ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧೦-೧೦-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು… ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ […]

Back To Top