ಕಾವ್ಯಯಾನ

ಗಝಲ್

Ocean Wave

ಡಾ.ಗೋವಿಂದ ಹೆಗಡೆ

ಗಜ಼ಲ್

ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ
ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ

ಕಡಲೇಕೆ ಕುದಿಕುದಿದು ಮರಳಿದೆ ಹೀಗೆ
ಎದೆಯಾಳದ ಉಮ್ಮಳಗಳ ಬರೆಯಲಾರೆ

ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು
ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ

ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು
ಬದುಕಿನ ಬದುಕಾದ ಚಣಗಳ ಬರೆಯಲಾರೆ

ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’
ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ

**********

3 thoughts on “ಕಾವ್ಯಯಾನ

  1. ಸುಂದರ ಭಾವಪೂರ್ಣ ಗಝಲ್.ಹಾರ್ದಿಕ ಅಭಿನಂದನೆಗಳು

Leave a Reply

Back To Top