ಕಾವ್ಯಯಾನ

ಪದಗಳೇ ಹೀಗೆ

ಜಿ.ಲೋಕೇಶ್

ಪದಗಳೇ ಹೀಗೆ

ಪದಗಳೇ ಹೀಗೆ
ಅಲೆಸುತ್ತವೆ
ಇಂದು ಬಾ
ನಾಳೆ ಬಾ ಎಂದು
ಕವಿತೆಗಳನ್ನು ಕಟ್ಟಲು

ಎರವಲು ಪಡೆಯಲು
ಹೋಗಬೇಕಾಗಿದೆ
ನಮ್ಮೂರ ಶೆಟ್ಟಿ
ಬಳಿಗೆ
ನನ್ನವ್ವ ಸಾಲ ಪಡೆಯಲು
ಹೋಗುವಂತೆ

ಬಡ್ಡಿ ಬೇಕಾದಷ್ಟು
ನೀಡುತ್ತೇನೆಂದರೂ
ಏನೋ ಅನುಮಾನ
ಪದಗಳಿಲ್ಲಿ
ಸಿಗಲೊಲ್ಲವು

ಸರಿ ಕಾಯುತ್ತಿದ್ದೇನೆ
ಬಾಗಿಲು ತೆರೆಯುವ ಮುನ್ನವೇ
ಸರದಿಯಲ್ಲಿ ನಿಂತು
ಇವತ್ತು ನಾನೇ ಮೊದಲು!!

********

Leave a Reply

Back To Top