Day: December 24, 2019

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ತಪ್ಪು ನನ್ನದೇ ಗೆಳತಿ,ಬಿಡದೆ ಚುಂಬಿಸಿದೆ ಕೊಳ್ಳಿಯನ್ನು ಊದಿ ಊದಿ ಉರಿಸಬಾರದಿತ್ತು ಹೀಗೆ ನಿನ್ನ ಒಡಲನ್ನು ಎದೆಯ ಆಳ-ಅಗಲಗಳ ನಾನೇಕೆ ಕುಗ್ಗಿಸಿಕೊಂಡೆ ಅಗ್ಗವಾಗಿಸಬಾರದಿತ್ತು ಹೀಗೆ ನನ್ನ ನಿಲುವುಗಳನ್ನು ಕಂಬನಿಯಿಂದಲ್ಲವೇ ಕಿಲುಬೆದೆಯ ತೊಳೆಯುವುದು? ನಿಚ್ಚಳ ನೋಡಬೇಕಿನ್ನು ಹರಿದೆಲ್ಲ ಪೊರೆಗಳನ್ನು ಹಸಿದಿರುವೆನೆಂದು ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೇನು ಉಳಿಸಿಕೊಳ್ಳಲೇಬೇಕು ನೀನು ಕೊಟ್ಟ ಒರೆಗಳನ್ನು ಬಿದ್ದಾಗಲೂ ನಾನು ನಾನೇ ಮರೆಯಬಾರದು, ಸಖೀ ಉಳಿಸುವೆ ಉಡುಗಲು ಬಿಡದೆ ಎದೆಯ ಪಿಸುದನಿಗಳನ್ನು =============

ಅನುವಾದ ಸಂಗಾತಿ

ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======

ಸ್ವಾತ್ಮಗತ

ಡಾ.ಕಾಳೇಗೌಡ ನಾಗವಾರ ಅಕ್ಷರಲೋಕದ ಮಹಾತಪಸ್ವಿ ಕೆ.ಶಿವು ಲಕ್ಕಣ್ಣವರ ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..! ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು. ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು. ಅದನ್ನು ಹಾಗೇ […]

ಕಾವ್ಯಯಾನ

ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, […]

Back To Top