ಕಾವ್ಯಯಾನ
ಅರಿವು ಬಿ.ಎಸ್.ಶ್ರೀನಿವಾಸ್ ಹೊತ್ತಾಯಿತು ಗೊತ್ತಾಯಿತು ಪಯಣ ಮುಗಿಯಲಿದೆಯೆಂದು ರವಿಯು ಮುಳುಗಿ ತಾರೆ ಮಿನುಗಿ ಶಶಿ ಆಗಸ ಬೆಳಗುವನೆಂದು ಹೊತ್ತಾಯಿತು ಗೊತ್ತಾಯಿತು ಗಳಿಸಿದ್ದು ಉಳಿಸಿದ್ದು ಚಿಟಿಕೆಯಷ್ಟೇ ಎಂದು ಅರಿಯುವುದು ಅಳಿಸುವುದು ಬೆಟ್ಟದಷ್ಟಿದೆಯೆಂದು ಹೊತ್ತಾಯಿತು ಗೊತ್ತಾಯಿತು ಬಾಳಲೆಕ್ಕಾಚಾರದಲಿ ಒಂದನೊಂದು ಕೂಡಿದರೆ ಎರಡೇ ಆಗಬೇಕಿಲ್ಲವೆಂದು ಶೂನ್ಯವೂ ಮೂಡಬಹುದೆಂದು ಹೊತ್ತಾಯಿತು ಗೊತ್ತಾಯಿತು ಭರದಿ ಹರಿದ ನದಿಯು ಧುಮುಕಿ ಕಡಲ ಸೇರಲಿದೆಯೆಂದು ತನ್ನತನವ ಕಳೆದುಕೊಂಡು ಅಲೆಅಲೆಯಲಿ ಸುಳಿಯುವುದೆಂದು ಹೊತ್ತಾಯಿತು ಗೊತ್ತಾಯಿತು ನನ್ನದೆಂಬುದೆಲ್ಲ ನನ್ನದೇ ಆಗಿರಬೇಕಿಲ್ಲವೆಂದು ಋಣಸಂದಾಯವಾಗದೆ ಬಿಡುಗಡೆಯು ಸಾಧ್ಯವೇ ಇಲ್ಲವೆಂದು ಕಿರುಪರಿಚಯ: ಹವ್ಯಾಸಿ ಬರಹಗಾರರು, […]
‘ಸ್ವಾತ್ಮಗತ’
ಕೆ.ಶಿವು.ಲಕ್ಕಣ್ಣವರ ಅಜರಾಮರವಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಮಹತ್ ಸಾಧನೆ..! ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಜನರು ಕರೆಯುತ್ತಿದ್ದರು. ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಅವರು. ಅವರಿಗೆ ಭಾರತ ಸರ್ಕಾರವು […]