ಮತ್ತೆಂದೂ ಬರೆಯಲಾರೆ
ನಾನಿನ್ನು ಕಾಯಲಾರೆಮುರಿದ ಮೌನದೊಳಗೆ ತೇಲಿಬರುವನಿನ್ನ ಮಾತಿನೊಂದು ಹೆಣಕ್ಕಾಗಿನಾನಿನ್ನು ಕಾಯಲಾರೆಕುಸಿದುಬಿದ್ದ ನಂಬಿಕೆಯೊಂದುಮತ್ತೊಮ್ಮೆ ಚಿಗುರುವ ಚಣಕ್ಕಾಗಿನಾನಿನ್ನು ಕಾಯಲಾರೆ ಎಂದೂ ಅರಳಲಾರೆನೆಂದು ಮುನಿಸಿಕೊಂಡಹೂವು ಬಿರಿಯುವಾ ಕ್ಷಣಕ್ಕಾಗಿನಾನಿನ್ನು ಕಾಯಲಾರೆಸ್ವರ್ಗದ ನಿರೀಕ್ಷೆಯಲಿನಿತ್ಯ ನರಕದ ಬಾಗಿಲು ಕಾಯುವಯಾತನಾದಾಯಕ ಬದುಕಿನಂಗಳದಲ್ಲಿನಾನಿನ್ನು ಕಾಯಲಾರೆಹೊರದಾರಿಗಳೇ ಇರದೀ ನರಕದೆಡೆಗೆನಡೆದು ಬರುವೆಂಬ ನಂಬಿಕೆಯಲ್ಲಿ ನಾನಿನ್ನು ಬರೆಯಲಾರೆಬರೆದದ್ದೆಲ್ಲ ವ್ಯರ್ಥಪ್ರಲಾಪವಾಗಿಲೋಕನಿಂದಿತನಾದವನ ಕಂಡುನಗುವ ಜನರ ಬಾಯಿಗೆ ಅನ್ನವಾಗಿನರಳುವ ಕುನ್ನಿಯಾಗಿ! ಕಾಯಲಾರೆಬೇಡಲಾರೆಮರುಗಲಾರೆಮತ್ತೆಂದೂಬರೆಯಲಾರೆ.
ರಾಜಕಾರಣ
ಪಕ್ಷ ರಾಜಕಾರಣಕ್ಕೊಂದು ಪರ್ಯಾಯ ಗಣೇಶ ಭಟ್, ಶಿರಸಿ ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ…… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ […]