ಯಾತನೆಯ ದಿನಗಳು
ಇವು ಯಾತನೆಯ ದಿನಗಳುರಾಜಕೀಯ ಪರಿಬಾಷೆಯಲ್ಲಿ ಬಣ್ಣಿಸಲಾಗದಂತಹ,ಕವಿತೆಗಳನ್ನಾಗಿಸಲೂ ಸಾದ್ಯವಿರದಂತಹ-ಕತೆಗಳನ್ನಾಗಿಸಲೂ ಸಂಯಮವಿರದಂತಹ ಕಾಲ! ಅದೆಲ್ಲೊ ಆಧಾರ್ ಲಿಂಕ್ ಇರದೆಹಸಿವಿನಿಂದ ಹೆಣ್ಣು ಮಗುವೊಂದು ಸಾಯುತ್ತದೆಅದೆಲ್ಲೋ ಹೆಣ್ಣೊಬ್ಬಳನ್ನುಅತ್ಯಾಚಾರ ಮಾಡಿ ಯೋನಿಗೆ ಸಲಾಕೆ ತೂರಿಸಿ ಕೊಲ್ಲುತ್ತಾರೆಅದೆಲ್ಲೋ ತುಂಬು ಬಸುರಿಯ ಗರ್ಭಸೀಳಿಹುಟ್ಟಬೇಕಿರುವ ಮಗುವ ಕೊಲ್ಲುತ್ತಾರೆ ಹಸಿದವಳೊಬ್ಬಳು ತುಂಡು ರೊಟ್ಟಿಕದ್ದಿದ್ದಕ್ಕೆ ಬೆತ್ತಲು ಮಾಡಿಮೆರವಣಿಗೆಮಾಡುತ್ತಾರೆಅದೆಲ್ಲೊ ಸತ್ತ ದನದ ಚರ್ಮಸುಲಿದ ತಪ್ಪಿಗೆ ದಲಿತ ಯುವಕರನ್ನುಥಳಿಸಲಾಗುತ್ತದೆಅದೆಲ್ಲೋ ಅವರುಗಳನ್ನೆದುರಿಸಿಮಾತಾಡಿದವರನ್ನು ಹತ್ಯೆಗಯ್ಯಲಾಗುತ್ತದೆ ಇವೆಲ್ಲವನ್ನೂ ಅದೆಲ್ಲೋಅಂತಂದುಕೊಂಡುಮೌನಕ್ಕೆ ಮುಗಿಬಿದ್ದ ನನ್ನಷಂಡತನಕ್ಕೆ ಸಾಕ್ಷಿಯಾಗಿಹೊಟ್ಟೆತುಂಬ ಉಂಡು ತೇಗುತ್ತೇನೆ ಗೆಳೆಯರೊಂದಿಗೆ ಹೊಸದೊಂದುವಾದವಿವಾದಕ್ಕಾಗಿ ಹೊಸಆಯುಧಗಳನ್ನು ಅನ್ವೇಷಿಸಲುಮುಂದಾಗುತ್ತೇನೆ,ಸವಕಲಾದ ಅವೇ ಹಳೆಯ ಶಬುದಗಳಮತ್ತೆ ಮಸೆದು ಮಚ್ಚಾಗಿಸಿಹಲ್ಲು […]
ಪ್ರೀತಿಯೆನಲು ಹಾಸ್ಯವೇ
ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ […]
ನನ್ನೊಳು ಸುನಾಮಿಯೊ
ನನ್ನ ಕೊಳಲು ಚಂದ್ರಪ್ರಭ ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ ನೀನು ಕೊಳಲ ಮಾಧುರ್ಯ.. ಇಂಪು ಸೊಂಪಿನ ಅದೇ ಮೋಡಿ ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ ಅಲುಗುವುದೇಕೆ ಅಸ್ತಿತ್ವದ ಸೌಧ..! ಮತ್ತದೇ ಗಾಳಿ ಭೋರ್ಗರೆವ ಸುನಾಮಿಯಲಿ ಬೆರೆವಾಗ ನನ್ನೊಳು ಸುನಾಮಿಯೊ ಸುನಾಮಿಯೊಳು ನಾನೊ..!! ನಿನ್ನ ಹೊರತು ಸಾಗದ ಉಸಿರು.. ಅಳವಿಗೇ ಸಿಕ್ಕದ ನಿನ್ನ ಗಾಳಿ ಎಂದವರಾರು..?