ನನ್ನೊಳು ಸುನಾಮಿಯೊ

ನನ್ನ ಕೊಳಲು

ಚಂದ್ರಪ್ರಭ

ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ
ನೀನು ಕೊಳಲ ಮಾಧುರ್ಯ..
ಇಂಪು ಸೊಂಪಿನ ಅದೇ ಮೋಡಿ
ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ
ಅಲುಗುವುದೇಕೆ ಅಸ್ತಿತ್ವದ ಸೌಧ..!
ಮತ್ತದೇ ಗಾಳಿ ಭೋರ್ಗರೆವ
ಸುನಾಮಿಯಲಿ ಬೆರೆವಾಗ
ನನ್ನೊಳು ಸುನಾಮಿಯೊ
ಸುನಾಮಿಯೊಳು ನಾನೊ..!!

ನಿನ್ನ ಹೊರತು
ಸಾಗದ ಉಸಿರು..
ಅಳವಿಗೇ ಸಿಕ್ಕದ ನಿನ್ನ
ಗಾಳಿ ಎಂದವರಾರು..?


Leave a Reply

Back To Top