ದಾನದೊಡನೆ ಸಿಗುವ ಸಾಧನಗಳನ್ನು ದಾನಕೊಟ್ಟವರ ಯೋಗ್ಯತೆ ಅಳೆಯಲು ಮಾಪಕವಾಗಿ ಬಳಸುವ ಮಂದಿಯೇ ಈಗ ಹೆಚ್ಚು. ಹೇಗೋ ಬಂದು ಸೇರಿಬಿಟ್ಟ ತಮಗೆ ಇಷ್ಟವಾಗದ ದಾನದ ವಸ್ತುವನ್ನು ಹಾಗೆಯೇ ಮತ್ತೊಂದು ನೆಪ ಮಾಡಿ ಮತ್ತೊಬ್ಬರಿಗೆ ದಾಟಿಸುವುದು ಈಗಿನವರ ಚಾಣಾಕ್ಷತನ. ಆದ್ದರಿಂದಲೇ ನಾವು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕುವುದು’
ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.
ಅಂಕಣ ಬರಹ ತೊರೆಯ ಹರಿವು ಅಕ್ಷಯ ವಸ್ತ್ರವೂ.. ಅಕ್ಷೋಹಿಣಿ ಸೈನ್ಯವೂ… ತಂದೆ ಕೊಡಿಸೋ ಸೀರೆ; ಮದುವೆ ಆಗೋವರೆಗೆ. ತಾಯಿ ಕೊಡಿಸೋ ಸೀರೆ; ತಾಯಿ ಆಗೋವರೆಗೆ, ಬಂಧು ಕೊಡಿಸೋ ಸೀರೇ ಬಣ್ಣ ಹೋಗೋವರೆಗೆ, ಗಂಡಾ ಕೊಡಿಸೋ ಸೀರೇೇೇ… ಕುಂಕುಮ ಇರುವವರೆಗೆ, ಹೆಣ್ಣಿನ ಜನುಮ ಕಳೆಯುವವರೆಗೆ, ಮಣ್ಣಿನ ಮಮತೆ ಮರೆಯೋವರೆಗೆ…’ ಹೆಣ್ಣು ಮನಸ್ಸುಗಳನ್ನು ಕಲಕಿ ಬಿಡುವ ಅಣ್ಣಾವ್ರ ದನಿಯಲ್ಲಿ ಬಂದ ಈ ಹಾಡಿಗಿರುವ ವೈಟೇಜೇ ಬೇರೆ… ಸ್ತ್ರೀವಾದ, ಸ್ವಾಭಿಮಾನ ಮುಂತಾದವೆಲ್ಲಾ ಅರ್ಥವಾಗದ ಮುಗ್ಧೆಯರಿಂದ […]
‘ಕುರಿಗಳು ಸಾರ್ ಕುರಿಗಳು..’ ಎಂಬಂತಹ ನಾವು ನೀವು ಅವರು ಇವರು…ತಲೆತಗ್ಗಿಸಿಯೇ ಮುನ್ನಡೆಯುವವರಾಗಿರುವುದರಿಂದ ಎದುರಿರುವ ಸತ್ಯ ಕಾಣುವುದು ಹೇಗೆ? ಮರೆ ಮಾಚಿದನ್ನೇ ಮುಂದುವರೆಸಿಕೊಂಡು ಹೋಗುವುದರಲ್ಲಿ ಮಾತ್ರ ಕ್ರಿಯಾಶೀಲರಾಗಿರುತ್ತೇವೆ.
ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ. ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.
ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.
ಒಬ್ಬ ವೃದ್ಧರು ಹಣ್ಣಿನ ಸಸಿ ನೆಡುವಾಗ, ‘ಇದು ಮರವಾಗಿ ಫಲ ಬಿಡುವಾಗ ತಿನ್ನಲು ನೀವೇ ಇರುವುದಿಲ್ಲವಲ್ಲ ಮತ್ತೇಕೆ ಶ್ರಮ?!’ ಎಂದು ಕೇಳಿದವರಿಗೆ, ‘ನಾನು ಫಲ ತಿಂದ ಮರಗಳನ್ನೂ ಸಹ ಯಾರೋ ಹಿರಿಯರು ನೆಟ್ಟಿದ್ದು’ ಎಂದು ಉತ್ತರಿಸಿದ ಆ ಹಿರಿಯರ ಸಂಯಮದ ತಿಳುವಳಿಕೆ ನಮ್ಮದಾಗಬೇಕು. ಶ್ರದ್ಧೆ ಸಂಯಮವು ಬಾಳಿನ ಸಮತೋಲನಕ್ಕೆ ಮಾರ್ಗವಾಗಬೇಕು… ತಾಳ್ಮೆ ಸಕಾರಾತ್ಮಕ ಬೆಳಕಾಗಿ ದಾರಿ ತೋರಬೇಕು.
ಜನರ ನಡುವೆಯೇ ಇರುವ, ಅವರಿಂದ ಉಪಕೃತರಾಗುವ ಅವರಿಗೂ ಉಪಕರಿಸುವ ಶಾಸಕಾಂಗ ರಚನಕಾರರಾದ ಮಂತ್ರಿ- ಮಹೋದಯರು ಜನಪ್ರಿಯತೆಯ ಹಿಂದೆ ಬಿದ್ದರೆ ಮತದಾನ ಪ್ರಕ್ರಿಯೆಯಲ್ಲಿ ಅವರಿಗೆ ಅಗತ್ಯ ಇರಬಹುದು ಎಂದು ಒಂದು ಪಕ್ಷ ಒಪ್ಪಬಹುದೇನೋ.. ಆದರೆ ಶಾಸನಗಳನ್ನು ನ್ಯಾಯವಾಗಿ ಜಾರಿಗೊಳಿಸಿ ಪಾಲಿಸಬೇಕಾದ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಹೀಗೆ ಜನಪ್ರಿಯತೆಯ ಬೆನ್ನು ಹಿಡಿದರೆ, ಅವರಿಂದ ನಿಷ್ಪಕ್ಷಪಾತ ಸೇವೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವೇ?
ಪರೋಪಕಾರಿ ಚೇತನವಾಗಿರುವ ಕೆಲವರಿಗೆ ಅವರಂತಹ ಸುಬುದ್ಧಿಯುಳ್ಳ ಜನರೇ ನೆರೆಮನೆಯವರಾಗಿ ಸಿಗುತ್ತಾರೆಂಬ ವಿಶ್ವಾಸಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅಂಥ ಭರವಸೆ ಇಟ್ಟುಕೊಳ್ಳುವ ತಪ್ಪನ್ನು ಎಂದಿಗೂ ಯಾರೂ ಮಾಡಬಾರದು ಎಂದು ಉಪದೇಶ ಮಾಡೋರಿದ್ದಾರೆ
ಮಹಾತ್ಮ ಗಾಂಧಿ, ‘ಗ್ರಾಹಕರನ್ನು ದೇವರು’ ಎಂದರು. ಆದರೆ, ದೇವರನ್ನೇ ಜಾಹೀರಾತಿಗೆ ಬಂಡವಾಳ ಮಾಡಿಕೊಂಡವರು ನಾವು. ಇಂತಲ್ಲಿ ಇಂತಹ ಪೂಜಾ ಕೈಂಕರ್ಯವೋ, ಸೇವೆಯೋ ಕೈಗೊಂಡರೆ ಇಂತಹದ್ದು ಸಿದ್ಧಿಸುತ್ತದೆ. ನಮ್ಮ ದೈವದ ಸ್ಥಳ ಮಹತ್ವ ಇದು, ನಮ್ಮ ದೈವದ ಶಕ್ತಿ ಇಂತಿಥದ್ದು… ಇದೆಲ್ಲಾ ಜಾಹೀರಾತು ತಾನೇ!? ಹೀಗೆ ದೇವಾನುದೇವತೆಗಳೇ ಜಾಹೀರಾತಿಗೆ ಬಿಕರಿಯಾಗುವಾಗ ಜನಸಾಮಾನ್ಯರ ಪಾಡೇನು?