Category: ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು […]

ಗಜ಼ಲ್

ಗಜ಼ಲ್ ಎ. ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ?ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ?ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ […]

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ […]

ಗಜಲ್

ಪರಪಂಚದ ಕಂಬನಿಗೆ ನನ ಹೃದಯವೆ ತಂಗುದಾಣವಾಗಿದೆ
ನೀನೊಮ್ಮೆ ಆಲಂಗಿಸಿ ಬಿಸಿಯುಸಿರಿನಲಿ ಸಂತೈಸಬಾರದೆ..

ಗಜ಼ಲ್

ಮನಸ್ಸಿದ್ದರೆ ಹರಿದು ಹೋದ ಬಾಳನ್ನು ಮತ್ತೆ ಹೊಲೆದುಕೊಳ್ಳಬಹುದು
ಕೆಟ್ಟು ನಿಂತ ಯಂತ್ರವೂ ದಡ ಸೇರಿಸಬಹುದೆಂದು ನಂಬಿಕೆ ಇಟ್ಟಿದ್ದೇವೆ

ಗಝಲ್

ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ […]

ಗಜಲ್

ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************

ಗಜಲ್

ಕೊಂಡು ತಂದ ಸೂಜಿ ಚುಚ್ಚುತ್ತದೆಂದು ಮಾಲಿಗೂ ಗೊತ್ತು
ಪುಷ್ಪ ಪಲ್ಲಂಗದೊಳಗಿಟ್ಟು ಮಲಗು ಮಲಗು ಎಂದೆನ್ನುತ್ತಾರೆ ನೀನು ಸುಮ್ಮನಿರಬೇಕು

ಸೇಹ ಗಜಲ್

ವ್ಯಾಪಾರವು ಬೇಕು ಕೊಡು-ಕೊಳ್ಳುವಿಕೆಯ ಬದುಕಿಗೆ
ವ್ಯವಹಾರದಿ ತಕ್ಕಡಿ ಹಿಡಿದು ಸೆಳೆಯುವುದು ಪ್ರೀತಿಯೆ…

Back To Top