ಗಜಲ್
ಗಜಲ್ ಅಶೋಕ ಬಾಬು ಟೇಕಲ್. ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲುದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ […]
ಗಜಲ್
ಗಜಲ್ ಅರುಣಾ ನರೇಂದ್ರ ಮತ್ತೇರಿಸುವ ಮಧು ಇಂದು ನೆತ್ತರಿನ ಬಣ್ಣವಾಯಿತೇಕೆತುಟಿ ಸೋಕುವ ಮುಂಚೆ ಬಟ್ಟಲು ಉರುಳಿ ಹೋಯಿತೇಕೆ ಹೃದಯ ಒಡೆದು ಚೂರಾದರಾಗಲಿ ಮಧುಶಾಲೆ ಕೈ ಮಾಡಿ ಕರೆದಿದೆತುಂಬಿ ತುಳುಕುವ ಹೂಜಿ ಎದುರಿಗಿದೆ ಮುಖದ ನಗು ಮಾಯವಾಯಿತೇಕೆ ಯಾರೇನೇ ಅಡಿಕೊಳ್ಳಲಿ ಬಿಡು ನೋವು ಮರೆಸುವ ಔಷಧಿ ಜೊತೆಗಿದೆ ಗಾಲಿಬ್ಸಾಕಿ ಸುರಿದು ಕೊಟ್ಟ ಸಂಜೀವಿನಿ ಕೈ ಸೇರುವ ಮುನ್ನ ನೆಲದ ಪಾಲಾಯಿತೇಕೆ ಎಲ್ಲರೂ ನನ್ನ ನೋಡಿ ದೂರ ಸರಿಯುತ್ತಾರೆ ಸಜನಿ ಎದೆಯ ಬೇನೆ ನಿನಗಷ್ಟೇ ಗೊತ್ತುದರ್ದಿಗೆ ಮುಲಾಮು ಸವರಿ ಕೈಗಿತ್ತ […]
ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************
ಗಝಲ್
ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ […]
ಗಜಲ್
ಗಜಲ್ ಅರುಣಾ ನರೇಂದ್ರ ನೀ ಹಚ್ಚಿಕೊಳ್ಳುವ ಅತ್ತರಿನದೆ ವಾಸನೆ ಬರುತಿದೆ ಎಲ್ಲಿರುವಿಮೋಹಬ್ಬತ್ತಿನ ಈ ಹಾಡಲ್ಲಿ ನಿನ್ನದೇ ಧ್ವನಿ ಕೇಳುತಿದೆ ಎಲ್ಲಿರುವಿ ಮುಂಜಾನೆಯ ಮಂಜಿನ ಹನಿಗೂ ಕಣ್ಣ ಕನಸುಗಳಿವೆಆಗಸದ ಹಾಳೆಯಲಿ ನೀ ಬರೆದ ಚಿತ್ರ ಕಾಣುತಿದೆ ಎಲ್ಲಿರುವಿ ಮುಂಗುರುಳ ತೀಡುವ ತಂಗಾಳಿ ಇಂದೇಕೋ ಹಠ ಮಾಡುತಿದೆಇಲ್ಲಿ ನೀ ನಡೆದಾಡಿದ ಹೆಜ್ಜೆಗಳ ಗುರುತಿದೆ ಎಲ್ಲಿರುವಿ ಧುಮ್ಮಿಕ್ಕುವ ಪ್ರವಾಹಕ್ಕೆ ಗೋಡೆ ಕಟ್ಟಲಾಗುತ್ತಿಲ್ಲನಿನ್ನ ನಗೆಯ ಅಲೆ ಎದೆಗೆ ಅಪ್ಪುತಿದೆ ಎಲ್ಲಿರುವಿ ಎದುರಿನಲಿ ಸಿಕ್ಕು ಬಿಡು ಒಮ್ಮೆ ಹೀಗೇಕೆ ಹಿಂಬಾಲಿಸುತ್ತಿಅರುಣಾಳ ಅಂತರಾತ್ಮ ನಿನ್ನನ್ನೇ ಧ್ಯಾನಿಸುತಿದೆ […]
ಗಜಲ್
ಗಜಲ್ ರತ್ನರಾಯ ಮಲ್ಲ ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆಮುಖಂಡರುಗಳ ಓಡಾಟವು ಹೆಚ್ಚಾಗುತಿದೆ ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತುಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರುಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ ಊರು ಉದ್ಧಾರದ ಮಾತುಗಳು ಕೇಳುತಿವೆದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ ******************************
ಗಜಲ್
ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ […]
ಗಜಲ್
ಗಜಲ್ ವಿನುತಾ ಹಂಚಿನಮನಿ ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ ಇಳಿವಯಸ್ಸಿನಲಿ ಪರಾಧೀನತೆ […]
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ […]
ಗಜಲ್
ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು […]