Category: ವಾರದ ಕವಿತೆ

ಗಝಲ್

ಗಝಲ್ ಪ್ರೇಮಾ ಹೂಗಾರ ಬೀದರ ನೀ ಇಲ್ಲದೆಯು ನಾ ಬದುಕಬಲ್ಲೆ ಈ ಗಜಲ್ ನ ಧ್ಯಾನದಲಿಸಣ್ಣಗೆ ಮೌನದಿ ಕುದಿಯುವ ಎದೆಯ ದನಿಯ ರಾಗದಲಿ ಕುಸಿದು ಬೀಳಿಸುವ ಆ ಮಾತು,ನೋಟ್,ಸ್ಪರ್ಷ ಮರೆತಿಲ್ಲಗುಟುಕುವ ಚೇತನವೇ ಆ ಸೂರ್ಯನ ಸಾವು ಈ ಜೀವದಲಿ ಒಂಟಿತನದ ಹೆಜ್ಜೆಯೊಳಗೆ ಬಿಕ್ಕಳಿಕೆ ಮಲಗುತ್ತವೆ ಎನ್ನಬೇಡಎಂದೂ ಬತ್ತದ ನಿನ್ನ ಪ್ರೀತಿಯ ಜೋಳಿಗೆ ಇದೆ ನನ್ನ ಮೌನದಲಿ ಉರಿಯುತ್ತಿರುವ ದೀಪ ಆರುವ ಸತ್ಯ ಎಂದೋ ಅರಿತವಳು ನಾಕಲ್ಪನೆಗೂ ಮೀರಿ ಕತ್ತಲೆ ಜೊತೆ ನೀಡಿತು ನೀನಿಲ್ಲದ ಈ ಭವದಲಿ ನನ್ನೊಳಗಿನ […]

ವಾರದ ಕವಿತೆ

ಮಕ್ಕಳಹಾಡು ದೂರವಿರಲಾಗದ ಹಾಡು ಶ್ರೀದೇವಿ ಕೆರೆಮನೆ ಶಾಲೆಗೆ ಬರಲೇ ಬೇಕು ಅಂತಕರೆದರೆ ಹೋಗದೇ ಏನು ಮಾಡೋದುದೂರದೂರ ಕುಳಿತುಕೋ ಅಂದರೆಒಬ್ಬಳೇ ಹೇಗೆ ಕೂರೋದು ಅಕ್ಕಪಕ್ಕ ಗೆಳತಿಯರಿಲ್ಲ ಅಂದ್ರೆಅಕ್ಕೋರು ಹೇಳೋ ಪಾಠ ತಿಳಿಯೋದು?ಅದು ಹೇಗೆ ನಾವು ಗೆಳತಿಯರೇ ಇದ್ರೆಮಾತಾಡುವಾಗಲೂ ದೂರ ನಿಲ್ಲೋದು ಮುಖಕ್ಕೆ ಮಾಸ್ಕು ಹಾಕ್ಕೋಂಡಿದ್ರೆಗೊತ್ತಾಗಲ್ಲ ರಾಣಿ ನಗೋದುಮೂಗು ಬಾಯಿ ಮುಚ್ಕೊಂಡಿದ್ರೆಶುದ್ಧಗಾಳಿ ಹೇಗೆ ಸಿಗೋದು ಅಣ್ಣನಿಗೆ ಪರೀಕ್ಷೆಯಂತೆ ಮುಂದಿನವಾರಹೆದರಿಕೆಲ್ಲಿ ಓದಿದ್ದು ಹೇಗೆ ನೆನಪಿರೋದುಪರೀಕ್ಷೆ ಬರೆಯೋಕೆ ಭಯ ಇಲ್ಲವಂತೆಬರೋದಿಲ್ಲ ಮಾಸ್ಕು ಹಾಕಿ ಉಸಿರಾಡೋದು ಶಾಲೆಗೆ ಹೋಗು ಅಂತ ಬೈಯ್ತಿದ್ದ ಅಮ್ಮಂಗೆಬೇಡವಂತೆ ಶಾಲೆ […]

ವಾರದ ಕವಿತೆ

ವಾರದ ಕವಿತೆ ಮೋಹ ಮಾಲತಿ ಶಶಿಧರ್ ಅಕಸ್ಮಾತಾಗಿ ಸಿಕ್ಕಿಬಿದ್ದೆಮೋಹದ ತೆಕ್ಕೆಯೊಳಗೆಮೋಹನರಾಗವ ಆಲಿಸುತಅದರ ಜಾಡು ಹಿಡಿದು ಹೊರಟಿರುವೆಮೂಲ ಹುಡುಕುತ್ತ ನಮ್ಮೂರಿನಾಚಿನ ಗುಡ್ಡದ ಬಂಡೆಯಮೇಲೆ ಯಾವತ್ತೋ ಗೀಚಿದ್ದನೆಚ್ಚಿನ ನಟನ ಹೆಸರು, ಅಲ್ಲೇಮುರಿದು ಬಿದ್ದ ಪಾಳು ಮಂಟಪನೂರು ಕನಸು ಅದರೊಳಗೆಸುತ್ತಲೂ ಘಮ್ಮೆನ್ನುವ ಹೂಗಳು ಇವೆಲ್ಲವಕ್ಕೂ ಸರಿದೂಗುವನೀನು ಕಣ್ಮುಂದೆ ನಿಂತಾಗಬಾಯಿ ಪೂರ್ಣವಾಗಿ ಒಣಗಿಮೈ ಬೆವರಿನಿಂದ ತೊಯ್ಯುತ್ತದೆತೊಟ್ಟಿಕ್ಕುವ ಬೆವರ ಹನಿಗೆನನ್ನೊಳಗಿನ ಬಿಂಕಕ್ಕೊಂದುಹೊಸ ನಾಮಕರಣ ಮಾಡುವಹಂಬಲ.. ಮೆಲ್ಲಗೆ ಕಾಲು ಜಾರುವೆ ಹೊಸಮೋಹದ ತೆಕ್ಕೆಗೆ ನನ್ನೊಳಗಿನಸೊಕ್ಕನ್ನೆಲ್ಲ ಒಂದೆಡೆ ಅಡಗಿಸಿನಿನ್ನ ನಸೆಯ ನೋಟ ಅಂಕುಡೊಂಕು ಹಾದಿ ತುಂಬಾಓಡಾಡುವಾಗ ಕಣ್ಮುಚ್ಚಿಕಳೆದುಹೋಗುವೆ. […]

ವಾರದ ಕವಿತೆ

ಕವಿತೆ ಹಳೆಯ ಮನೆ ಮೇಗರವಳ್ಳಿ ರಮೇಶ್ ಅದೊ೦ದು ವೈಭವದ ಹಳೆಯಕಾಲದಹೆ೦ಚಿನ ಮಹಡಿ ಮನೆ. ನಿತ್ಯ ದೇವರ ಪೂಜೆ, ಹಬ್ಬ ಹರಿದಿನಗ೦ಟೆ ಜಾಗಟೆ ಶ೦ಖ.ಮದುವೆ ಮು೦ಜಿ ನಾಮಕರಣ ಹುಟ್ಟಿದ ಹಬ್ಬಕಿವಿ ತು೦ಬುವ ನಾದಸ್ವರ.ನೀರೆಯರ ಸ೦ಭ್ರಮದ ಸೀರೆಯ ಸರಬರಬಳೆಗಳ ಘಲ ಘಲ.ತೂಗುವ ತೊಟಿಲುಗಳಕ೦ದಮ್ಮಗಳ ಕಿಲ ಕಿಲಮನೆ ಮನಗಳ ತು೦ಬಿ ಹರಿವಜೋಗುಳದ ಮಾಧುರ್ಯ.ಗ೦ಡಸರ ಗತ್ತು, ಗೈರತ್ತುಜಗಲಿಯ ಮೇಲೆ ಊರ ಪ್ರಮುಖರೊಡನೆಹಿರಿಯರ ಒಡ್ಡೋಲಗ.ಮಹಡಿಯ ಹಜಾರದಲ್ಲಿ ಇಸ್ಪೀಟು , ಸಿಗರೇಟು ಬೀಡಿಅಡಿಕೆ ಚಪ್ಪರಕೊಟ್ಟಿಗೆಯ ತು೦ಬ ದನ ಕರ.ಹಜಾರದಲ್ಲಿ ಪೇರಿಸಿಟ್ಟ ಅಡಿಕೆ ಮೂಟೆಪಣತ ತು೦ಬಿದ ಭತ್ತಉಪ್ಪಿನ […]

ವಾರದ ಕವಿತೆ

ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… […]

ವಾರದ ಕವಿತೆ

ಕಿಟಕಿ -ಗೋಡೆ ವಾರದ ಕವಿತೆ(ಪ್ರತಿ ಶುಕ್ರವಾರ) ವಸುಂಧರಾ ಕದಲೂರು ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ […]

ವಾರದ ಕವಿತೆ

ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ […]

ವಾರದ ಕವಿತೆ

ಮುಕ್ತತೆಯ ಹಂಬಲ ಪೂರ್ಣಿಮಾ ಸುರೇಶ್ ಹೊರಟಿದ್ದೇನೆ ಎಂದಿನಂತೆಬರಿಗಾಲಿನಲ್ಲಿನಿನ್ನ ಪದತಳದ ಧೂಳು ತಾಕಿದವರಹುಡುಕಲಿಕ್ಕೆ ಕಣ್ಣಲ್ಲಿ ಮುಸುಕು ಹಾಕಿ ಕೂತಿರುವಮೃದು ಹೂವಿನಂತಹಮುದ್ದು ಮೊಲದಂತಹ ಸುಕೋಮಲಪ್ರೀತಿ ಗಂಧ ಹಿಡಿದು ತುಸುತುಸು ತೆರೆದ ಕದಗುಸುಗುಸು ಮಾತಿನಲಿಆಟವಾಡುತ್ತಿದೆಹದಬೆಂಕಿ ಹೊಗೆಯಧೂಪ ಪರಿಮಳಕೆ ಎಲ್ಲವೂ ಕಾದಷ್ಟುಬೇಯುವಷ್ಟುಘಮಘಮಿಸಿಸುಡುವಷ್ಟು ಬತ್ತಿ ಮಹಾಪೂಜೆ ಕಟ್ಟುಗಳ ಬಿಚ್ಚಿ ಕಡಮೆ ದಾಟಿಜಗಳವಾಡಬೇಕು ಅನಿಸುತ್ತದೆ ದೇವರಾದರೆ ಏನಂತೆ.. ಶಿಲೆಯೊಡಲಲ್ಲೇ ಬೆಂಕಿದೇವರಾಗಿಸಿದ ಮೊಗಗಳಲಿಮೌನ ಹೀರಿ ನಗು.. ಗರ್ಭಗುಡಿಯ ಹೊರಗೆಆವರಣದಲಿಭಕ್ತರ ಪ್ರಾರ್ಥನೆಯ ಕಂಬನಿಹೆಪ್ಪುಗಟ್ಟಿದೆ ಇದು ಶಬರಿತನ ಪಾದಗಳು ನಿಶ್ಯಕ್ತವಾಗಿದೆಮಹಾಶೂನ್ಯತೆ ಆವರಿಸಿದೆನನ್ನನು ಮಂಜಿನಂತಹ ಮರೆವಿಗೆಸರಿಸಿಬಿಡು ಬೆಂಕಿಯನ್ನು ಒಡಲುಗೊಂಡವನೇಮುಕ್ತಳಾಗಬೇಕು ನಿನ್ನಿಂದ.

ವಾರದ ಕವಿತೆ

ಹೆಸರಿಲ್ಲದ ಕವಿತೆ ಸ್ಮಿತಾಅಮೃತರಾಜ್. ಸಂಪಾಜೆ ಹೆಸರಿಲ್ಲದ ಕವಿತೆ ನಾನು ಹಠಕ್ಕೆ ಬಿದ್ದವಳಂತೆ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ ಹಾಗೇ ಬಂದು ಹೀಗೇ ಹೋದ ಕವಿತೆಯನ್ನೊಮ್ಮೆ ಎಳೆದು ತಂದೇ ತೀರುವೆನೆಂಬಂತೆ. ಗೊತ್ತಿದೆ, ಬಲವಾದ ಕಾರಣವಿಲ್ಲದೆ ಕವಿತೆ ಕಾಣೆಯಾಗುವುದಿಲ್ಲ. ಅಥವಾ ಮತ್ಯಾವುದೋ ಗಳಿಗೆ ಸದ್ದಿಲ್ಲದೇ ಪಕ್ಕಕ್ಕೆ ಬಂದು ಆತುಕೊಳ್ಳುವ ಅದರ ಆತುರಕ್ಕೆ ಅವಸರ ಸಲ್ಲವೆಂಬುದೂ.. ಕಾಡಿದ್ದು ಒತ್ತರಿಸಿ ಬಂದು ಯಾವುದೋ ಒಂದು ಕ್ಷಣದಲ್ಲಿ ಪದಗಳಾಗಿದ್ದಕ್ಕೆ.. ನಿನಗೆ ಪದ್ಯ ಹೊಸೆಯುವುದೊಂದೇ ಕೆಲಸವಾ? ನಮಗೆ ನೋಡು ಓದೋಕ್ಕಾದರೂ ಪುರುಸೊತ್ತು ಬೇಡವಾ? ಪಾಪ! ಹೌದಲ್ವಾ! ಅವರ […]

Back To Top