ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಕ್ತತೆಯ ಹಂಬಲ

ಪೂರ್ಣಿಮಾ ಸುರೇಶ್

ಹೊರಟಿದ್ದೇನೆ ಎಂದಿನಂತೆ
ಬರಿಗಾಲಿನಲ್ಲಿ
ನಿನ್ನ ಪದತಳದ ಧೂಳು ತಾಕಿದವರ
ಹುಡುಕಲಿಕ್ಕೆ

ಕಣ್ಣಲ್ಲಿ ಮುಸುಕು ಹಾಕಿ ಕೂತಿರುವ
ಮೃದು ಹೂವಿನಂತಹ
ಮುದ್ದು ಮೊಲದಂತಹ ಸುಕೋಮಲ
ಪ್ರೀತಿ ಗಂಧ ಹಿಡಿದು

ತುಸುತುಸು ತೆರೆದ ಕದ
ಗುಸುಗುಸು ಮಾತಿನಲಿ
ಆಟವಾಡುತ್ತಿದೆ
ಹದಬೆಂಕಿ ಹೊಗೆಯ
ಧೂಪ ಪರಿಮಳಕೆ

ಎಲ್ಲವೂ ಕಾದಷ್ಟು
ಬೇಯುವಷ್ಟು
ಘಮಘಮಿಸಿ
ಸುಡುವಷ್ಟು ಬತ್ತಿ

ಮಹಾಪೂಜೆ

ಕಟ್ಟುಗಳ ಬಿಚ್ಚಿ ಕಡಮೆ ದಾಟಿ
ಜಗಳವಾಡಬೇಕು ಅನಿಸುತ್ತದೆ

ದೇವರಾದರೆ ಏನಂತೆ..

ಶಿಲೆಯೊಡಲಲ್ಲೇ ಬೆಂಕಿ
ದೇವರಾಗಿಸಿದ ಮೊಗಗಳಲಿ
ಮೌನ ಹೀರಿ ನಗು..

ಗರ್ಭಗುಡಿಯ ಹೊರಗೆ
ಆವರಣದಲಿ
ಭಕ್ತರ ಪ್ರಾರ್ಥನೆಯ ಕಂಬನಿ
ಹೆಪ್ಪುಗಟ್ಟಿದೆ

ಇದು ಶಬರಿತನ

ಪಾದಗಳು ನಿಶ್ಯಕ್ತವಾಗಿದೆ
ಮಹಾಶೂನ್ಯತೆ ಆವರಿಸಿದೆ
ನನ್ನನು ಮಂಜಿನಂತಹ ಮರೆವಿಗೆ
ಸರಿಸಿಬಿಡು

ಬೆಂಕಿಯನ್ನು ಒಡಲುಗೊಂಡವನೇ
ಮುಕ್ತಳಾಗಬೇಕು ನಿನ್ನಿಂದ.

About The Author

2 thoughts on “ವಾರದ ಕವಿತೆ”

  1. Nagaraj Harapanahalli

    ಮುಕ್ತತತೆಯ‌ ಹಂಬಲ ಪ್ರತಿ ಜೀವರಾಶಿಯ ಬಯಕೆ. ‌ ೧೨ನೇ ಶತಮಾನದ ಅಕ್ಕ ಮಹಾದೇವಿಯ ಹುಡುಕಾಟ ನಿಮ್ಮ ಕವಿತೆಯಲ್ಲಿ ಕಾಣಿಸಿತು. ಒಳಗೆ ಸುಳಿವ ಆತ್ಮ ಗಂಡೂ ಅಲ್ಲ,ಹೆಣ್ಣು ಅಲ್ಲ ಎನ್ನುತ್ತಾರೆ ವಚನಕಾರರು.
    ಅಗ್ನಿ ದಿವ್ಯದ ಮುಕ್ತತೆ ಅಥವಾ ಬಿಡುಗಡೆಯ ಹಂಬಲಕೆ ತುಡಿಯುವುದು ಕವಿತೆ ಬಯಕೆ.
    ಇಂತಹ ಬಿಡುಗಡೆ ,ಮುಕ್ತತತೆ ಬಯಸಿದ ಬಹುದೊಡ್ಡ ಕಾವ್ಯ ಪರಂಪರೆ ನಮ್ಮಲ್ಲಿದೆ.‌
    ಕವಿತೆ ನಡಿಗೆ ಚಂದವಿದೆ.‌ಬಂಧವೂ ಸಹ…

Leave a Reply

You cannot copy content of this page

Scroll to Top